ದುಬೈ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳದ ಸಹೋದರಿಯರಿಗೆ ಪ್ರಥಮ ಹಾಗೂ ತೃತೀಯಾ ಬಹುಮಾನ

Source: sonews | By sub editor | Published on 25th May 2017, 4:27 PM | Coastal News | National News | Gulf News | Special Report | Don't Miss |

ಭಟ್ಕಳ: ಇತ್ತಿಚೆಗೆ ದುಬೈಯಲ್ಲಿ ಜರಗಿದ ೧೨ನೇ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳ ಮೂಲದ ಇಬ್ಬರು ಸಹೋದರಿಯರಾದ ಫಾತಿಮಾ ಮೊಹತೆಶಮ್ ಹಾಗೂ ಆಯೀಶಾ ಮೊಹತೆಶಮ್ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದು ಭಟ್ಕಳದ ಮುಸ್ಲಿಮ್ ಸಮುದಾಯವನ್ನು ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಂತಾಗಿದೆ. 
ಕೆಲ ವರ್ಷಗಳ ಹಿಂದೆ ಈ ಸಹೋದರಿಯರ ತಾಯಿ ಫಾಯಿಝಾ ಮೊಹತೆಶಮ್ ರು  ಕೂಡ ಇಂತಹದ್ದೇ ಕುರ್‌ಆನ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಗಳಿಸುವುದರ ಮೂಲಕ ಇಲ್ಲಿನ ಮುಸ್ಲಿಮರ ಕೀರ್ತಿಯನ್ನು ಗಲ್ಫ್ ರಾಷ್ಟ್ರಗಳಲ್ಲಿ ಪಸರಿಸಿದ್ದರು. 
ಮುಹಮ್ಮದ್ ಬಿನ್ ರಾಷಿದ್ ಸೆಂಟರ್ ಫಾರ್ ಕಲ್ಚರಲ್ ಅಂಡ್ ಸೋಶಿಯಲ್ ಅಂಡರ್‌ಸ್ಟ್ಯಾಂಡಿಂಗ್ ಸಂಸ್ಥೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಅರಬೇತರ ಸ್ಪರ್ಧಾಳುಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇದರಲ್ಲಿ ಭಟ್ಕಳದ ಮೊಹತೆಶಮ್ ಸಹೋದರಿಯರು ಸೇರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ಸ್ಪರ್ಧಾಳುಗಳನ್ನು ಹಿಂದಿಕ್ಕಿದ ಈ ಸಹೋದರಿಯರು ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ಅವರ ಪ್ರತಿಭೆಯನ್ನು ತೋರಿಸುತ್ತದೆ. 
ಮೊಹತೆಶಮ್ ಸಹೋದರಿಯರಿಗೆ ಅಲ್ಲಿನ ಶೇಖ್ ಸ‌ಈದ್ ಬಿನ್ ಹಷರ್ ಅಲ್ ಮಖ್ತೂಮ್ ದುಬೈ ಇಂಟರ್ ನ್ಯಾಶನಲ್ ಹೋಲಿ ಕುರ್‌ಆನ್ ಅವಾರ್ಡ ನೀಡಿ ಗೌರವಿಸಿದರು. 
ಜಾನ್ ಸಿದ್ದೀಖ್ ಮೊಹತೆಶಮ್ ತಮ್ಮ ಇಬ್ಬರು ಪುತ್ರಿಯರ ಸಾಧನೆ ಕುರಿತಂತೆ ಫಾತಿಮಾ ಹಿರಿಯ ಪುತ್ರಿ ೧೨ನೇ ವರ್ಷದಲ್ಲಿ ಕುರ್‌ಆನ್ ಕಂಠಸ್ಥ(ಹಿಫ್ಝ್) ಗೊಳಿಸಿದ್ದು ಕಿರಿಯ ಪುತ್ರಿ ಆಯಿಶಾ ತನ್ನ ೧೧ನೇ ವಯಸ್ಸಿನಲ್ಲಿ ಕುರ್‌ಆನ್ ಸಂಪೂರ್ಣವಾಗಿ ಕಂಠಪಾಟ ಮಾಡಿದ್ದು, ಇಬ್ಬರಿಗೂ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅವರ ತಾಯಿ ಪ್ರೋತ್ಸಾಹಿಸಿದ್ದರು ಮತ್ತು ತರಬೇತಿಯನ್ನು ನೀಡಿದ್ದರು. ಫಾತಿಮಾ ಹಲವಾರು ಕುರ್‌ಆನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಳು. ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಫಾತಿಮಾ ಹಾಗೂ ೫ನೇ ತರಗತಿಯಲ್ಲಿ ಓದುತ್ತಿರುವ ಆಯೀಶಾ ದುಬೈಯ ಸಂಟ್ರೆಲ್ ಸ್ಕೂಲ್ ವಿದ್ಯಾರ್ಥಿಗಳಾಗಿದ್ದಾರೆ. ಇವರ ಮಾತೃಭಾಷೆ ನವಾಯತಿ ಆಗಿದ್ದರೂ ಸಹ ಅರಬಿಕ್ ಭಾಷೆಯಲ್ಲಿ ಪ್ರಭುತ್ವವನ್ನು ಪಡೆದುಕೊಂಡಿದ್ದಾರೆ ಎಂದು ಜಾನ್ ಸಿದ್ದೀಕ್ ಮೊಹತೆಶಮ್ ತಿಳಿಸುತ್ತಾರೆ. 
ಈ ಕುರಿತು ತನ್ನ ಅನಿಸಿಕೆಯನ್ನು ವ್ಯಕ್ತ ಪಡಿಸಿದ ಫಾತಿಮಾ ಕುರ್‌ಆನ್ ದೈವೀಕ ಗ್ರಂಥವಾಗಿದೆ. ಇದು ಮನುಷ್ಯರ ಮಾರ್ಗದರ್ಶನಕ್ಕಾಗಿ ಬಂದಿದ್ದು ಇದರ ಅನುಸರಣೆಯಿಂದ ನಮಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದಿದ್ದು ಸೃಷ್ಟಿಕರ್ತನ ಅನುಗ್ರಹವೇ ನನಗೆ ಇಂತಹ ಗೌರವ ಒಲಿದುಬಂದಿದೆ. ಇದಕ್ಕಾಗಿ ನನ್ನ ಪಾಲಕರು, ಶಿಕ್ಷಕರ ತ್ಯಾಗ ಬಹಳಷ್ಟಿದೆ ಎಂದರು. 
ಇಬ್ಬರು ಸಹೋದರಿಯರ ಈ ಅಗಾಧ ಸಾಧನೆಗೆ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಸೇರಿದಂತೆ ದುಬೈಯ ಜಮಾ‌ಅತ್ ಪದಾಧಿಕಾರಿಗಳು, ಹಾಗೂ ಎಸ್.ಎಂ.ಸೈಯ್ಯದ ಖಲೀಲುರ್ರಹ್ಮಾನ್, ಮುಹಮ್ಮದ್ ಅಶ್ಫಾಖ್ ಸಾದಾ, ಮುಹಮ್ಮದ್ ಯೂಸೂಫ್ ಬರ್ಮಾವರ್ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. 

Read These Next

ಮುಸ್ಲಿಮರ ಮತಗಳು ಬೇಡವೆನ್ನುವ ಹೆಗಡೆ ಮುಸ್ಲಿಮ್ ರೌಡಿಯ ಸಂಪರ್ಕ; ವೇದಿಕೆ ಹಂಚಿಕೊಂಡ ಫೋಟೊ ವೈರಲ್

ಕಾರವಾರ : ಮುಸ್ಲಿಮರ ಮತಗಳು ತನಗೆ ಬೇಡ ಎನ್ನುವ ಕೇಂದ್ರ ಸಚಿವ ಅನಂತ್ ಕುಮಾರ್ ಹಗಡೆ ಈಗ ಅದೇ ಮುಸ್ಲಿಮ್ ರೌಡಿಶೀಟರ್ ನೊಂದಿಗೆ ...

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...