ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಂದಾಯ ನಿರೀಕ್ಷಕರ ಭೇಟಿ

Source: sonews | By Staff Correspondent | Published on 18th September 2017, 11:42 PM | Coastal News | Don't Miss |

ಭಟ್ಕಳ: ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಇಲ್ಲಿನ ಸಾಗರ ರಸ್ತೆಯ ಘನ ತ್ಯಾಜ್ಯ ವಿಲೇವಾರಿಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 
ಪಟ್ಟಣ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಹಾಜರಾಗಿ ಪ್ರತಿನಿತ್ಯ ಘನತ್ಯಾಜ್ಯ ವಾಹನ ಪರಿಶೀಲನೆ ಜೊತೆಗೆ ಹಸಿ ಮತ್ತು ಒಣ ಕಸದ ಕುರಿತಂತೆ ವರದಿ ನೀಡಬೇಕೆಂದು ಸೆ.೧೪ ರಂದು ಜಿಲ್ಲಾಧಿಕಾರಿ ಆದೇಶಿಸಿದ್ದರು.  ಭಟ್ಕಳ ವ್ಯಾಪ್ತಿಯಲ್ಲಿನ ತಾಲುಕಾ ಕಂದಾಯ ನಿರೀಕ್ಷಕ ರಾಜು ಕೆ. ನಾಯ್ಕ ಮತ್ತು ಗ್ರಾಮ ಲೆಕ್ಕಿಗ ಶಂಭು ಕೆ. ಸೋಮವಾರದಂದು ಘsಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮನೆ ಮನೆಯಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದ್ದು, ಈ ಕುರಿತು ತಾಲೂಕಾ ವ್ಯಾಪ್ತಿಯಲ್ಲಿ ನೆಲ ಭರ್ತಿ ಸ್ಥಳ ಪರಿಶೀಲನೆ ಕಾರ್ಯವನ್ನು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಪ್ರತಿನಿತ್ಯ ಬೆಳಿಗ್ಗೆ ೭ ರಿಂದ ೧೨ ಗಂಟೆಯವರೆಗೆ ಮತ್ತು ಮಧ್ಯಾಹ್ನ ೩ ಗಂಟೆಯಿಂದ ೭ ಗಂಟೆಯವರೆಗೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಂದ ಆದೇಶ ನೀಡಲಾಗಿದೆ. ಸೋಮವಾರದಂದು ತಾಲುಕಾ ಕಂದಾಯ ನಿರೀಕ್ಷಕ ರಾಜು ಕೆ. ನಾಯ್ಕ ಮತ್ತು ಗ್ರಾಮ ಲೆಕ್ಕಿಗ ಶಂಭು ಕೆ. ಬೆಳಿಗ್ಗೆ ಸಾಗರ ರಸ್ತೆಯಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ನಗರ ವ್ಯಾಪ್ತಿಯಲ್ಲಿನ ಘನತ್ಯಾಜ್ಯವನ್ನು ಸಂಗ್ರಹಿಸುವ ವಾಹನಗಳನ್ನು, ಸಿಬ್ಬಂದಿಯು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಬಗ್ಗೆ ಪರಿಶೀಲಿಸಿ ವಿಂಗಡಣೆ ಮಾಡಿ ಸಿಬ್ಬಂದಿಗಳಿಗೆ ಸರಿಯಾದ ಸೂಚನೆ ನೀಡಿದರು. 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...