ಭಟ್ಕಳ:ಉತ್ತರ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ಶ್ರೀ ವಿಲ್ಫ್ರೆಡ್ ಡಿಸೋಜಾ ನೇಮಕ

Source: varthabhavan | By Arshad Koppa | Published on 23rd August 2017, 8:19 AM | Coastal News | Guest Editorial |

ಶ್ರೀ ವಿಲ್ಫ್ರೆಡ್ ಡಿಸೋಜಾ ಇವರು ಭಾರತ ಸರ್ಕಾರ, ಕ್ರೀಡಾ & ಯುವಜನ ಸೇವೆಗಳ ಮಂತ್ರಾಲಯದ ಸ್ವಾಯತ್ತ ಸಂಸ್ಥೆಯಾದ ನೆಹರು ಯುವ ಕೇಂದ್ರ, ಕಾರವಾರ (ಉತ್ತರ ಕನ್ನಡ ಜಿಲ್ಲೆ) ಇದರ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ (ಡಿವೈಸಿ) (ಹೆಚ್ಚುವರಿ ಕಾರ್ಯಭಾರ) ಇದೇ ಅಗಸ್ಟ್ 16, 2017 ರಂದು ಈ ಹಿಂದಿನ ಡಿವೈಸಿ ಶಿವಮೊಗ್ಗ ಜಿಲ್ಲೆಯ ಶ್ರೀಮತಿ ಜೆಸಿಂತಾ ಡಿಸೋಜ ಅವರಿಂದ ತಮ್ಮ ಅಧಿಕಾರವನ್ನು ವಹಿಸಿಕೊಂಡರು. ಶ್ರೀಮತಿ ಜೆಸಿಂತಾ ಡಿಸೋಜ, ಇವರು ಕಳೆದ 3 ವರ್ಷದಿಂದ ಉ.ಕ. ಜಿಲ್ಲೆಯ ಕಾರ್ಯಭಾರವನ್ನು ಹೆಚ್ಚುವರಿಯಾಗಿ ನೋಡಿಕೊಳ್ಳುತ್ತಾ ಬಂದಿದ್ದರು. ಶ್ರೀಯುತರು ಪ್ರಸ್ತುತ ಉಡುಪಿಯ ನೆಹರು ಯುವ ಕೇಂದ್ರದ ಪೂರ್ಣಪ್ರಮಾಣದ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಣೆಯನ್ನು ಮಾಡುತಿದ್ದಾರೆ. ಅಂದೇ ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ತಮ್ಮ ಪದಸ್ವೀಕಾರದ ಬಗ್ಗೆ ಮಾನ್ಯರಿಗೆ ತಿಳಿಸಿದ ತದನಂತರ ಉ.ಕ.ಜಿಲ್ಲೆಯ ವ್ಯಾಪ್ತಿಗೆ ಬರುವ 20 ರಾಷ್ಟೀಯ ಯುವ ಸ್ವಯಂ ಸೇವಕರು ಹಾಗೂ ಕಾರ್ಯಾಲಯದ ಸಿಬ್ಬಂದಿಯ ಜೊತೆ ವಿಚಾರ ವಿಮರ್ಶೆ ಮಾಡಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ಪಡೆದು ಎಲ್ಲಾ ರಾಷ್ಟೀಯ ಯುವ ಸ್ವಯಂ ಸೇವಕರು ನಿಷ್ಟೆ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಲು ಪ್ರೇರೇಪಿಸಿದರು. 
ಶ್ರೀ ವಿಲ್ಫ್ರೆಡ್ ಡಿಸೋಜಾ, ಇದೇ 7 ಏಪ್ರಿಲ್, 2017 ರಂದು ಭಾರತ ಸರ್ಕಾರದ ವತಿಯಿಂದ ನಿಯೋಜನೆ ಮೇರೆಗೆ ನೇಮಕಗೊಂಡಿರುತ್ತಾರೆ. ಇವರು ಹೊಸ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಪೂರ್ವದಲಿ,್ಲ ಪ್ರಖ್ಯಾತ ಹರಿಯಾಣ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಹರಿಯಾಣ ಸರ್ಕಾರದ ಫರೀದಾಬಾದ್‍ನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ  ರಾಷ್ಟ್ರೀಯ ರಾಜಧಾನಿ ಪ್ರದೇಶ, ನವದೆಹಲಿಯನ್ನೊಳಗೊಂಡಂತೆ ಕರ್ತವ್ಯ ನಿರ್ವಹಿಸಿದ 25 ವರ್ಷದ ಅನುಭವವನ್ನು ಹೊಂದಿರುತ್ತಾರೆ. ಅವರು ವಿವಿಧ ಕ್ಷೇತ್ರಗಳಾದ ಪ್ರವಾಸೋದ್ಯಮ, ಸಾರ್ವಜನಿಕ ಸಂಪರ್ಕ, ಶಿಷ್ಟಾಚಾರ & ಸಮನ್ವಯ & ಸಹಭಾಗಿತ್ವದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ವೈಯುಕ್ತಿಕವಾಗಿ ತೊಡಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಶ್ರೀಮಂತ ಅನುಭವವನ್ನು ಹೊಂದಿದವರಾಗಿರುತ್ತಾರೆ. ಶ್ರೀಯುತರು ಅರ್ಥಶಾಸ್ತ್ರ ಪದವೀದರರಾಗಿದ್ದು, ಸಾರ್ವಜನಿಕ ಸಂಪರ್ಕಗಳು & ಜಾಹೀರಾತು ವಿಭಾಗದಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಪದÀವಿ ಜೊತೆಗೆ ಎಂ.ಬಿ.ಎ. ಪದವಿಯನ್ನು ಮಾನವ ಸಂಪನ್ಮೂಲ ಅಭಿವೃದ್ದಿ ವ್ಯವಸ್ಥಾಪನೆ & ತರಬೇತಿಯಲ್ಲಿ ಹೊಂದಿರುತ್ತಾರೆ. ಶ್ರೀ ಡಿಸೋಜಾ ಇವರ ಸ್ವಗ್ರಾಮವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆಗಿರುತ್ತದೆ. 

ಶ್ರೀ ಡಿಸೋಜಾ ಇವರು ನೆಹರು ಯುವ ಕೇಂದ್ರ ಸಂಘಟನೆಯ ಭವಿಷ್ಯದ ಆಶೋತ್ತರಗಳನ್ನು ಈಡೇರಿಸುವಿಕೆಯಲ್ಲಿ ತಮ್ಮ ಪ್ರಮುಖ ಪಾತ್ರವನ್ನು ನಿರ್ವಹಿಸಲು ಸದಾ ಸನ್ನದ್ಧರಾಗಿರುತ್ತಾರೆ. ಇವರ ಜೊತೆ 20 ರಾಷ್ಟೀಯ ಯುವ ಸ್ವಯಂ ಸೇವಕರು ಹಾಗೂ ಕಾರ್ಯಾಲಯದ ಸಿಬ್ಬಂದಿಯ ಜೊತೆಗೂಡಿ  ಗ್ರಾಮೀಣ ಯುವಜನರನ್ನು ರಾಷ್ಟ್ರ ನಿರ್ಮಾಣಕ್ಕೆ ತೊಡಗಿಸಿಕೊಂಡು ಅವರುಗಳಲ್ಲಿ ಒಳ್ಳೆಯ ಭಾವನೆಗಳನ್ನು ಪ್ರೋತ್ಸಾಹಿಸಿ ಜವಾಬ್ದಾರಿಯುತ ನಾಗರೀಕರಾಗಿ ಮಾದರಿ ಪ್ರಜಾಪ್ರಭುತ್ವ ಹಾಗೂ ಇಡೀ ರಾಷ್ಟ್ರದ ಸರ್ವತೋಮುಖ ಏಳಿಗೆ ಹಾಗೂ ಅಭಿವೃದ್ದಿಗಾಗಿ ಸದಾ ಶ್ರಮಿಸಲು ಉತ್ಸಾಹಿಯಾಗಿರುತ್ತಾರೆ. ನೆಹರು ಯುವ ಕೇಂದ್ರ ಸಂಘಟನೆಯು ಯುವಕರನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಹಲವಾರು ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಯುವಜನ ಸೇವೆಗಳ ಮಂತ್ರಾಲಯದಿಂದ ಹಾಗೂ ಕೆಲವು ವಿಶೇಷ ಕಾರ್ಯಕ್ರಮಗಳು ಹಾಗೂ ಇನ್ನಿತರೆ ಮಂತ್ರಾಲಯಗಳ ಸಹಕಾರಗಳಿಂದ ಸದಾ ಕಾರ್ಯೋನ್ಮುಖವಾಗಿದೆ. 

ನೆಹರು ಯುವ ಕೇಂದ್ರ ಸಂಘಟನೆಯ ಭವಿಷ್ಯದ ಉದ್ದೇಶ ಸದಾಕಾಲ ಒಳ್ಳೆಯ ನಾಗರೀಕತೆ ಮತ್ತು ಯುವಜನರಲ್ಲಿ ಮುಂದಾಳತ್ವವನ್ನು ಬೆಳೆಯುವ ಮೊಳಕೆಯಲ್ಲಿಯೇ ಕಾಣಬಯಸುತ್ತದೆ. ಯುವ ಕ್ಲಬ್‍ಗಳನ್ನು ರಚಿಸಲಾಗಿದೆ ಮತ್ತು ಅವುಗಳಿಂದ ಯುವಕರನ್ನು ಪ್ರೋತ್ಸಾಹಿಸಿ, ಕ್ರೀಡೆ, ಸಾಂಸ್ಕøತಿಕ ಮತ್ತು ಸ್ಥಳೀಯ ಚಟುವಟಿಕೆಗಳಲ್ಲಿ ಅಭಿವೃದ್ದಿ ಕಾಣಲು ಸದಾ ಮುಂಚೂಣ ಯಲ್ಲಿದೆ.  ಯುವಕರಲ್ಲಿ ಮುಂದಾಳತ್ವವನ್ನು ರೂಪಿಸಲು ಯುವ ಕ್ಲಬ್ ಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಈ ಮುಂದಾಳತ್ಮವು ಈ ಕೆಳಕಂಡ ಚಟುವಟಿಕೆಗಳಲ್ಲಿ ಅತ್ಯಂತ ಸಹಕಾರಿಯಾಗಿದೆ. 
ಉ.ಕ.ಜಿಲ್ಲೆಯ ವಿವಿಧ ಯುವಕ/ಯುವತಿ ಮಂಡಳಗಳು ಇನ್ನು ಮುಂದೆ ಶ್ರೀಯುತರನ್ನು ನೆಹರು ಯುವ ಕೇಂದ್ರ ಸಂಘಟನೆಯಡಿ ಬರುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಕೆಳಕಂಡ ವಿಳಾಸಕ್ಕೆ  ಸಂಪರ್ಕಿಸಬಹುದಾಗಿದೆ:- ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಕಾರವಾರ ಹಳೆಯ ಜಿಲ್ಲಾ ಪಂಚಾಯಿತ್ ಕಾರ್ಯ¯ಯ, ಮೊದಲನೆಯ ಮಾಳಿಗೆ (ತಹಲ್‍ಸೀದಾರರ ಕಛೇರಿಯ ಪಕ್ಕ ) 581301 ಉ.ಕ.ಜಿಲ್ಲೆ ಕರ್ನಾಟಕ ಫೋ: 08382226965.

 
ವಿಲ್ಫ್ರೆಡ್ ಡಿಸೋಜಾ 
ಜಿಲ್ಲಾ ಯುವ ಸಮನ್ವಯಾಧಿಕಾರಿ
ನೆಹರು ಯುವ ಕೇಂದ್ರ, ಕಾರವಾರ (ಉತ್ತರ ಕನ್ನಡ ಜಿಲ್ಲೆ) ಕರ್ನಾಟಕ
Nehru Yuva Kendra, Karwar, U.K, Karnataka
( P) : 08382226965, (M) 9958325151
( P) : 08382226965, (ಒ) 9958325151

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...