ಭಟ್ಕಳ: ಸೆ.23 ರಂದು ನವರಾತ್ರಿ ಉತ್ಸವದ ಅಂಗವಾಗಿ "ಪೌರಾಣಿಕ ಯಕ್ಷಗಾನ" "ಸುಧನ್ವಾರ್ಜುನ ಕಾಳಗ" ಪ್ರದರ್ಶನ

Source: so english | By Arshad Koppa | Published on 23rd September 2017, 8:19 AM | Coastal News |

ಭಟ್ಕಳ: ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಅಳ್ವೇಕೋಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅಂಗವಾಗಿ "ಪೌರಾಣಿಕ ಯಕ್ಷಗಾನ" "ಸುಧನ್ವಾರ್ಜುನ ಕಾಳಗ" ಸೆ.23 ಶನಿವಾರ ಸಂಜೆ 5.30ಕ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಹಿಮ್ಮೇಳದಲ್ಲಿ ಭಾಗವತರು ಕೆ.ಪಿ. ಹೆಗಡೆ ಗೋಳಗೋಡು,  ಮೃದಂಗ ಅವದಾನಿ ಅಂತ್ರವಳ್ಳಿ,  ಚಂಡೆ ಗಜಾನನ ಹೆಗಡೆ ಮೂರೂರು, ಮುಮ್ಮೇಳದಲ್ಲಿ  ನಾಗರಾಜ ಕೆ ಮಧ್ಯಸ್ಥ, ನಾರಾಯಣ ಮಧ್ಯಸ್ಥ,  ಮಂಜುನಾಥ ಹೆಗಡೆ, ವಾಸು ಮರಾಠಿ, ವಿನಾಯಕ ಮಧ್ಯಸ್ಥ, ಶ್ರೀಕೃಷ್ಣ ಮಧ್ಯಸ್ಥ, ಅತಿಥಿ ಕಲಾವಿದರಾಗಿ ಸುಬ್ರಹ್ಮಣ್ಯ ಹೆಗಡೆ ಮೂರೂರು, ಈಶ್ವರ ನಾಯ್ಕ ಮಂಕಿ, ರಾಜೇಶ್ ಶೆಟ್ಟಿ ದೇವಿಕಾನು  ಮುಂತಾದವರು ಭಾಗವಹಿಸಲಿದ್ದಾರೆ ಎಂದೂ ತಿಳಿಸಲಾಗಿದೆ. 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...