ಕಾಂಗ್ರೇಸ್ ಯುವರಾಜನ ಆಗಮನದ ನಿರೀಕ್ಷೆಯಲ್ಲಿ ಉ.ಕ.ಜಿಲ್ಲೆ

Source: sonews | By Staff Correspondent | Published on 25th April 2018, 6:52 PM | Coastal News | State News | Don't Miss |


•     ಭಟ್ಕಳದಲ್ಲಿ ಬೃಹತ್ ಸಮಾವೇಶ
•    30ಸಾವಿರಕ್ಕೂ ಅಧಿಕ ಜನರು ಭಾಗವಹಿಸು ನಿರೀಕ್ಷೆ
•    ಭಟ್ಕಳದಲ್ಲೇ ಬೀಡುಬಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವಾ


ಭಟ್ಕಳ: ಎ.12ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ತೆರೆಬಿದ್ದಿದ್ದು ಒಂದರೆಡದು ದಿನದಲ್ಲಿ ನಾಮಪತ್ರವನ್ನು ಹಿಂತೆಗೆದುಕೊಳ್ಳುವ ಪ್ರಕ್ರೆಯೆ ಯೊಂದಿಗೆ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಮತದಾರರಿಗೆ ಲಭ್ಯವಾಗಿ ಅಸಲಿ ಫೈಟ್ ಆಗಷ್ಟೆ ಆರಂಭಗೊಳ್ಳಲಿದೆ.

ಈಗಾಗಲೆ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ರೌಂಡ್ ಜಿಲ್ಲಾದರ್ಶನ ಪೂರ್ಣಗೊಳಿಸಿದ್ದು ಇಂದು ಎ.26ರಂದು ಕಾಂಗ್ರೇಸ್ ಯುವರಾಜ ರಾಹುಲ್ ಗಾಂಧಿಯವರು ಜಿಲ್ಲೆಗೆ ಆಗಮಿಸಲಿದ್ದಾರೆ. ದೇಶದ ಭಾವಿ ಪ್ರಧಾನಿ ಎಂದೇ ಬಿಂಬಿಸಲ್ಪಟ್ಟಿರುವ ಯುವರಾಜನನ್ನು ಕಾಣಲು ಜಿಲ್ಲೆಯ ಜನತೆ ಕಾತುರರಾಗಿದ್ದಾರೆ. 

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ಈಗಾಗಲೆ ಬಿಜೆಪಿ ಮತ್ತು ಕಾಂಗ್ರೇಸ್ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದು ಹಾಲಿಶಾಸಕರ ಅಭಿವೃದ್ಧಿಯ ಅಲೆ ಎಲ್ಲೆಡೆ ತನ್ನ ಪೌರುಷ ತೋರಿಸತೊಡಗಿದೆ. ಮತ್ತೊಮ್ಮೆ ಅಭಿವೃದ್ಧಿಗೆ ತಮ್ಮ ಮತ ಎಂದೂ ಮತದಾರರು ಘೋಷಿಸಿಕೊಂಡಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಬಾರಿಗೆ ಇಂದು ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿದ್ದು ಯುವರಾಜನ ಆಗಮದಿಂದ ಜಿಲ್ಲಾ ಕಾಂಗ್ರೇಸ್‍ಗೆ ಆನೆ ಬಲತಂದಾಗಿದೆ. ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯಕ್ರಮ ನಡೆಯಲಿದ್ದು  ಅಂಕೋಲಾದಿಂದ ಆರಂಭವಾಗುವ ಅವರ ಕಾರ್ಯಕ್ರಮ ಭಟ್ಕಳದಲ್ಲಿ ಮುಕ್ತಾಯವಾಗಲಿದೆ. 

ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿಯವರ ಆಗಮನಕ್ಕೆ ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲು ವೇದಿಕೆ ತಯಾರಾಗುತ್ತಿದ್ದು ಹತ್ತಾರು ಅಡೆ ತಡೆಗಳ ನಡುವೆ ಕೆಲಸ ಮಾಡಬೇಕಾಗಿದೆ.  ಎಸ್.ಜಿ.ಪಿ. ಭದ್ರತೆಯಿರುವುದರಿಂದ ಸ್ವಲ್ಪ ವ್ಯತ್ಯಾಸವಾದರೂ ಸಹ ಅವರು ಕೇಳುತ್ತಿಲ್ಲ.  ಒಂದು ವಾರದಿಂದ ಭದ್ರತೆಯ ಕುರಿತು ಪರಿಶೀಲನೆ ನಡೆಸುತ್ತಿರುವ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ಎಸ್.ಜಿ.ಪಿ.ಗೆ ಹಸ್ತಾಂತರಿಸಿದ್ದು ಅವರೇ ಎಲ್ಲವನ್ನೂ ನಿರ್ಧಾರ ಮಾಡಲಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರು ಸ್ವತಹ ಭೇಟಿ ನೀಡಿ ವೇದಿಕೆಯನ್ನು ವೀಕ್ಷಿಸಿ ಆಗಬೇಕಾಗಿರುವ ಕೆಲಸಗಳ ಕುರಿತು ಮಾಹಿತಿ ನೀಡಿದ್ದು, ರಾಹುಲ್ ಗಾಂಧಿಯವರನ್ನು ಸ್ವಾಗತಿಸುವ ಕ್ರಮ, ಅವರನ್ನು ಹೆಲಿಪ್ಯಾಡ್‍ನಿಂದ ಕರೆತರುವ ದಾರಿ ಎಲ್ಲವನ್ನು ಅವರು ಪರಿಶೀಲಿಸಿದರು.   

ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಜಿಲ್ಲೆ ಎನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ.  ಆದರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಬಿ.ಜೆ.ಪಿ. ತನ್ನತನವನ್ನು ಸ್ಥಾಪಿಸಿಕೊಂಡಿದ್ದರೂ ಕೂಡಾ ಕಳೆದ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಶಕ್ತವಾಗಿತ್ತು. ಈ ಬಾರಿಯೂ ಕೂಡಾ ಎಲ್ಲ ಕ್ಷೇತ್ರದಲ್ಲಿಯೂ ಪ್ರಭ ಪೈಪೋಟಿ ಬಿ.ಜೆ.ಪಿಯೇ ಆಗಿದ್ದು ಇದು ಪಕ್ಷದ ಮುಖಂಡರಿಗೂ ತಿಳಿದಿದೆ.  ರಾಹುಲ್ ಗಾಂಧಿ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಬಲ ಬರುವುದಿದ್ದು ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗುವುದು ಎನ್ನುವುದು ಪಕ್ಷದ ಲೆಕ್ಕಾಚಾರವಾಗಿದೆ.  

ಭಟ್ಕಳ ಮತದಾರರ ಕ್ಷೇತ್ರದಲ್ಲಿ ಶಾಸಕ ಮಂಕಾಳ ವೈದ್ಯ ಎರಡು ಬಾರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪಕ್ಷೇತರರಾಗಿಯೇ ಗೆದ್ದಿದ್ದು ಕಳೆದ ಬಾರಿ ಶಾಸಕರಾಗಿ ಆಯ್ಕೆಯಾದರು.  ನಂತರ ಅವರು ಸಿದ್ಧರಾಮಯ್ಯನವರ ಕಾಂಗ್ರೆಸ್ ಸರಕಾರಕ್ಕೆ ಬೆಂಬಲ ಕೊಟ್ಟು 1500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಭಟ್ಕಳ ಕ್ಷೇತ್ರದಲ್ಲಿ ಸ್ವಾತಂತ್ರ್ಯಾ ನಂತರದ ಹಲವಾರು ಬೇಡಿಕೆಗಳನ್ನು ಈಡೇರಿಸಿದರು. ಹಲವು ಕಡೆಗಳಲ್ಲಿ ಸೇತುವೆಯನ್ನು ಮಾಡಿಸಿದ್ದಲ್ಲದೇ, ಕುಡಿಯುವ ನೀರು, ಶಾಲೆ, ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಅನುಕೂಲ ಕಲ್ಪಿಸಿದರು. ಅಂಗವಿಕಲರಿಗೆ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ನೀಡಿ ಅವರ ಅನುಕಂಪ ಗಳಿಸಿದರು. ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ದೇವಾಲಯಗಳಿಗೆ ಸರಕಾರದ ಅನುದಾನದ ಜೊತೆಗೆ ತಾವೂ ಕೂಡಾ ಧನ ಸಹಾಯ ಮಾಡುವುದರೊಂದಿಗೆ ಜನಪರವಾಗಿ ಕೆಲಸ ಮಾಡಿದ್ದು ಇಂದು ಅವರ ಪರವಾಗಿ ಬಲವಾದ ಅಲೆಯೊಂದು ಸೃಷ್ಟಿಯಾಗಲು ಕಾರಣವಾಯಿತು.  ಇಲ್ಲಿ ಪಕ್ಷ ಮುಖ್ಯವಲ್ಲ, ವ್ಯಕ್ತಿ ಮುಖ್ಯ ಎನ್ನುವ ಮಾತು ಮತದಾರರಿಂದ ಕೇಳಿ ಬರುವಷ್ಟರ ಮಟ್ಟಿಗೆ ಮಂಕಾಳ ವೈದ್ಯ ಕೆಲಸ ಮಾಡಿದರು. ಇವರು ಪ್ರಚಾರಕ್ಕೆ ಹೋದಲ್ಲೆಲ್ಲಾ ಜನ ಬೆಂಬಲ ದೊರೆಯುತ್ತಿರುವುದು ರಾಹುಲ್ ಗಾಂಧಿಯವರ ಆಗಮನದಿಂದ ಇನ್ನಷ್ಟು ಹೆಚ್ಚು ಬೆಂಬಲ ದೊರೆಯಲು ಸಹಕಾರಿಯಾಗಬಹುದೇ ಎನ್ನುವುದನ್ನ ಕಾದು ನೋಡಬೇಕಾಗಿದೆ. 

ಸಮಾವೇಶಕ್ಕೂ ಪೂರ್ವದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಯ ಕಾರವಾರ,ಕುಮಟಾ,ಅಂಕೋಲಾ ತಾಲೂಕುಗಳಲ್ಲಿ ವಿಶೇಷ ರ್ಯಾಲಿಯನ್ನು ನಡೆಸಿ ಏಪ್ರಿಲ್ 26ರಂದು ಸಂಜೆ 6ಗಂಟೆಗೆ ಭಟ್ಕಳದ ವೆಂಕಟಾಪುರದ ಐಸ್ ಫ್ಯಾಕ್ಟರಿ ಬಳಿಯ ಮೈದಾನದಲ್ಲಿ ಸಾರ್ವಜನಿಕರು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದು, ಸಮಾವೇಶಕ್ಕೆ 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. 

ಸ್ಪೆಶಲ್ ಪ್ರೋಟೆಕ್ಸನ್ ಗ್ರೂಪ ತಂಡದ ಭದ್ರತಾ ಅಧಿಕಾರಿಗಳಿಂದ ಸ್ಥಳಪರಿಶೀಲನೆ : ವಿಧಾನಸಭಾ ಚುನಾವಣಾ ಹಿನ್ನೆಲೆ ಪ್ರಚಾರದ ನಿಮಿತ್ತ ಏಪ್ರಿಲ್ 26ರಂದು ಭಟ್ಕಳಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದು, ಇಲ್ಲಿನ ವೆಂಕಟಾಪುರದ ಐಸ್ ಫ್ಯಾಕ್ಟರಿ ಬಳಿಯ ಮೈದಾನದಲ್ಲಿ ನಡೆಯಲಿರುವ ಸಮಾವೇಶದ ಭದ್ರತೆ ವ್ಯವಸ್ಥೆ ಕಲ್ಪಿಸುವ ಹಿನ್ನೆಲೆಯಲ್ಲಿ ಮಂಗಳವಾರದಂದು ದೆಹಲಿಯಿಂದ ಸ್ಪೆಶಲ್ ಪ್ರೋಟೆಕ್ಸನ್ ಗ್ರೂಪ ತಂಡದ ಭದ್ರತಾ ಅಧಿಕಾರಿಗಳು ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ದೆಹಲಿಯ ಸ್ಪೆಶಲ್ ಪ್ರೋಟೆಕ್ಸನ್ ಗ್ರೂಪ ತಂಡದ ಭದ್ರತಾ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಪರಿಶೀಲನೆ ವೇಳೆ ಸಾಥ್ ನೀಡಿದ್ದು, ಸಮಾವೇಶ ನಡೆಯಲಿರುವ ಮೈದಾನದ ಪಕ್ಕದಲ್ಲಿಯೇ ಹೆಲಿಪ್ಯಾಡ್‍ಗೆ ಈಗಾಗಲೇ ಸ್ಥಳವನ್ನು ನಿಗದಿ ಮಾಡಲಾಗಿದೆ. ಹಾಗೂ ದೆಹಲಿಯ ಸ್ಪೆಶಲ್ ಪ್ರೋಟೆಕ್ಸನ್ ಗ್ರೂಪ ತಂಡದ ಭದ್ರತಾ ಅಧಿಕಾರಿಗಳು ಸಮಾವೇಶ ಸೇರಿದಂತೆ ವೇದಿಕೆಯ ರೂಪುರೇಷೆಯನ್ನು ವೇದಿಕೆಯ ನಿಮಾತೃರಿಗೆ ಸೂಕ್ತ ಸಲಹೆಯೊಂದಿಗೆ ಮಾಹಿತಿಯನ್ನು ತಿಳಿಸಿದರು. ಇದೇ ವೇಳೆ ಮೈದಾನದ ಪಕ್ಕದ ನಿರ್ಮಾಣ ಹಂತದ ಕಟ್ಟಡವನ್ನು ಸಹ ಪರಿಶೀಲಿಸಿ ಸಮಾವೇಶಕ್ಕೆ ಯಾವುದೇ ತೊಂದರೆ ತೊಡಕಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಈ ಸಂಧರ್ಭದಲ್ಲಿ ಜಿ.ಪಂ.ಅದ್ಯಕ್ಷೆ ಜಯಶ್ರೀ ಮೋಗೇರ, ಬ್ಲಾಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ನಾಯ್ಕ, ಜಾಲಿ ಪ.ಪಂ.ಅಧ್ಯಕ್ಷ ಅಬ್ದುಲ್ ರಹೀಂ,

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...