ಭಟ್ಕಳ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬದ ಸವಿನೆನಪು ಸಂಚಿಕೆ ಬಿಡುಗಡೆಗೆ ನಿರ್ಧಾರ

Source: radhakrishna | By Arshad Koppa | Published on 23rd October 2017, 7:45 AM | Coastal News |

ಭಟ್ಕಳ: ಕಳೆದ 1993ರಲ್ಲಿ ಉದ್ಫಾಟನೆಗೊಂಡ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು  ಅನೇಕ ಸಾಮಾಜಿಕ, ಜನಪರ ಕಾರ್ಯಗಳನ್ನು ಮಾಡುತ್ತಾ ಜನರೊಂದಿಗೆ ಬೆರೆತು ಉತ್ತಮ ಬೆಳವಣಿಗೆಯನ್ನು ಕಂಡಿದೆ ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಕಾರ್ಯದರ್ಶಿ ಭಾಸ್ಕರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಹಿಂದೂ-ಮುಸ್ಲಿಂ ಪರಸ್ಪರ ಭಾವೈಕ್ಯತೆಯಿಂದ, ಸದಾ ಚಟುವಟಿಕೆಯಿಂದ ಇರುತ್ತಿದ್ದು ತನ್ನ ಬೆಳ್ಳಿಹಬ್ಬವನ್ನು 2017-18ನೇ ಸಾಲಿನಲ್ಲಿ ಆಚರಿಸಿಕೊಳ್ಳುತ್ತಿರುವ ಬೆಳ್ಳಿಹಬ್ಬ ಸಮಾರಂಭವನ್ನು 2017ರ ಜನವರಿಯಲ್ಲಿ ನಾಡಿನ ಖ್ಯಾತ ಕವಿ ನಿಸಾರ್ ಅಹಮ್ಮದ್ ಅವರು ಉದ್ಘಾಟಿಸಿದ್ದರು. 2017ನೇ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು  ಮುಕ್ತಾಯ ಸಮಾರಂಭವನ್ನು ಡಿಸೆಂಬರ್‍ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.  ಬೆಳ್ಳಿ ಹಬ್ಬ ಮಹೋತ್ಸವದ ಅಂಗವಾಗಿ ಸವಿನೆನಪು ಸಂಚಿಕೆಯೊಂದನ್ನು ಹೊರ ತರಲು ನಿರ್ಧರಿಸಲಾಗಿದ್ದು ಸಂಘದ ಆರಂಭ, ಕಾರ್ಯಚಟುವಟಿಕೆ, ಗುರಿ, ಸಾಧನೆಗಳನ್ನು ಮೆಲಕು ಹಾಕಲು ಉದ್ದೇಶಿಸಿಸಲಾಗಿದೆ. ಬೆಳ್ಳಿಹಬ್ಬ ಸಂಚಿಕೆಯು ಕನ್ನಡ, ಇಂಗ್ಲೀಷ್, ಉರ್ದು ಭಾಷೆಗಳಲ್ಲಿ ಇರುತ್ತಿದ್ದು ನಾಡಿನ ಸಮಸ್ತ ಜನತೆಯ ಕೈಸೇರಬೇಕು ಎನ್ನುವುದು ನಮ್ಮ ಸದಾಶಯ.  ಸವಿನೆನಪು ಸಂಚಿಕೆಗೆ ನಾವು ಲೇಖನಗಳನ್ನು, ಜಾಹೀರಾತುಗಳನ್ನು ಹಾಗೂ ಕವನ, ಕಥೆ, ಲಘು ಹಾಸ್ಯ ಬಳಸಿಕೊಳ್ಳಲು ನಿರ್ಧರಿಸಿದ್ದು ಲೇಖನ, ಕವನ, ಕಥೆ, ಲಘು ಹಾಸ್ಯ ಇವುಗಳನ್ನು ಕಂಪ್ಯೂಟರ್‍ನಲ್ಲಿ ಟೈಪ್ ಮಾಡಿ ಅಂಚೆಯ ಮೂಲಕ ಇಲ್ಲವೇ ಇಮೇಲ್ ([email protected]/kj.bhatkal @gmail.com) ಇಲ್ಲಿಗೆ ಕಳುಹಿಸಲು ಕೋರಲಾಗಿದೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...