ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮ

Source: sonews | By Staff Correspondent | Published on 25th January 2019, 11:03 PM | Coastal News | Don't Miss |

ಭಟ್ಕಳ: ಹಿಂದೆಲ್ಲ ಮತದಾನದ ಚೀಟಿ ಮಾಡಿಸುವುದು ಕಷ್ಟಸಾಧ್ಯವಿದ್ದು ಒಂದು ಕ್ರಾಂತಿಕಾರಿ ಬೆಳವಣಿಗೆಯ ಬಳಿಕ ಈಗ ಮನೆಗೆ ಬಂದು ಮತದಾನದ ಚೀಟಿ ಮಾಡಿ ಕೊಡುವ ವ್ಯವಸ್ಥೆ ಬಂದಿದ್ದು ಮತದಾರರು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಕರೆ ನೀಡಿದರು.

ಅವರು ಶುಕ್ರವಾರದಂದು ಇಲ್ಲಿನ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜುನಲ್ಲಿ ಇಲ್ಲಿನ ತಾಲುಕಾಢಳಿತ ವತಿಯಿಂದರಾಷ್ಟ್ರೀಯ ಮತದಾರರ ದಿನಾಚರಣೆಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಚುನಾವಣಾ ಆಯೋಗ ಸಂಸ್ಥಾಪನಾ ದಿನದ ಹಿನ್ನೆಲೆ 2011 ಜನವರಿ 25ರಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಉದ್ದೇಶ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ, ಮಾಹಿತಿ ಹಾಗೂ ಅವರಿಗೆ ಮತದಾನದ ಚೀಟಿ ವಿತರಿಸುವುದಾಗಿದೆ. ದೇಶದ ಪ್ರಜಾಪ್ರಭುತ್ವದ ಬಗ್ಗೆ ಪ್ರತಿಯೊಬ್ಬರ ಮತದಾರ ತಿಳಿದುಕೊಳ್ಳಬೇಕು. ಮೂಲಭೂತ ಹಕ್ಕು ಪಡೆಯಲು ಮತದಾನ ಮಾಡಬಾರದು ದೇಶಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳುವಿಕೆ ನಮ್ಮ ಕರ್ತವ್ಯ.

18 ವರ್ಷ ತುಂಬಿದ ತಕ್ಷಣ ಮತದಾನದ ಹಕ್ಕು ಸಿಗುವುದಿಲ್ಲ ಬದಲಿದೆ ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿ ನಮೂನೆ-6 ಅರ್ಜಿಯನ್ನು ಬರೆಯಬೇಕು ಆ ಬಳಿಕ ಪರಿಷ್ಕರಣೆ ಕಾರ್ಯ ಕೈಗೊಂಡು ಮತದಾನದ ಚೀಟಿ ಕೈಸೇರಲಿದೆ. ಹಿಂದೆಲ್ಲ ಮತದಾನದ ವೇಳೆ ಕಳ್ಳ ಮತದಾನ ನಡೆಯುತ್ತಿದ್ದವು ಆದರೆ 1993ರಲ್ಲಿ ಟಿ.ಎನ್.ಶೇಶನ ಮತದಾರರ ಗುರುತಿನ ಚೀಟಿಯನ್ನು ಹೊರ ತಂದರು. ಇದರಿಂದಾಗಿ ಕಳ್ಳ ಮತದಾನ ಆಗುವದು ತಡೆದಂತಾಯಿತು ಎಂದು ಅವರು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 930 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಅವರು ಹೇಳಿದರು.

ನಂತರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಬಿ.ಆರ್.ಸಿ.) ಸಂತೋಷ ಎಸ್.ಪಿ ಯುವ ಮತದಾರರನ್ನುದ್ದೇಶಿಸಿ ಉಪನ್ಯಾಸ ನೀಡಿ ಮಾತನಾಡಿದ್ದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ಅತಿ ದೊಡ್ಡ ಕರ್ತವ್ಯವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಮತದಾನದ ಹಕ್ಕು ಪಡೆದ ದೇಶದ 25 % ಯುವ ಮತದಾರರು ಮಾತ್ರ ಮತ ಹಾಕುತ್ತಿದ್ದಾರೆ. ಮೊದಲು ಮತದಾನ ಆ ಬಳಿಕ ಗುರುತಿನ ಚೀಟಿಯಿಂದ ವೈಯಕ್ತಿಕ ಸರಕಾರಿ ಸೇವೆಗಳ ಸೌಲಭ್ಯ ಪಡೆಯಲು ಹಾಗೂ ಇನ್ನಿತರ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಈ ಹಿಂದೆ ಏಕ ಸದಸ್ಯ ಚುನಾವಣಾ ಆಯೋಗವಿರುವುದು ತ್ರಿ ಸದಸ್ಯ ಚುನಾವಣಾ ಆಯೋಗವಾಗಿದೆ ಎಂದು ಅವರು ಆಯೋಗದ ಕಾರ್ಯಕ್ರಮ ಸಾರ್ಥಕವಾಗಬೇಕಾದರೆ ಮತದಾನದ ಗುರುತಿನ ಚೀಟಿ ಪಡೆದ ಪ್ರತಿಯೊಬ್ಬ ಯುವ ಮತದಾರರು ಮುಂಬರಲಿರುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಒಟ್ಟು 70 ನೂತನ ಮತದಾರರಿಗೆ ಮತದಾನ ಗುರುತಿನ ಚೀಟಿಯನ್ನು ಸಹಾಯಕ ಆಯುಕ್ತರು, ತಹಸೀಲ್ದಾರ ಸೇರಿದಂತೆ ಗಣ್ಯರು ವಿತರಿಸಿದರು. ಇದೇ ವೇಳೆ ಚುನಾವಣೆಯಲ್ಲಿ ಮತದಾರರ

ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ತಾಲೂಕಾಢಳಿತದಿಂದ ಚುನಾವಣಾ ರಸಪ್ರಶ್ನೆ ಕಾಯಕ್ರಮ ನಡೆಸಲಾಗಿದ್ದು ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ತಹಸೀಲ್ದಾರ ವಿ.ಎನ್.ಬಾಡಕರ್, ಪ್ರಭಾರೆ ತಾಲೂಕಾ ಕಾರ್ಯ ನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ದೇವರಾಜ್, ವೃತ್ತ ಪೊಲೀಸ ನಿರೀಕ್ಷಕ ಕೆ.ಎಲ್.ಗಣೇಶ, ಮುರ್ಡೇಶ್ವರ ಪಿಎಸೈ ಕೆ.ಬಸವರಾಜ, ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜು ಪ್ರಾಂಶುಪಾಲ ವಿರೇಂಧ್ರ ಶ್ಯಾನಭಾಗ ಉಪಸ್ಥಿತರಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...