ಅರಸು ರವರ ೧೦೨ಜನ್ಮ ಶತಮಾನೋತ್ಸವ ಸಮಾರಂಭ

Source: sonews | By Staff Correspondent | Published on 20th August 2017, 11:48 PM | Coastal News | Don't Miss |

ಭಟ್ಕಳ: ಡಿ.ದೇವರಾಜ ಅರಸು ಅವರ ೧೦೨ನೇ ಜನ್ಮ ಶತನಾನೋತ್ಸವನ್ನು ಇಲ್ಲಿನ ಅರ್ಬನ್ ಬ್ಯಾಂಕ್ ಹಫಿಸ್ಕಾ ಸಭಾ  ಭವನದಲ್ಲಿ ಆಚರಿಸಿಲಾಯಿತು. 
ಕಾರ್ಯಕ್ರಮವನ್ನು ತಾಲೂಕಾ ಪಂಚಾಯತ್ ಅಧ್ಯಕ್ಷ ಈಶ್ವರ ಬಿ. ನಾಯ್ಕ ಉದ್ಘಾಟಿಸಿದರು. 
ಉಪನ್ಯಾಸಕರಾಗಿ ಆಗಮಿಸಿದ್ದ ದಿ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನುಭಾಗ್ ಅವರು ದಿವಂಗತ ಡಿ.ದೇವರಾಜ ಅವರ ಸಾಧನೆಯ ಕುರಿತು ಉಪನ್ಯಾಸ ನೀಡಿದರು. 
ವೇದಿಕೆಯಲ್ಲಿ ತಾ.ಪಂ ಸದಸ್ಯರಾದ ಮಾಹಾಬಲೇಶ್ವರ ನಾಯ್ಕ, ಜಯಲಕ್ಮಿ  ಗೊಂಡ,  ಹನುಮಂತ ನಾಯ್ಕ, ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ  ತಾ.ಪಂ. ಕಾರ್ಯನಿರ್ವಹಣಾಧಿಕಾರಿ  ಸಿ.ಟಿ.ನಾಯ್ಕ, 
ಪ್ರಭಾರ ಬಿಸಿ‌ಎಂ ವಿಸ್ತಾರಣಾಧಿಕಾರಿ ಅನಂತ ಭಟ್ಕಳ ಉಪಸ್ಥಿತರಿದ್ದರು.  

೨೦೧೬-೧೭ ನೇ ಸಾಲಿನಲ್ಲಿ  ಎಸ್,ಎಸ್,ಎಲ್.ಸಿ. ಪರೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ ತಾಲೂಕಿಗೆ  ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಶ್ರೇಯಾಂಕ ಶ್ರೀಧರ ಶೇಟ್ ಹಾಗೂ ವಿದ್ಯಾರ್ಥಿ ನಿಲಯದಲ್ಲಿದ್ದು  ಅತಿ ಹೆಚ್ಚು ಅಂಕ ಗಳಿಸಿದ  ಮನೋಜ್ ಬಡಿಯಾ ಗೊಂಡ  ಇವರಿಗೆ ಸನ್ಮಾನಿಸಲಾಯಿತು. 

ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮುರ್ಡೆಶ್ವರದ ವಿದ್ಯಾರ್ಥಿಗಳಾದ ಅಭಿಶೇಕ್ ನಾಯ್ಕ, ಸುಬ್ರಮಣ್ಯ, ಲಂಬೊಧರ,  ಜನಾರ್ದನ ಹಾಗೂ ಲೋಹಿತ ಇವರಿಂದ ಒನಕೆ ಒಬೌವ ರೂಪಕ ಪ್ರದರ್ಶಿಸಲಾಯಿತು. 

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ ಸ್ವಾಗತಿಸಿದರು. ಕುಂಟವಾಣಿ ಸಿ.ಆರ್.ಪಿ. ಸುರೇಶ ಎನ್. ಮುರ್ಡೇಶ್ವರ ನಿರೂಪಿಸಿದರು. ಅನಂತ ಭಟ್ಕಳ ವಂದಿಸಿದರು. 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...