ಭಟ್ಕಳ: ಶಾಲೆ  ಬಿಟ್ಟ ಕಿಶೋರಿಯರಿಗಾಗಿ ವೃತ್ತಿ ತರಬೇತಿ ಕಾರ್ಯಕ್ರಮ ಉದ್ಘಾಟನೆ

Source: radhakrishna | By Arshad Koppa | Published on 16th November 2017, 8:38 AM | Coastal News |

ಭಟ್ಕಳ: ಬ್ಯೂಟಿಶೀಯನ್ ನಂತಹ ವೃತ್ತಿಯಲ್ಲಿ ಉತ್ತಮ ಪರಿಣಿತಿ ಹೊಂದಿ ಸ್ವ ಉದ್ಯೋಗ ಮಾಡುವವರಿಗೆ ಅತ್ಯಂತ ಬೇಡಿಕೆ ಇದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಮರಿಸ್ವಾಮಿ ಹೇಳಿದರು. 


ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ, ಶಿಶು ಅಭಿವೃದ್ಧಿ ಇಲಾಖೆ ಭಟ್ಕಳ ಹಾಗೂ ಅರುಣೋದಯ ಸಂಸ್ಥೆ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ  ಶಾಲೆ  ಬಿಟ್ಟ ಕಿಶೋರಿಯರಿಗಾಗಿ ಸೋನಾರಕೇರಿಯ ಸರ್ಕಾರಿ ಶಾಲೆಯಲ್ಲಿ ಪ್ರಾರಂಭಿಸಲಾದ  ವೃತ್ತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅರುಣೋದಯ ಸಂಸ್ಥೆಯ ಅಧ್ಯಕ್ಷ   ಸತೀಶ ಪಿ.ನಾಯ್ಕ ಮಾತನಾಡಿ ನಾವು ಮಾಡುವ ವೃತ್ತಿಯಲ್ಲಿ ಕೀಳರಿಮೆ ಇರಬಾರದು. ತಾವು ಮಾಡುವ ವೃತ್ತಿಯಲ್ಲಿ ಶೃದ್ಧೆ ಹಾಗೂ ಗೌರವವನ್ನು ಇಟ್ಟುಕೊಂಡಲ್ಲಿ ಯಶಸ್ಸು ಸಾಧ್ಯ ಎಂದರು. 
ಸಂಪನ್ಮೂಲ ವ್ಯಕ್ತಿಗಳಾದ ಸವಿತಾ ಮುಂಡೂರ, ಲಾವಣ್ಯ ಉಪಸ್ಥಿತರಿದ್ದರು. 
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಬಲಾ ಯೋಜನೆಯ ಕುರಿತು ವಿವರಿಸಿದರು. ಹಿರಿಯ ಮೇಲ್ವಿಚಾರಕಿ ವಾಸಂತಿ ದಾಯಿಮನೆ ನಿರೂಪಿಸಿದರು. 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...