ಭಟ್ಕಳ:ಮುರ್ಡೇಶ್ವರ ಪಾಲಿಟೆಕ್ನಿಕ್‍ನಲ್ಲಿ ಇಂಜಿನಿಯರ್ಸ್ ಡೇ, ಟೀಚರ್ಸ್ ಡೇ, ಎನ್.ಎಸ್.ಎಸ್. ಘಟಕ ಉದ್ಘಾಟನೆ

Source: so english | By Arshad Koppa | Published on 23rd September 2017, 8:21 AM | Coastal News | Don't Miss |

ಭಟ್ಕಳ: ಮುರ್ಡೇಶ್ವರ ಪಾಲಿಟೆಕ್ನಿಕ್‍ನಲ್ಲಿ ಆಯೋಜಿಸಲಾಗಿದ್ದ ಇಂಜಿನಿಯರ್ಸ್ ಡೇ, ಟೀಚರ್ಸ್ ಡೇ, ಎನ್.ಎಸ್.ಎಸ್. ಘಟಕ ಉದ್ಘಾಟನೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಹೆಸ್ಕಾಂ ಭಟ್ಕಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಮಂಜುನಾಥ ಅವರು ಉದ್ಘಾಟಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಾಲಿಟೆಕ್ನಿಕ್‍ನ  ಪ್ರಭಾರ ಪ್ರಾಚಾರ್ಯ ಕೆ. ಮರಿಸ್ವಾಮಿ ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಯುವ ಜನತೆಯ ಮೇಲೆ ಹೆಚ್ಚಿನ ನಂಬಿಕೆಯಿಟ್ಟಿದ್ದರು. ನಮ್ಮ ದೇಶದ ಎರಡನೇ ಸಾಲಿನ ಸೈನಿಕರೇ ಯುವಕರು ಎಂದು ನಂಬಿದ್ದರು ಎಂದರು. 
ಸರ್. ಎಮ್. ವಿಶ್ವೇಶ್ವರಯ್ಯನವರು ಭಾರತದ  ಶ್ರೇಷ್ಟ ಇಂಜಿನಿಯರ್ ಆಗಿದ್ದರು. ಅವರು ಸರ್ಕಾರದ ಕೆಲಸವೆಂದರೆ ದೇವರ ಕೆಲಸವೆಂಬುದರಲ್ಲಿ ಪೂರ್ಣ ನಂಬಿಕೆ ಇಟ್ಟಿದ್ದರು. ನೀರಾವರಿ ವ್ಯವಸ್ಥೆಯಲ್ಲಿ ಅವರು  ವಿಶ್ವಾದಾದ್ಯಂತ ಪ್ರಶಂಸೆಗೆ ಪಾತ್ರರಾದವರಾಗಿದ್ದು ಕಾವೇರಿ ನದಿಗೆ ಕೆ.ಆರ್.ಎಸ್. ಆಣೆಕಟ್ಟು ನಿರ್ಮಿಸಿ 1 ಲಕ್ಷ 50 ಸಾವಿರ ಹೆಕ್ಟೇರ್ ಬರಡು ಭೂಮಿಗೆ ನೀರು ಒದಗಿಸಿ, ಮೈಸೂರು ಬೆಂಗಳೂರಿನವರಿಗೆ ಕುಡಿಯುವ ನೀರಿನ ವ್ಯ್ತವಸ್ಥೆಯನ್ನು ಮಾಡಿದ್ದಲ್ಲದೆ ಕರ್ನಾಟಕದ ಸರ್ವೊತೋಮೂಖ ಅಭಿವೃದ್ಧಿಗೆ ಶ್ರಮಿಸಿದರು.  ನಿಷ್ಠೆ, ಸಮಯಪ್ರಜ್ಞೆ, ಶಿಸ್ತು, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಸರ್.ಎಮ್ ವಿಶ್ವೇಶ್ವರಯ್ಯನವರಾಗಿದ್ದರು ನಾವೆಲ್ಲರೂ ಅವರ ಆದರ್ಶವನ್ನು  ಪಾಲಿಸೋಣ ಎಂದೂ ತಿಳಿಸಿದರು.ು. 
ಉದ್ಘಾಟಕರಾದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಮಂಜುನಾಥ ಹಾಗೂ ಮುಖ್ಯ ಅತಿಥಿ ಸಿದ್ಧಾರ್ಥ ಪ್ರೌಢ ಶಾಲೆಯ ಪ್ರಾಚಾರ್ಯ ಪ್ರಹಲ್ಲಾದ ರಾಯಚೂರು ಅವರನ್ನು ಸನ್ಮಾನಿಸಲಾಯಿತು. 
ವಿದ್ಯಾರ್ಥಿ ಸಂಘದ ಬಗ್ಗೆ ಸಾಂಸ್ಕøತಿಕ ಸಮಿತಿ ಸಂಚಾಲಕ ಸಾಹಿದತ್, ಎನ್.ಎಸ್.ಎಸ್.  ಬಗ್ಗೆ ದಿನೇಶ ಆಚಾರ್ಯ ಮಾತಾನಾಡಿದರು. 
ಸರ್.ಎಮ್. ವಿಶ್ವೇಶ್ವರಯ್ಯನವರ ಕುರಿತು ಪ್ರಬಂಧ ಸ್ಪರ್ದೆಯಲ್ಲಿ ವಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ವಿ.ಟಿ. ಭಟ್, ಜಿ. ಮಂಜುನಾಥ, ರುದ್ರಪ್ಪ ಡಿ. ನಾಯ್ಕ, ಉದಯ ಪಾಟೀಲ್, ಹರೀಶ ಪಟ್ಟಿಯಾಳ, ಕಮಾಲಕರ ನಾಯ್ಕ ಉಪಸ್ಥಿತರಿದ್ದರು.
ಕುಮಾರಿ ಶ್ವೇತಾ, ಕುಮಾರಿ ಅಕ್ಷತಾ ಮತ್ತು ಪವಿತ್ರಾ ಸಂಗಡಿಗರು ಪ್ರಾರ್ಥಿಸಿದರು.  ಅಕ್ಷಯ ಡಿಕೋಸ್ತ ಸ್ವಾಗತಿಸಿದರು, ಉಪನ್ಯಾಸಕ ಕೆ.ಬಿ. ಹೆಗಡೆ ನಿರ್ವಹಿಸಿದರು. ಕುಮಾರಿ ನಿಕಿತಾ ವಂದಿಸಿದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...