ಭಟ್ಕಳ: ಒಟಿಸಿ ಮೂಲಕ ಜಾತಿ ಮತ್ತು ಆದಾಯಾ ಪತ್ರ ವಿತರಣೆ-ಪಡಿತರ ಚೀಟಿ ಒದಗಿಸಲು ತಹಸೀಲ್ದಾರರ ಮನವಿ

Source: so english | By Arshad Koppa | Published on 7th December 2016, 8:27 AM | Coastal News |

ಭಟ್ಕಳ, ಡಿ. ೬: ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯತಿಯ ನಿವಾಸಿಗಳಿಗೆ ಒಟಿಸಿ ಮೂಲಕ ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಿಸುವ ಸಲುವಾಗಿ ಪಡಿತರ ಚೀಟಿಯೊಂದಿಗೆ ಕುಟುಂಬದ ಎಲ್ಲಾ ಸದಸ್ಯರ ವಿವರಗಳನ್ನು (ಆಧಾರ ಸಂಖ್ಯೆ ಮತ್ತು ಚುನಾವಣಾ ಗುರುತಿನ ಚೀಟಿ ಸಂಖ್ಯೆಯ ಮಾಹಿತಿಯೊಂದಿಗೆ) ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಹಾಜರಿರುವ ತಹಸೀಲ್ದಾರರ ಕಛೇರಿಯ ಸಿಬ್ಬಂದಿಗಳ ಬಳಿ ದಿನಾಂಕ 6-12-2016 ರಿಂದ 15-12-2016ರ ಒಳಗೆ ನೀಡಿ ಸಹಕರಿಸಲು ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ಸಾರ್ವಜನಿಕರಿಗೆ ಈ ಮೂಲಕ ತಿಳಿಸಿದೆ..

ಇಂತಿ 
ತಹಸೀಲ್ದಾರರು, ಭಟ್ಕಳ.

Read These Next