ಪ್ರವಾದಿ ಇಬ್ರಾಹೀಮರನ್ನು ಅನುಸರಿಸುತ್ತ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿ

Source: sonews | By sub editor | Published on 1st September 2017, 6:11 PM | Coastal News | State News | Gulf News | Special Report | Don't Miss |

*ವಿವಿಧ ಮಸೀದಿಗಳ ಇಮಾಮರಿಂದ ಈದ್ ಸಂದೇಶ

ಭಟ್ಕಳ: ಜಗತ್ತಿನ ಮನುಷ್ಯ ವರ್ಗದ ನಾಯಕರಾಗಿ ನೇಮಿಸಲಸ್ಪಟ್ಟ ಪ್ರವಾದಿ ಇಬ್ರಾಹೀಮರನ್ನು ಅನುಸರಿಸುತ್ತ, ತಮ್ಮ ಜೀವನದಲ್ಲಿ ತ್ಯಾಗ ಮತ್ತು ಬಲಿದಾನಗಳಿಗೆ ಸಿದ್ದರಾಗುವಂತೆ ಜಾಮಿಯಾ ಮಸೀದಿ ಚಿನ್ನದಪಳ್ಳಿಯ ಇಮಾಮ್ ಖತೀಬ್ ಮೌಲಾನ ಅಬ್ದುಲ್ ಅಲೀಮ್ ಕತೀಬ್ ನದ್ವಿ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದರು. 

ಅವರು ಶುಕ್ರವಾರ ನಡೆದ ಈದುಲ್ ಅಝ್ಹಾ(ಬಕ್ರೀದ್ ಹಬ್ಬದ) ಪ್ರಾರ್ಥನೆಯನ್ನು ನೆರವೇರಿಸಿ ಈದ್ ಸಂದೇಶ ನೀಡಿದರು. 

ಕುರ್ಬಾನಿ (ಬಲಿದಾನ)ಎನ್ನುವುದು ಕೇವಲ ಪ್ರಾಣಿಬಲಿಯಾಗದೆ ಅದರ ಹಿಂದಿರುವ ಮಹಾನ್ ಉದ್ದೇಶವನ್ನು ಅರಿಯಬೇಕಾಗಿದೆ ಎಂದ ಅವರು, ವ್ಯಕ್ತಿಯ ಬಲಿದಾನವು ಒಂದು ಸಮುದಾಯ ಹಾಗೂ ಸಮಾಜವನ್ನು ಜೀವಂತವಾಗಿಡುತ್ತದೆ. ಕುರ್ಬಾನಿ ಎನ್ನುವುದು ಇಸ್ಲಾಮ್ ನ ಚಿನ್ಹೆಗಳಲ್ಲೊಂದಾಗಿದ್ದು ನಮ್ಮ ಮೇಲೆ ಕಡ್ಡಾಯವಾಗಿದೆ. ಅಲ್ಲಾಹನ ಆದೇಶದ ಮೇರೆಗೆ ಪ್ರವಾದಿ ಇಬ್ರಾಹಿಮ್ ರು ತಮ್ಮ ಪ್ರೀತಿಯ ಪುತ್ರನನ್ನೇ ಬಲಿನೀಡಲು ಮುಂದಾದರು ಇದು ಕೇವಲ ಸಂಕೇತ ಮಾತ್ರ. ಇಂದು ಮುಸ್ಲಿಮ್ ಸಮುದಾಯವು ಕೂಡ ಯಾವುದೇ ರೀತಿಯ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿರಬೇಕೆಂಬುದು ಇದರ ಅಂತರಾಳವಾಗಿದೆ ಎಂದರು. 

ಖಲಿಫಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಮಗ್ದೂಮ್ ಕಾಲೋನಿ ಜಾಮಿಯ ಮಸೀದಿಯಲ್ಲಿ ಮೌಲಾನ ನೇಮತುಲ್ಲಾ ಅಸ್ಕರಿ ನದ್ವಿ, ನವಯಾತ್ ಕಾಲೋನಿ ತಂಝೀಮ್ ಜಾಮಿಯಾ ಮಸೀದಿಯಲ್ಲಿ ಮೌಲಾನ ಮುಹಮ್ಮದ್ ಅನ್ಸಾರ್ ಖತೀಬ್ ನದ್ವಿ, ಮುಗಳೀಹೊಂಡ ಜಾಮಿಯಾ ಮಸೀದಿಯಲ್ಲಿ ಮೌಲಾನ ಮುನವ್ವರ್ ಪೇಶ್ಮಾಮ್ ನದ್ವಿ, ಮದೀನಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಝಕರಿಯಾ ಬರ್ಮಾವರ್ ನದ್ವಿ, ನೂರ್ ಜಾಮಿಯಾ ಮಸೀದಿಯಲ್ಲಿ ಮೌಲಾನ ತಾರಿಖ್ ಅಕ್ರಮಿ ನದ್ವಿ, ಗುಳ್ಮಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಆಹದ್ ಫರ್ಕದೆ ನದ್ವಿ, ಹಂಜಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಇಕ್ಬಾಲ್ ನಾಯ್ತೆ ನದ್ವಿ, ಆಹ್ಮದ್ ಸಯೀದ್ ಹುರುಳಿಸಾಲ್ ಜಾಮಿಯಾ ಮಸೀದಿಯಲ್ಲಿ ಮೌಲಾನ ಜಾಫರ್ ಫಕ್ಕಿಭಾವ್ ನದ್ವಿ, ಇಮಾಮ್ ಬುಖಾರಿ ಜಾಮಿಯಾ ಮಸೀದಿಯಲ್ಲಿ ಶೇಖ್ ಫಝ್ಲುರ್ರಹ್ಮಾನ್ ಸಲಫಿ, ತೆಂಗಿನಗುಂಡಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಇಸ್ಮಾಯಿಲ್ ಡಾಂಗಿ ನದ್ವಿ ಹಾಗೂ ಇಸ್ಮಾಯಿಲ್ ಜಾಮಿಯಾ ಮಸೀದಿ ರೇಲ್ವೆ ಸ್ಟೇಷನ್ ರಸ್ತೆ ಯಲ್ಲಿ ಮೌಲಾನ ಮಹೆರಾಜ್ ಈದ್ ನಮಾಝ್ ನಿರ್ವಹಿಸಿ ಹಬ್ಬದ ಮಹತ್ವ, ಮುಸ್ಲಿಮ್ ಸಮುದಾಯದ ಹೊಣೆಗಾರಿಕೆ ಕುರಿತಂತೆ ಪ್ರವಚನ ನೀಡಿ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು.

ಹಬ್ಬದ ನಮಾಝ್ ನಂತರ ಮುಸ್ಲಿಮರು ಪರಸ್ಪರ ಈದ್ ಶುಭಾಶಯ ಕೋರಿ ಸಂಭ್ರಮಿಸಿದ್ದು ಶುಕ್ರವಾರದಿಂದ ಮೂರು ದಿನಗಳ ಕಾಲ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು. 
 
Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...

ಮಾನವೀಯತೆಯ ಸೌಧದಡಿ ಸಮಾನತೆಯ ಸಮಾಜ ಕಟ್ಟಿದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ ...

ಜ್ಞಾನದಾಹಿಗಳಿಗೆ ಜ್ಞಾನಾಮೃತ ಉಣ ಬಡಿಸುತ್ತಿರುವ ಅಂಜುಮನ್ ಸಂಸ್ಥೆಗೆ ಶತಮಾನೋತ್ಸವದ ಸಂಭ್ರಮ

ಭಟ್ಕಳ: ಕಳೆದ ನೂರು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ಜ್ಞಾನಾಮೃತವನ್ನು ...

ವಿಚಾರವಾದಿಗಳ ಹತ್ಯೆ ಪ್ರಕರಣ; ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ ಕ್ರಿಮಿನಲ್ಸ್ ಗಳ ಕೃತ್ಯ; ಸಿಟ್ ತನಿಖೆಯಿಂದ ಬಹಿರಂಗ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ರನ್ನು 2017ರ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಹತ್ಯೆ ಮಾಡಿದ್ದರು. ಆದರೆ ...