ನೋಟು ಅಮಾನ್ಯೀಕರಣ ವಿಷಯದಲ್ಲಿ ರಾಷ್ಟ್ರಪತಿಗಳ ಹಸ್ತಕ್ಷೇಪಕ್ಕೆ ಕಾಂಗ್ರೇಸ್ ಆಗ್ರಹ

Source: sonews | By Staff Correspondent | Published on 8th November 2017, 7:36 PM | Coastal News | Don't Miss |

ಭಟ್ಕಳ: ದೇಶದ ಆರ್ಥಿಕತೆಯನ್ನು ಬುಡಮೇಲುಗೊಳಿಸುವ ನೋಟು ಅಮಾನ್ಯೀಕರಣಗೊಂಡು ಒಂದು ವರ್ಷ ಪೂರ್ಣಗೊಂಡಿದ್ದು ಇದು ಕೇಂದ್ರ ಸರ್ಕಾರದ ಅಸಂಜಸ ಕ್ರಮವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಹಸ್ತಕ್ಷೇಪ ಮಾಡಬೇಕೆಂದು ಆಗ್ರಹಿಸಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಬುಧವಾರ ಸಯಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರವನ್ನು ಅರ್ಪಿಸಲಾಯಿತು. 
     
2016 ನವೆಂಬರ್ 8ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಎಂದು 500ರೂ. ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಅಧಿಕೃತವಾಗಿ ರದ್ದುಗೊಳಿಸಿದರು. ಈ ಘೋಷಣೆಯಿಂದಾಗಿ ಬಹುತೇಕ ನಗದು ರೂಪದಲ್ಲಿ ವ್ಯವಹಾರ ನಡೆಸುತ್ತಿದ್ದ ಭಾರತದಂತಹ ದೇಶದಲ್ಲಿ ಶೇ.86ರಷ್ಟು ನೋಟುಗಳು ಅಮಾನ್ಯೀಕರಣಗೊಂಡವು. ಇದರಿಂದಾಗಿ ದೇಶದ ತುಂಬೆಲ್ಲಾ ಭೀಕರ ಅವ್ಯವಸ್ಥೆ ಮತ್ತು ಅರಾಜಕತೆಗಳು ಉಂಟಾಗಿದ್ದು ಅದರ ದುಷ್ಪರಿಣಾಮಗಳನ್ನು ಇಂದೂ ಸಹ ಜನರು ಎದುರಿಸುತ್ತಿದ್ದಾರೆ. ದೇಶದ ಜನರಿಗೆ ಮತ್ತು ದೇಶದ ಆರ್ಥಿಕತೆಗೆ ತೀವ್ರ ತೊಂದರೆ ಉಂಟು ಮಾಡಿದ ಅಪಾಯಕಾರಿ ನೋಟು ಅಮಾನ್ಯೀಕರಣ ಪ್ರಯೋಗದ ಕುರಿತಂತೆ ನಮಗೆ ಸರಕಾರದಿಂದ ನಿರುಪಯೋಗಿ ಸ್ಪಷ್ಟನೆಗಳು ಬೇಕಾಗಿಲ್ಲ. ಈ ಪ್ರಕ್ರಿಯೆಯ ವೇಳೆ ಉಂಟಾದ ಸಾವು ನೋವುಗಳು ನಿಜಕ್ಕೂ ಖೇದಕರವಾಗಿದೆ. ಈ ವಿವೇಚನಾರಹಿತವಾದ ನೋಟ್ ಬ್ಯಾನ್‍ನಿಂದ ಉಂಟಾದ ದುಷ್ಪರಿಣಾಮಗಳನ್ನು ಸಾವು ನೋವುಗಳನ್ನು ಗುರುತಿಸಿ ಅದಕ್ಕೆ ನೊಂದ ಕುಟುಂಬಗಳಿಗೆ ಪರಿಹಾರ ಕೊಡಿಸಬೇಕು. ಈ ಬಗ್ಗೆ ನೀವು ವಹಿಸುವ ಹಸ್ತಕ್ಷೇಪವು ನಿಮ್ಮನ್ನು ಜನರೆಲ್ಲಾ ಭಾರತದ ಹೆಮ್ಮೆಯ ರಾಷ್ಟ್ರಪತಿ ಎಂದು ನೆನಪಿಡುವಂತೆ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕ, ಮುಖಂಡರಾದ ರಾಮಮೋಗೇರ್, ಜಾಲಿ. ಪಟ್ಟಣಪಂಚಾಯತ್ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್, ವಿಷ್ಣುದೇವಾಡಿಗ, ಸೈಯ್ಯದ್ ಅಲಿ, ತಾ.ಪಂ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.(¥

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...