ಭಟ್ಕಳ: ನೆಟ್ ವರ್ಕ ಸಮಸ್ಯೆ; ಕಳೆದ ಒಂದು ವಾರದಿಂದ ಸ್ಥಗಿತಗೊಂಡ ಉಪನೊಂದಾವಣೆ ಕಚೇರಿ

Source: sonews | By Sub Editor | Published on 10th August 2017, 11:23 PM | Coastal News | Don't Miss |

ಭಟ್ಕಳ: ಆಸ್ತಿ, ಭೂಮಿ, ಡೀಡ್,ಮದುವೆ, ಮತ್ತಿತರ ನೊಂದಣೆ ಕಾರ್ಯನಿರ್ವಹಿಸುವ ಭಟ್ಕಳ ಉಪನೊಂದವಣೆ ಕಚೇರಿ ಕಳೆದ ಒಂದು ವಾರದಿಂದ ನೆಟ್ ವರ್ಕ ಸಮಸ್ಯೆ ಹೇಳಿಕೊಂಡು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. 
ಕಚೇರಿ ಮುಂಭಾಗದಲ್ಲಿ ದೊಡ್ಡದೊಂದು ಸೂಚನಾ ಫಲಕವನ್ನು ಹಾಕಿ ಕೈತೊಳೆದುಕೊಂಡಿರುವ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. 
ಹಳ್ಳಿ ಪ್ರದೇಶದ ಜನರು ಸುಮಾರು ೩೦-೪೦ ಕಿ,ಮೀ ದೂರದಿಂದ ತಮ್ಮ ಭೂಮಿ, ವಿವಾಹ ನೊಂದಣೆ ಮತ್ತಿತರ ಕಾರ್ಯಗಳಿಗೆ ಭಟ್ಕಳಕ್ಕೆ ಬಂದು ಉಪನೊಂದಾವಣೆ ಕಚೇರಿಗೆ ಸುತ್ತು ಹೊಡೆದು ಹೋಗುತ್ತಿರುವುದು ಮಾಮೂಲಿಯಾಗಿದೆ. ಅಲ್ಲದೆ ಬಂದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿದೆ. 
ಈ ಕುರಿತಂತೆ ಉಪನೊಂದಾವಣಾಧಿಕಾರಿ ರಾಜೇಶ್ವರಿ ಹೆಗಡೆ ಯವರನ್ನು ವಿಚಾರಿಸಿದಾಗ ಕಳೆದ ಒಂದು ವಾರದಿಂದ ಇಂಟರ್ ನೆಟ್ ಸಮಸ್ಯೆ ಉಂಟಾಗಿದ್ದು ಸರ್ವರ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಇಲ್ಲಿನ ಯಾವುದೇ ಕಾರ್ಯಗಳು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ದೂರನ್ನು ನೀಡಿರುವುದಾಗಿ ತಿಳಿಸಿದ್ದಾರೆ. 
ಕಳೆದ ವರ್ಷವೂ ಇಂತಹದ್ದೆ ಸಮಸ್ಯೆ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಒಂದು ತಿಂಗಳು ಕಚೇರಿ ಕಾರ್ಯನಿರ್ವಹಿಸದೆ ಸ್ಥಗಿತೊಂಡಿದ್ದನ್ನು ಇಲ್ಲಿ ಸ್ಮರಿಸಬಹುದುದಾಗಿದೆ. 

Read These Next

ಕುಮಟಾ: ಹಿಂಸೆಗೆ ಜಾರಿದ ಸಂಘಪರಿವಾರದ ಪ್ರತಿಭಟನೆ; ಪೊಲೀಸ್ ವ್ಯಾನ್ ಬೆಂಕಿಗಾಹುತಿ,ಹಲವು ಪೊಲೀಸರಿಗೆ ಗಾಯ

ಕುಮಟಾ: ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗು ಸಂಘಪರಿವಾರ ಹಮ್ಮಿಕೊಂಡಿದ್ದ ರ್ಯಾಲಿಯಿಂದ ಕುಮಟಾ ಅಕ್ಷರಶಃ ...

ಕುಮಟಾ: ಹಿಂಸೆಗೆ ಜಾರಿದ ಸಂಘಪರಿವಾರದ ಪ್ರತಿಭಟನೆ; ಪೊಲೀಸ್ ವ್ಯಾನ್ ಬೆಂಕಿಗಾಹುತಿ,ಹಲವು ಪೊಲೀಸರಿಗೆ ಗಾಯ

ಕುಮಟಾ: ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗು ಸಂಘಪರಿವಾರ ಹಮ್ಮಿಕೊಂಡಿದ್ದ ರ್ಯಾಲಿಯಿಂದ ಕುಮಟಾ ಅಕ್ಷರಶಃ ...