ಭಟ್ಕಳ:   ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಯಕ್ಷಗಾನ ಬೊಂಬೆಯಾಟ ಪ್ರದರ್ಶನ

Source: so english | By Arshad Koppa | Published on 13th September 2017, 8:36 AM | Coastal News | Special Report |

ಗೊಂಬೆಯಾಟವು ನಮ್ಮ ಸಂಸ್ಕøತಿಯ ಪ್ರತೀಕವಾಗಿದ್ದು, ಅದನ್ನು ಉಳಿಸುವುದರ ಜೊತೆಗೆ ಸಂಸ್ಕಾರ ಮತ್ತು ಸಂಪ್ರದಾಯದ ಬೆಳವಣ ಗೆಯನ್ನು ಪ್ರಮುಖ ಉದ್ದೇಶವನ್ನಾಗಿಟ್ಟುಕೊಂಡು ಕುಮಟಾದಿಂದ ಕಾಸರಗೋಡಿನ ತನಕ ಆಯ್ದ 22 ಶಾಲೆಗಳಿಗೆ ಪ್ರವಾಸ ಮಾಡಿ ಈ ಕಲೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದೇವೆಂದು ಭಾಸ್ಕರ ಕಾಮತ ಹೇಳಿದರು.  
    

ಅವರು  ಭಟ್ಕಳದ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ ಇದರ 22 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಮತ್ತು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇವರ ಪ್ರಾಯೋಜಕತ್ವದಲ್ಲಿ “ಶಾಲೆಯಡೆಗೆ ಗೊಂಬೆ ನಡಿಗೆ’’ ಎನ್ನುವ ಕಾರ್ಯಕ್ರಮದಲ್ಲಿ ಗೊಂಬೆಯಾಟದ ಪ್ರಾತ್ಯಕ್ಷಿಕೆಯನ್ನು ನೀಡಿ ಹೇಳಿದರು. ವಿವಿಧ ಗೊಂಬೆಗಳ ಪ್ರಾತ್ಯಕ್ಷಿಕೆಯನ್ನು ವಿವಿಧ ಹಾವಭಾವದ ಮೂಲಕ ಅಭಿವ್ಯಕ್ತಿ ಪಡಿಸಿ ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರರಾದರು. ಸುಬ್ರಹ್ಮಣ್ಯದ ಸಂಸ್ಕøತ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವಿ.ಜಿ.ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಾಂಶುಪಾಲರಾದ ವೀರೆಂದ್ರ ಶ್ಯಾನಭಾಗ ವಂದಿಸಿದರು.  

Read These Next

ಗಾಂಜಾ ಸಮೇತ ಆರೋಪಿ ಬಂಧನ

ಮುಂಡಗೋಡ; ಖಚಿತ ಮಾಹಿತಿ ಪಡೆದ ಪೊಲೀಸರು ಆಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂದಿಸಿದ ಘಟನೆ ತಾಲೂಕಿನ ಕರಗಿನಕೊಪ್ಪ ...

ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ, 62ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ

2017ನೇ ಸಾಲಿನ ಪ್ರತಿಷ್ಠಿತ "ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ" ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರದಾನ