ಭಟ್ಕಳ: ನೇಣುಬಿಗಿದುಕೊಂಡು ವ್ಯಕ್ತಿ ಸಾವು

Source: sonews | By Staff Correspondent | Published on 9th August 2018, 12:15 AM | Coastal News | Don't Miss |

ಭಟ್ಕಳ: ನೇಣುಬಿಗಿದು ಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಯಲ್ವಡಿಕವೂರು ಗ್ರಾ.ಪಂ.ವ್ಯಾಪ್ತಿಯ ಹೆರೂರು ಎಂಬಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ನೇಣಿಗೆ ಶರಣಾದ ವ್ಯಕ್ತಿಯನ್ನು ಹೆರೂರು ನಿವಾಸಿ ಗೋಪಾಲ್ ಮಂಜು ಗೊಂಡ(೩೮) ಎಂದು ಗುರುತಿಸಲಾಗಿದೆ.

ಇವರು ಮಂಗಳವಾರ ದಂದು ರಾತ್ರಿ ಊಟವಾದ ನಂತರ ಮನೆಯಿಂದ ಹೊರಬಂದು ಹತ್ತಿರ ಗೇರು ತೋಟದಲ್ಲಿ ನೇಣುಬಿಗಿದುಕೊಂಡಿದ್ದು ಬುಧವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read These Next