ಮೋದಿಯವರ ಢೋಂಗಿತನ ಇಲ್ಲಿ ನಡೆಯದು-ಸಿ.ಎಂ

Source: sonews | By Sub Editor | Published on 6th December 2017, 7:05 PM | Coastal News | State News | Don't Miss |

ಭಟ್ಕಳ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಢೋಂಗಿತನದೊಂದಿಗೆ ದೇಶದ ಒಂದು ಪ್ರಮುಖ ಸಮುದಾಯವನ್ನು ಹೊರಗಿಟ್ಟು ಬಾಯಿಮಾತಿನ ವಿಕಾಸ ಮಾಡುತ್ತಿರುವ ಮೋದಿಯವರ ಢೋಂಗಿತನ ಕರ್ನಾಟಕದಲ್ಲಿ ನಡೆಯದು ಎಂದು ರಾಜ್ಯದ ಮುಖಮಂತ್ರಿ ಎಸ್.ಸಿದ್ಧರಾಮಯ್ಯ ಹೇಳಿದರು.
ಅವರು ಬುಧವಾರ ಇಲ್ಲಿನ ಪೊಲೀಸ್ ಮೈದಾನದಲ್ಲಿ ನಡೆದ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ 1200ಕೋಟಿ ರೂ ಅನುದಾನ 131 ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. 
ನಾವು ಪರಸ್ಪರ ಪ್ರೀತಿ, ಗೌರವಗಳಿಂದ ಬದುಕಬೇಕು. ನಮ್ಮ ನಮ್ಮ ನಡುವೆ ಬೇಧವನ್ನು ಹುಟ್ಟುಹಾಕುವಂತ, ಬೆಂಕಿ ಇಡುವಂತಹ ಕೆಲಸ ಯಾರೇ ಮಾಡಲಿ ಅದನ್ನು ಎಲ್ಲರು ಒಕ್ಕೋರಲಿನಿಂದ ಖಂಡಿಸಬೇಕು. ಆಗ ಮಾತ್ರ ಈ ದೇಶದ ಸಮಗ್ರತೆ, ಸಾರ್ವಭೌಮತೆ, ಸಂವಿಧಾನದಲ್ಲಿ ಉಲ್ಲೇಖಿತ ಜಾತ್ಯಾತೀತ ಸಮಾಜ ನಿರ್ಮಾಣ ಸಾಧ್ಯ ಎಂದರು. ಸಹಬಾಳ್ವೆ, ಸಮಾಜಿಕ ನ್ಯಾಯಾದೊಂದಿಗೆ ರಾಜ್ಯವನ್ನು ಬಲಿಷ್ಠಗೊಳಿಸಬೇಕಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದ 6.30 ಕೋಟಿ ಜನರಿಗೆ ಸಮಾನವಾಗಿ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಯೋಜನೆಗಳಿಗೆ ಎಲ್ಲ ಜಾತಿ ಧರ್ಮದವರಿಗಾಗಿದೆ. ಬಡವರು ಯಾವುದೇ ಜಾತಿಯವರಾಗಲಿ ಅವರಿಗೆ ಸಾಮಾಜಿಕ ನ್ಯಾಯಾ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ನಾನು ತಿಳಿದುದುಕೊಂಡಿದ್ದೇನೆ. 1.8ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 7ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ ಇದು ಜನಪರ ಸರ್ಕಾರ ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು. 
ನಾವು ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುತ್ತಿದ್ದರೆ ಬಿಜೆಪಿಯವರು ಕಾಂಗ್ರೇಸ್ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಯಡಿಯೂರಪ್ಪ, ಅನಂತ್ ಕುಮಾರ್ ಹೆಗಡೆಯಂತಹ ನೂರು ಜನ ಬಂದರೂ ರಾಜ್ಯವನ್ನು ಕಾಂಗ್ರೇಸ್ ಮುಕ್ತವನ್ನಾಗಿ ಮಾಡಲು ಸಾಧ್ಯವಿಲ್ಲ ಧೈರ್ಯವಿದ್ದರೆ ಅದನ್ನು ಮಾಡಿ ತೋರಿಸಿ ಎಂದು ಸವಾಲೆಸದರು. 130 ವರ್ಷಗಳ ಇತಿಹಾಸವಿರುವ ದೇಶಕ್ಕಾಗಿ ತ್ಯಾಗಬಲಿದಾನಗಳನ್ನು ಮಾಡಿರುವ ಕಾಂಗ್ರೇಸ್ ಪಕ್ಷವೆಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ತೊಟ್ಟು ಬೆವರನ್ನು ಸುರಿಸದ ಬಜೆಪಿ ಎಲ್ಲಿ? ಎಂದ ಅವರು ದೇಶಕ್ಕಾಗಿ ಅವರೇನು ಮಾಡಿದ್ದಾರೆ ಎಂದು ಪರಾಮರ್ಶಿಸಿಕೊಳ್ಳಲಿ ಎಂದು ಸಲಹೆ ನೀಡಿದರು. ದೇಶಕ್ಕಾಗಿ ನಿಮ್ಮ ಕೊಡುಗೆಯೇನು? ಮೋದಿ ಹೆಸರಲ್ಲಿನಲ್ಲಿ ರಾಜ್ಯವನ್ನು ಆಳುತ್ತೇವೆ ಎಂದು ಡಂಗೂರ ಸಾರುತ್ತಿರುವ ಯಡಿಯೂರಪ್ಪನವರೇ ನಿಮ್ಮನ್ನು ಸೇರಿ ಜೈಲಿಗೆ ಹೋದವರು ಸಂಖ್ಯೆಯನ್ನು ನೀವು ಲೆಕ್ಕ ಹಾಕಿ ಅರ್ದ ಡಜನ್ ಗೂ ಹೆಚ್ಚು ಸಚಿವರು, ಆಗಿನ ಗುಜರಾತ ಗೃಹ ಸಚಿವ ಅಮಿತ್ ಶಾಹ್ ಸ್ವತಃ ಜೈಲುವಾಸಿಯಾಗಿದ್ದು ಅಲ್ಲಿ ಸಂಬಂಧ ಬೆಳಸಲು ಜೈಲಿಗೆ ಹೋಗಿದ್ದೀರಾ? ಪರಿವರ್ತನಾ ಯಾತ್ರೆ ಕೈಗೊಂಡಿರುವ ಯಡಿಯೂರಪ್ಪನವರು ಮೊದಲು ತಮ್ಮನ್ನು ತಾವು ಪರಿವರ್ತನೆ ಮಾಡಿಕೊಳ್ಳಲಿ, ಬೆಂಕಿ ಹಚ್ಚುವವರು, ಜಾತ್ಯಾತೀತ ವಿರೋಧಿಗಳ ಪರಿವರ್ತನೆ ಅಗತ್ಯವಾಗಿದೆ ಎಂದರು. 
ನಮ್ಮ ಬಳಿ ಹೇಳಿಕೊಳ್ಳಲು ಹಲವಾರು ಜನಪರ ಯೋಜನೆಗಳಿವೆ. ಆದರೆ ನಿಮ್ಮಲ್ಲೇನಿದೆ. ಸಿರೆ ಕೊಟ್ಟಿದ್ದೇನೆ, ಸೈಕಲ್ ಕೊಟ್ಟಿದ್ದೇನೆ ಅದಕ್ಕೂ ಹೆಚ್ಚು ಅಂದ್ರೆ ಜೈಲಿಗೆ ಹೋಗಿದ್ದೇನೆ ಎಂದಷ್ಟೇ ಹೇಳಬಹುದು ಟೀಕಿಸಿದ ಅವರು ತಮ್ಮ ಯೋಜನೆಗಳನ್ನು ಜನರಮುಂದಿಟ್ಟರು. ರಾಜ್ಯದ ರೈತರ ಸಾಲಮನ್ನಾ ಮಾಡಿದ ನಾವು ಕೇಂದ್ರ ಸರ್ಕಾರ ಯಾವುದೇ ರೀತಿಯ ಸಹಕಾರ ನೀಡಲಿಲ್ಲ. 8160ಕೋಟಿ ಸಾಲಮನ್ನಾ ಮಾಡಲಾಗಿದ್ದು ಮೋದಿಯವರು ಒಂದು ನಯಾಪೈಸೆಯನ್ನು ಮನ್ನಿಸಲಿಲ್ಲ ರೈತರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಯಡಿಯೂರಪ್ಪನವರಿಗಿಲ್ಲ ಎಂದರು. ರಾಜ್ಯದ ಇತಿಹಾಸದಲ್ಲೇ ಹಗರಣ, ಭ್ರಷ್ಟಚಾರ ರಹಿತ ಸರ್ಕಾರ ಎಂಬ ಹೆಗ್ಗಳಿಕೆ ನಮ್ಮದು ಮುಂದಿನ ಚುನಾವಣೆಯಲ್ಲೂ ಜನರು ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 
ಟಿಪ್ಪುವನ್ನು ಹಾಡಿ ಹೊಗಳಿದವರೇ ಇಂದು ಟಿಪ್ಪು ಒಬ್ಬ ಮತಾಂಧ ಎಂದು ಹೇಳುತ್ತಿದ್ದಾರೆ ಇವರಿಗೆ ಇರುವ ನಾಲಗೆ ಎಷ್ಟು ಎನ್ನುವುದು ರಾಜ್ಯದ ಜನತೆಗೆ ತೋರಿಸಬೇಕು . ದೇಶದ ಚರಿತ್ರೆಯನ್ನು ಅರಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಅರಿಯುವುದರ ಮೂಲಕ ದೇಶದ ಇತಿಹಾಸವನ್ನು ಅರಿಯಬಹುದಾಗಿದೆ. ರಾಜಕಾರಣಕ್ಕಾಗಿ ಏನುಬೇಕಾದರೂ ಮಾತನಾಡಬಹುದು ಎಂದು ಸಾಬೀತು ಮಾಡಿರುವ ಅನಂತ್ ಕುಮಾರ್ ಹೆಗಡೆ ತಮ್ಮ ನಾಲಗೆಯ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದಾರೆ. ಸಂಸ್ಕೃತಿ ಸಂಸ್ಕಾರ ಎಂದು ಬೊಗಳೆ ಬಿಡುವವರ ಸಂಸ್ಕಾರ ಹೇಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆ. ಉತ್ತರಕನ್ನಡ ಜಿಲ್ಲೆಯ ಜನ ಸುಸಂಸ್ಕೃತರು. ಆದರೆ ಈ ಅನಂತ್ ಕುಮಾರ್ ಇದಕ್ಕೆ ಅಪವಾದವಾಗಿದ್ದಾರೆ ಎಂದರು. 
ಸಚಿವ ಎಚ್.ಸಿ. ಮಾಹದೇವಪ್ಪ, ಆರ್.ವಿ.ದೇಶಪಾಂಡೆ ಮತನಾಡಿದರು. ಶಾಸಕ ಮಾಂಕಾಳ್ ವೈದ್ಯ ಅಧ್ಯಕ್ಷತೆ ವಹಿಸಿದ್ದರು. 
 

Read These Next

ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಕೆಲಸ ಮಾಡುವೆ-ನೂತನ ಶಾಸಕ ಸುನಿಲ್ ನಾಯ್ಕ

ಭಟ್ಕಳ: ಬಿ.ಜೆ.ಪಿ. ಮಂಡಳದ ವತಿಯಿಂದ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಂಡಳದ ...

ಭಟ್ಕಳ: ಗುಡುಗು ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ. ಘಟನೆಯಲ್ಲಿ ಮನೆಯ 3ಕ್ಕೂ ಅಧಿಕ ಮಂದಿಗೆ ಗಾಯ

ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಹಿತ ಮಳೆಗೆ ಗುರುವಾರದಂದು ತಡರಾತ್ರಿ ಇಲ್ಲಿನ ...

ಕರ್ನಾಟಕದಲ್ಲಿ ಕುಮಾರಪರ್ವ ಆರಂಭ; ೨೫ನೇ ಮುಖ್ಯಮಂತ್ರಿಯಾಗಿ ಎಚ್ಡಿಕೆ; ಉ ಮು.ಮಂ ಡಾ.ಜಿ.ಪರಮೇಶ್ವರ ಪ್ರಮಾಣವಚನ

ಬೆಂಗಳೂರು:ಕಾಂಗ್ರೇಸ್ ಮತ್ತು ಜೆ.ಡಿಎಸ್ ಮೈತ್ರಿಕೋಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಎಚ್.ಡಿ.ಕುಮಾರ್ ಸ್ವಾಮಿ ರಾಜ್ಯದ ೨೫ನೇ ...

ಕರ್ನಾಟಕದಲ್ಲಿ ಕುಮಾರಪರ್ವ ಆರಂಭ; ೨೫ನೇ ಮುಖ್ಯಮಂತ್ರಿಯಾಗಿ ಎಚ್ಡಿಕೆ; ಉ ಮು.ಮಂ ಡಾ.ಜಿ.ಪರಮೇಶ್ವರ ಪ್ರಮಾಣವಚನ

ಬೆಂಗಳೂರು:ಕಾಂಗ್ರೇಸ್ ಮತ್ತು ಜೆ.ಡಿಎಸ್ ಮೈತ್ರಿಕೋಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಎಚ್.ಡಿ.ಕುಮಾರ್ ಸ್ವಾಮಿ ರಾಜ್ಯದ ೨೫ನೇ ...

ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಕೆಲಸ ಮಾಡುವೆ-ನೂತನ ಶಾಸಕ ಸುನಿಲ್ ನಾಯ್ಕ

ಭಟ್ಕಳ: ಬಿ.ಜೆ.ಪಿ. ಮಂಡಳದ ವತಿಯಿಂದ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಂಡಳದ ...