ಭಟ್ಕಳ: ಬಸ್ಸಿಗೆ ಢಿಕ್ಕಿ ಹೊಡೆದ ಬೈಕ್ - ಗಾಯಗೊಂಡ ಯುವಕನ ಸಾವು

Source: s o news | By Arshad Koppa | Published on 2nd July 2016, 7:11 AM | Coastal News | Special Report | Incidents | Don't Miss |

ಭಟ್ಕಳ, ಜು ೧: ಭಟ್ಕಳ ಶಂಸುದ್ದೀನ್ ಸರ್ಕಲ್ ಬಳಿ ಗುರುವಾರ ರಾತ್ರಿ ನಡೆದ ಬಸ್-ಬೈಕ್ ನಡುವೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಬಳಿಕ ಉಡುಪಿಯ ಆಸ್ಪತ್ರೆಯಲ್ಲಿ ವಿಧಿವಶನಾದ ವರದಿಯಾಗಿದೆ. 

ಮೃತ ಯುವಕನನ್ನು ಅಬ್ದುಲ್ ಬದೀ ಕಾಜಿಯಾ (18) ಎಂದು ಗುರುತಿಸಲಾಗಿದ್ದು ಮೂಸಾನಗರ ನಿವಾರಿ ಹುಜೇಫಾ ಕಾಜಿಯಾರವರ ಪುತ್ರರಾಗಿದ್ದಾರೆ. 

ಲಭ್ಯವಾದ ಮಾಹಿತಿಗಳ ಪ್ರಕಾರ ಈ ಯುವಕ ಮತ್ತು ಈತನ ಸ್ನೇಹಿತ ಜೀಶಾನ್ ಸುನಹೆರಿ ಇಬ್ಬರೂ ರಂಜಾನ್ ಬಾಜಾರ್ ಗೆ ಭೇಟಿ ನೀಡಿದ ಬಳಿಕ ಬೈಕಿನಲ್ಲಿ ಹಿಂದಿರುತ್ತಿದ್ದಾಗ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಖಾಸಗಿ ಬಸ್ ಕುಂದಾಪುರದಿಂದ ಆಗ ತಾನೇ ಹಿಂದಿರುಗಿ ಸರ್ಕಲ್ ನಲ್ಲಿ ಯು.ಟರ್ನ್ ತೆಗೆಯುತ್ತಿತ್ತು. ಮೊದಲು ಬಸ್ಸಿಗೆ ಢಿಕ್ಕಿ ಹೊಡೆದ ಬಳಿಕ ಆಘಾತದಿಂದ ಎಸೆಯಲ್ಪಟ್ಟ ಯುವಕನ ತಲೆ ಪಕ್ಕದ ವಿದ್ಯುತ್ ಕಂಭಕ್ಕೆ ಬಡಿದು ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣವೇ ಆದರ್ಶ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ ಶುಕ್ರವಾರ ಸಂಜೆ ಏಳು ಘಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶನಾಗಿದ್ದಾನೆ. 

 

ಈತ ಮುರ್ಡೇಶ್ವರದ ಕಾಲೇಜು ವಿದ್ಯಾರ್ಥಿಯಾಗಿದ್ದು ಈ ವರ್ಷವೇ ಮೊದಲ ಪೀಯುಸಿ ತೇರ್ಗಡೆಯಾಗಿದ್ದ. ಜೆದ್ದಾದಲ್ಲಿರುವ ಈತನ ದುಃಖತಪ್ತ ತಂದೆ ಅಂತಿಮ ಸಂಸ್ಕಾರಕ್ಕಾಗಿ ಭಟ್ಕಳಕ್ಕೆ ಆಗಮಿಸಿದ್ದಾರೆ. 

Read These Next

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...

ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು- ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮದ್‌ ರೋಷನ್‌ ಷಾ

ಶ್ರೀನಿವಾಸಪುರ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ...

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...