ಭಟ್ಕಳ: ಖಾಸಗಿ ಬ್ಯಾಂಕ್ ಖಾತೆ ಎಟಿಎಂ ಗಳಿಂದ 3ಲಕ್ಷಕ್ಕೂ ಅಧಿಕ ಹಣ ವಂಚನೆ

Source: sonews | By Staff Correspondent | Published on 18th March 2019, 7:36 PM | Coastal News | Don't Miss |

ಭಟ್ಕಳ: ಇಲ್ಲಿನ ಖಾಸಗಿ ಬ್ಯಾಂಕ್ ಶಾಖೆಯ 5 ಮಂದಿ ಗ್ರಾಹಕರ ಖಾತೆಯಿಂದ ಸುಮಾರು 3ಲಕ್ಷಕ್ಕೂ ಅಧಿಕ ಹಣವನ್ನು ಅಪರಿಚಿತ ವ್ಯಕ್ತಿಗಳು ಡ್ರಾ ಮಾಡಿಕೊಂಡಿದ್ದಾಗಿ ತಿಳಿದುಬಂದಿದ್ದು ವಂಚನೆಗೊಳಗಾದ ಗ್ರಾಹಕರು ಆತಂಕಿತರಾಗಿದ್ದಾರೆ.

ಈ ಕುರಿತು ಕೇವಲ 10ನಿಮಿಷದಲ್ಲೇ 60ಸಾವಿರ ಹಣವನ್ನು ತನ್ನ ಖಾತೆಯಿಂದ ಅಪರಿಚಿತರು ವಂಚಿಸಿದ್ದಾರೆ ಎಂದು ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಚಿಸದ ವಂಚನೆಗೆ ಒಳಗಾದ ಗ್ರಾಹಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂದು ತನ್ನ ತಾನು ಅಂಗಡಿಯೊಂದರಲ್ಲಿ ಕುಳಿತುಕೊಂಡಾಗ ತನ್ನ ಮೊಬೈಲ್ ಸಂಖ್ಯೆಗೆ  ಬ್ಯಾಂಕ್ ಖಾತೆಯಿಂದ 10ಸಾವಿರ ರೂ ಡ್ರಾ ಮಾಡಿಕೊಂಡಿದ್ದಾಗಿ ಸಂದೇಶವೊಂದು ಬಂದಿದ್ದು ದಿಗಿಲುಗೊಂಡು ಬ್ಯಾಂಕಿಗೆ ಹೋಗುವ 10 ನಿಮಿಷದೊಳಗೆ 60ಸಾವಿರ ರೂಪಾಯಿ ಡ್ರಾ ಆಗಿರುವ ಕುರಿತು ಮೊಬೈಲ್ ಸಂದೇಶ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತಂತೆ ಪೊಲೀಸ್ ಠಾಣೆಗೆ ದೂರನ್ನು ನೀಡಲು ಹೋದಾಗ ಯಾರ ವಿರುದ್ಧ ದೂರು ದಾಖಲಿಸಬೇಕು ಎಂಬ ಗೊಂದಲ ಉಂಟಾಗಿದ್ದು ಪೊಲೀಸರು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಂತರ  ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದಲ್ಲಿ ವಿಚಾರಿಸಲಾಗಿ ಆಂಧ್ರಾಪ್ರದೇಶದ ಯಾವುದೋ ಹಳ್ಳಿಯಿಂದ ಈ ಹಣ ಡ್ರಾ ಆಗಿರುವ ಕುರಿತಂತೆ ಮಾಹಿತಿ ದೊರಕಿದೆ. 

ಆಕ್ರೋಶಗೊಂಡ ವಂಚನೆಗೊಳಗಾದವರು  ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡಿದ್ದು ನಾಳೆಯ ವರೆಗೆ ತಮ್ಮ ಹಣ ಖಾತೆ ಜಮಾ ಆಗದಿದ್ದಲ್ಲಿ ಬ್ಯಾಂಕ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ಭಟ್ಕಳ ಶಾಖಾ ವ್ಯವಸ್ಥಾಪಕರನ್ನು ವಿಚಾರಿಸಿದರೆ ಯಾವುದೇ ಸೂಕ್ತ ಉತ್ತರ ನೀಡದೆ ನಮ್ಮ ಮೇಲಾಧಿಕಾರಿಗಳು ಈ ಕುರಿತ ತನಿಖೆ ಕೈಗೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...