ಚಿಪ್ಪಿಕಲ್ಲು ಸೇವಿಸಿ ನೂರಾರು ಮಂದಿ ಅಸ್ಪಸ್ಥ; ಆಸ್ಪತ್ರೆಗೆ ದಾಖಲು

Source: sonews | By Staff Correspondent | Published on 19th February 2019, 6:19 PM | Coastal News | Don't Miss |

•    ಚಿಪ್ಪಿಕಲ್ಲು(ಮಳವಿ) ಸೇವಿಸದಂತೆ ತಾಲೂಕಾಡಳಿತದಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ


ಭಟ್ಕಳ: ತಾಲೂಕಿನಾದ್ಯಂತ ಸಮುದ್ರದಲ್ಲಿ ದೊರೆಯುವ ಚಿಪ್ಪಿಕಲ್ಲು (ಮಳವಿ) ಸೇವನೆಯಿಂದಾಗಿ ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದ್ದು ರಾಸಾಯನಿಕ ಬೆರೆತಿರುವ ಶಂಕೆಯುಂಟಾದ ಕಾರಣ ಸಾರ್ವಜನಿಕರು ಚಿಪ್ಪಿಕಲ್ಲು ಸೇವಿಸಬಾರದೆಂದು ತಾಲೂಕಾಡಳಿತ ಮುನ್ನೆಚ್ಚರಿಕೆಯನ್ನು ನೀಡಿದೆ.

ಕಳೆದ ಎರಡು ದಿನದಿಂದ ಭಟ್ಕಳ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇಲ್ಲಿನ ಮತ್ಸ್ಯಹಾರಗಳಲ್ಲಿ ಮುಖ್ಯವಾದ ಮಳವಿ (ಚಿಪ್ಪಿಕಲ್ಲು) ತಿಂದು ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಭಾನುವಾರದಂದು 70ಕ್ಕೂ ಅಧಿಕ ಜನರು ತಾಲೂಕಿನ ಶಿರಾಲಿ, ಮುರ್ಡೇಶ್ವರ ವ್ಯಾಪ್ತಿಯಲ್ಲಿ ಅಸ್ವಸ್ತಗೊಂಡು ಆಸ್ಪತ್ರೆ ಸೇರಿದ್ದಾರೆ.

ಕಳೆದ 2-3 ದಿನಗಳಿಂದ ಚಿಪ್ಪಿಕಲ್ಲು(ಮಳವಿ) ತಿಂದ ಶಿರಾಲಿ ವ್ಯಾಪ್ತಿಯಲ್ಲಿ ನೂರಾರು ಜನರು ಆಸ್ಪತ್ರೆ ಸೇರುತ್ತಿದ್ದರು. ಭಾನುವಾರ ಸಂಜೆ ವೇಳೆ ಪಟ್ಟಣವೊಂದರಲ್ಲೆ ಮಳವಿ ತಿಂದ ಸುಮಾರು 20ಕ್ಕೂ ಅಧಿಕ ಮಂದಿ ರಾತ್ರಿ ಆಸ್ಪತ್ರೆ ಸೇರಿದ್ದು, ವಾಂತಿ ಬೇದಿಯಿಂದ ಪ್ರಾರಂಭವಾಗಿ ಕೆಲವರಿಗೆ ತಲೆ ಸುತ್ತು ಬಂದು ಅಸ್ವಸ್ಥಗೊಳ್ಳುತ್ತಿದ್ದಾರೆ. 

ಶನಿವಾರದಂದು ರಾತ್ರಿ ಶಿರಾಲಿಯ ಒಂದೇ ಕುಟುಂಬದ ಸುಮಾರು 20ಕ್ಕೂ ಅಧಿಕ ಮಂದಿ ಮಳವಿ ತಿಂದು ಆಸ್ಪತ್ರೆ ಸೇರಿದ್ದರು. ತಾಲೂಕಿನ ಮಣ್ಕುಳಿ, ಕಾರಗದ್ದೆ, ಮುಂಡಳ್ಳಿ, ಸರ್ಪನಕಟ್ಟೆ  ಸೇರಿದಂತೆ ಮುರ್ಡೇಶ್ವರ, ಶಿರಾಲಿ ಭಾಗದವರೂ ಕೂಡ ಮಳವಿ ತಿಂದು ನಿತ್ರಾಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇನ್ನು ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆÀ ಎಂದ ಮಾಹಿತಿ ಲಭ್ಯವಾಗಿದೆ. ತಿಮ್ಮು ನಾಯ್ಕ, ಆಶಾ ನಾಯ್ಕ, ದುರ್ಗಿ ನಾಯ್ಕ, ಲಕ್ಷ್ಮೀ ನಾಯ್ಕ, ದುರ್ಗಪ್ಪಾ ಸೇರಿದಂತೆ ಇತರರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಾಗಿದೆ. ಇನ್ನು ಶಿರಾಲಿ ಆಸ್ಪತ್ರೆಯಲ್ಲಿ ಭಾನುವಾರದಂದು ಬೆಳಿಗ್ಗೆ 50-60 ಮಂದಿ ಅಸ್ವತ್ತಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಳವಿಯಲ್ಲಿ ರಾಸಾಯನಿಕ ಮಿಶ್ರಣದ ಶಂಕೆ:
ಸಮುದ್ರದ ಬಂಡೆಕಲ್ಲು ಬಳಿ, ನದಿಯಲ್ಲಿ ಹೇರಳವಾಗಿ ದೊರಕುವ ಮಳವಿಯನ್ನು ಶೇಖರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಸಮುದ್ರದ ರೇತಿಯಲ್ಲಿ ಹುದುಗಿ ಇಡುತ್ತಾರೆ. ನಿರ್ದಿಷ್ಟ ದಿನದ ವರೆಗೂ ಬದುಕಿ ಇರುವ ಮಳವಿ ನಂತರ ಕೆಡಲು ಆರಂಭವಾಗುತ್ತದೆ. ಚಿಪ್ಪೆಯೊಳಗಿನ ಮಾಂಸವೂ ಹಾಳಗದಂತೆ ರಕ್ಷಿಸಲೂ ರಾಸಾಯನಿಕ ಬಳಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಂದಾಪುರದಿಂದ ಪ್ರತಿದಿನ ಬೆಳಿಗ್ಗೆ ತಾಲೂಕಿಗೆ ಚಿಪ್ಪಿಕಲ್ಲು ಸಾಗಾಟ ಆಗುತ್ತಿದ್ದು, ಇಲ್ಲಿನ ವ್ಯಾಪಾರಿಗಳು ಕುಂದಾಪುರದ ವ್ಯಾಪಾರಿಗಳಿಂದ ಖರೀದಿಸಿ, ಸಂಗ್ರಹಿಸಿ ತಾಲೂಕಿನ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಚಿಪ್ಪಿಕಲ್ಲಿನ ಸಾಗಾಟದಲ್ಲಿಯೋ ಅಥವಾ ಸಂಗ್ರಹಣೆಯಲ್ಲಿಯೋ ರಾಸಾಯನಿಕ ಬೇರಕೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಭೀತಿ ಎದುರಾಗಿದೆ. 

ಈ ಬಗ್ಗೆ ಮಾಹಿತಿ ತಿಳಿದು ತಾಲೂಕಾಸ್ಪತ್ರೆಗೆ ತಹಸೀಲ್ದಾರ ವಿ.ಎನ್. ಬಾಡ್ಕರ್ ಬೇಟಿ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.  

ಘಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ ವಿ.ಎನ್. ಬಾಡಕರ್ ಚಿಪ್ಪಿಕಲ್ಲು ಪಧಾರ್ಥ ಸೇವನೆಯಿಂದ ಜನರು ಆಸ್ಪತ್ರೆ ಪಾಲಾಗುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಈ ಬಗ್ಗೆ ಅವರ ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಪುರಸಭೆ ಅಧಿಕಾರಿಗಳಿಗೂ ಹಾಗೂ ಪೊಲೀಸ ಇಲಾಖೆ ಪರಿಶೀಲನೆಗೆ ಸೂಚನೆ ನೀಡಿದ್ದೇವೆ. ಕುಂದಾಪುರದಿಂದ ತಾಲೂಕಿಗೆ ಬರುವ ಚಿಪ್ಪುಕಲ್ಲನ್ನು ವಶಕ್ಕೆ ಪಡೆದು ಅದನ್ನು ಲ್ಯಾಬ್ ಪರಿಶೀಲನೆಗೆ ಕಳುಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಹಾಗೂ ತಾಲೂಕಿನ ಜನರು ಚಿಪ್ಪಿಕಲ್ಲು ತಯಾರಿಕಾ ಪಧಾರ್ಥ ಸೇವನೆಯನ್ನು ನಿಲ್ಲಿಸುವಂತೆ ತಾಲೂಕಾಡಳಿತದಿಂದ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...