ಆಸ್ಪತ್ರೆಗೆ ತೆರಳಿದವರ ಬ್ಯಾಗ್ ದೋಚಿದ ಕಳ್ಳರು

Source: SO News | By Manju Naik | Published on 24th July 2018, 8:43 PM | Coastal News |

ಭಟ್ಕಳ: ಆಸ್ಪತ್ರೆಗೆಂದು ರೈಲಿನಲ್ಲಿ ತೆರಳಿದ್ದವರ ಚಿನ್ನಾಭರಣ, ನಗದು ಇದ್ದು ಬ್ಯಾಗ್ ಅನ್ನು ಕಳವು ಮಾಡಿರುವ ಘಟನೆ ನಿನ್ನೆ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ನಡೆದಿದೆ. 

ಕಾರವಾರದ ನಂದನಗದ್ದಾದ ನಿವಾಸಿ ರಾಮದಾಸ ನಾರಾಯಣ ಕಾಣಕೋಣಕರ್ ಎಂಬುವವರು ಕುಟುಂಬದೊಂದಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ನೇತ್ರಾವತಿ ಎಕ್ಸಪ್ರೆಸ್ (ರೈ.ನಂ: 14345) ನಲ್ಲಿ ಕಾರವಾರದಿಂದ ತೆರಳಿದ್ದರು‌.ಈ  ವೇಳೆ ರೈಲು ಮುರ್ಡೇಶ್ವರ ನಿಲ್ದಾಣದ ಸಮೀಪ ನಿಧಾನವಾಗಿ ಚಲಿಸುತ್ತಿರುವಾಗ ಅವರ ಪತ್ನಿ ರೇಷ್ಮಾರ ವ್ಯಾನಿಟಿ ಬ್ಯಾಗ್ ಅನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಬ್ಯಾಗಿನಲ್ಲಿ 8 ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಆಭರಣ ಹಾಗೂ 35 ಸಾವಿರ ನಗದು ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...