ಭಟ್ಕಳ: ತಾಲೂಕಾ ಮಟ್ಟದ ಕ್ರೀಡಾಕೂಟ-ಮಿಂಚಿದ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು

Source: so english | By Arshad Koppa | Published on 24th August 2017, 8:41 AM | Coastal News | Sports News |

ಭಟ್ಕಳ: ಬೈಲೂರಿನ ಸರಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಬಿನಾ ವೈದ್ಯ ಪದವಿ ಪೂರ್ವ ಮಹಾವಿದ್ಯಾಲಯದವರು ಆಯೋಜಿಸಿದ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು, ಬಾಲಕರ ವಿಭಾಗದಲ್ಲಿ ಅಭಿಷೇಕ ನಾಯ್ಕ  400 ಮೀ. ಓಟ ಪ್ರಥಮ, ಉದ್ದ ಜಿಗಿತ ದ್ವಿತೀಯ, ಮಣಿರಾಜ ನಾಯ್ಕ 3000 ಮೀ.ಓಟ. ಪ್ರಥಮ, ಗುಡ್ಡಗಾಡು ಓಟ ಪ್ರಥಮ ಹಾಗೂ 1500 ಮೀ.ಓಟ ತೃತೀಯ, ಜಯರಾಮ ಮಡಿವಾಳ 1500 ಮೀ. ಓಟ ಪ್ರಥಮ, 800ಮೀ.ಓಟ ಪ್ರಥಮ ಹಾಗೂ 400 ಮೀ.ಓಟ ದ್ವೀತಿಯ, ಶಿರಾಜ್ ಅಹಮ್ಮದ್ 5000 ಮೀ. ನಡಿಗೆ ಪ್ರಥಮ, ಜಯರಾಮ, ಮಣ ರಾಜ, ಆಭಿಷೇಕ, ಮಹೇಶ 4 x 400 ರಿಲೇ ಪ್ರಥಮ, ಪ್ರದೀಪ ಆರ್.ಹರಿಜನ ಚದುರಂಗದಾಟ ಪ್ರಥಮ , ಸುದೀಪ ನಾಯ್ಕ 110 ಮೀ. ಅಡೆತಡೆ ಓಟ ದ್ವಿತೀಯ ಹಾಗೂ  100 ಮೀ.ಓಟ  ತೃತೀಯ, ಅಬ್ದುಲ್ ಸಲಾಂ 3000 ಮೀ.ಓಟ ದ್ವಿತೀಯ, ಶಶಾಂಕ ನಾಯ್ಕ 400 ಮೀ. ಅಡೆತಡೆ ಓಟ ದ್ವಿತೀಯ, ಸಚಿನ್ ನಾಯ್ಕ ಎತ್ತರ ಜಿಗಿತ ತೃತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ನಯನ ಮೊಗೇರ ಚಕ್ರ ಎಸೆತದಲ್ಲಿ ಪ್ರಥಮ, ಸೀಮಾ ನಾಯ್ಕ 400 ಮೀ. ಓಟ ಪ್ರಥಮ, ಈಟಿ ಎಸೆತ ದ್ವಿತೀಯ, ಪವಿತ್ರ ಮೊಗೇರ ಎತ್ತರ ಜಿಗಿತ ಪ್ರಥಮ, ಜ್ಯೋತಿ ನಾಯ್ಕ ಚದುರಂಗದಾಟ ಪ್ರಥಮ ಹಾಗೂ ನವ್ಯ.ಆರ್.ನಾಯ್ಕ 800 ಮೀ.ಓಟ ದ್ವಿತೀಯ, 3ಕಿ.ಮೀ ನಡಿಗೆ ದ್ವಿತೀಯ ಹಾಗೂ ಟ್ರಿಪಲ್ ಜಂಪ್ ತೃತೀಯ, ದಿವ್ಯಾ ಆರ್ ಖಾರ್ವಿ ಟ್ರಿಪಲ್ ಜಂಪ್ ದ್ವಿತೀಯ , ಪೂಜಾ ಎಸ್ ಕಂಚುಗಾರ 3 ಕಿ.ಮೀ ನಡಿಗೆ ತೃತೀಯ, ನಾಗಶ್ರೀ ನಾಯ್ಕ 100 ಮೀ. ಓಟ ತೃತೀಯ ಮತ್ತು ರೇಖಾ.ಬಿ.ನಾಯ್ಕ  100 ಮೀ. ಅಡೆತಡೆ ಓಟ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುರೇಶ ನಾಯಕ್ ಟ್ರಸ್ಟಿ ಮೆನೇಜರ್ ಶ್ರೀ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲ ವಿರೇಂದ್ರ ಶಾನಭಾಗ ಮತ್ತು ದೈಹಿಕ ಶಿಕ್ಷಕರಾದ ವಿನಾಯಕ ನಾಯ್ಕ  ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್