ಕೆ.ಡಿ.ಪಿ ಸಭೆಯಲ್ಲಿ ಸದ್ದು ಮಾಡಿ ತಾಲೂಕಾಸ್ಪತ್ರೆಯ ಅವ್ಯವಸ್ಥೆ

Source: sonews | By Staff Correspondent | Published on 28th December 2018, 6:11 PM | Coastal News | Don't Miss |

•    ಉ.ಕ ಜಿಲ್ಲೆಯಲ್ಲಿಯೇ ಅತ್ಯಂತ ಕಳಪೆ ಆಸ್ಪತ್ರೆ ಎಂದ ಶಾಸಕ ಸುನಿಲ್ ನಾಯ್ಕ
•    ತಾಲೂಕು ವೈದ್ಯರ ವಿರುದ್ಧ ಗರಂ ಆದ ಶಾಸಕ

ಭಟ್ಕಳ: ಗುರುವಾರ ಇಲ್ಲಿನ ತಾ.ಪಂ ಸಭಾಭವನದಲ್ಲಿ ಎರಡನೇ ಹಂತದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ತಾಲೂಕು ಆಸ್ಪತ್ರೆಯ ಅವ್ಯವಸ್ಥೆ ಭಾರಿ ಸದ್ದು ಮಾಡಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್ ನಾಯ್ಕ, ಉತ್ತರಕನ್ನಡ ಜಿಲ್ಲೆಯಲ್ಲೇ ಅತ್ಯಂತ ಕಳಪೆಮಟ್ಟದ ಆಸ್ಪತ್ರೆ ಭಟ್ಕಳ ತಾಲೂಕು ಆಸ್ಪತ್ರೆಯಾಗಿದ್ದು ಇಲ್ಲಿನ ವೈದ್ಯರು ಮಾನವೀಯತೆಯನ್ನೇ ಮರೆತಿದ್ದಾರೆ ಎಂದು ಗರಂ ಆದರು. ತಾಲೂಕಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದೆ. ಇಲ್ಲಿನ ವೈದ್ಯರು ಕನಿಷ್ಟ ಮಾನವೀಯತೆ, ಶ್ರದ್ಧೆ, ಪ್ರಾಮಾಣಿಕತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಇಲ್ಲವಾದರೆ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಖಡಕ್ ಆಗಿ ಸೂಚಿಸಿದರು.

'ತಾಲೂಕಾಸ್ಪತ್ರೆಯಲ್ಲಿ ನರ್ಸಗಳು ಪ್ರತಿದಿನ ಸಂಜೆ 4 ಗಂಟೆ ಬಳಿಕ ಇಲ್ಲಿನ ಖಾಸಗಿ ಕ್ಲಿನಿಕಗಳಿಗೆ ತೆರಳುತ್ತಿದ್ದಾರೆಂಬ ದೂರು ಸಾಕಷ್ಟು ಬಾರಿ ಕೇಳಿ ಬಂದಿದೆ. ಈ ಬಗ್ಗೆ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು ಗಮನ ಹರಿಸಬೇಕು ಒಂದು ವೇಳೆ ಇದು ಮುಂದುವರೆದಲ್ಲಿ ಅದಕ್ಕೆ ಇಲಾಖೆ ಅಧಿಕಾರಿಗಳೆ ನೇರ ಹೊಣೆ ಎಂದು ಸಭೆಯಲ್ಲಿದ್ದ ಅಧಿಕಾರಿಗೆ ಸೂಚಿಸಿದರು. ಆಸ್ಪತ್ರೆ ವೈದ್ಯರು ಕನಿಷ್ಟ ಮಾನವೀಯತೆಯಿಂದಾರೂ ಕೆಲಸ ನಿರ್ವಹಿಸುವ ಜವಾಬ್ದಾರಿ ವಹಿಸಿಕೊಳ್ಳಿ. ಜಿಲ್ಲೆಯಲ್ಲಿಯೇ ಕಳಪೆ ಪ್ರದರ್ಶನ ಮಾಡುತ್ತಿರುವ ತಾಲೂಕಾಸ್ಪತ್ರೆ ಆಗಿರುವದು ಅಧಿಕಾರಿಗಳು, ವೈದ್ಯರೆಲ್ಲರು ನಾಚಿಕೆ ಪಡಬೇಕಾದ ಸ್ಥಿತಿ ಉಂಟಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಇನ್ನು ಪಶು ಇಲಾಖೆಯಲ್ಲಿನ ಫಲಾನುಭವಿಗಳಿಗೆ ಬ್ಯಾಂಕನವರು ಸತಾಯಿಸುತ್ತಿದ್ದು ಈ ಬಗ್ಗೆ ಬ್ಯಾಂಕನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರ ಮಾಡುವಂತೆ ಪಶು ಇಲಾಖೆ ಅಧಿಕಾರಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೇರ ಸೂಚಿಸಿದರು. ಇನ್ನು ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆಯ ಬಗ್ಗೆ ಶಾಸಕರ ಗಮನಕ್ಕೆ ಪಶು ಇಲಾಖೆ ಅಧಿಕಾರಿ ವಿವೇಕ ಹೆಗಡೆ ತಂದರು. 

ತಾಲೂಕಾ ವ್ಯಾಪ್ತಿಯಲ್ಲಿನ ಹಳೆ ಅತಿಕ್ರಮಣದಾರ ಮನೆಯ ದುರಸ್ಥಿಗೆ ಸರಕಾರದ ಮಟ್ಟದಲ್ಲಿಯೇ ಅವಕಾಶವಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆ ದೃಷ್ಠಿಯಿಂದ ಅತಿಕ್ರಮಣದಾರರಿಗೆ ಅನುವು ಮಾಡಿಕೊಡಬೇಕೆಂದು ಶಾಸಕ ಸುನೀಲ ತಿಳಿಸಿದರು. ಈ ಬಗ್ಗೆ ವಲಯ ಅರಣ್ಯಾಧಿಕಾರಿ ಶಂಕರೇ ಗೌಡ ಕಾನೂನಿನ್ವಯ ಅನುಸರಿಸಬೇಕಾದ ಕಾರ್ಯವನ್ನು ಮುಂದುವರೆಸಿದ್ದೇವೆ ಆದರೆ ಅಲ್ಲಿಯ ಸ್ಥಳಿಯರೇ ಪದೇ ಪದೇ ದೂರವಾಣಿ ಕರೆ ಮೂಲಕ ದೂರು ನೀಡುತ್ತಿದ್ದು ಮಾನವೀಯತೆಯಿಂದ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲವಾಗಿದೆ ಎಂದು ಉತ್ತರಿಸಿದರು. ತಾಲೂಕಾ ವ್ಯಾಪ್ತಿಯ ಎಲ್ಲಾ ದುರಸ್ಥಿಯಾಗಬೇಕಾದ ಎಲ್ಲಾ ಶಾಲೆಯ ಮಾಹಿತಿ ಹಾಗೂ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದಾಖಲೆ ಹಾಗೂ ಪೋಟೋ ಸಮೇತ ಒಂದು ವಾರದೊಳಗಾಗಿ ಮಾಹಿತಿ ನೀಡುವಂತೆ ಸೂಚಿಸಿದ ಶಾಸಕ ಸುನೀಲ ಶಾಲೆಯ ಅವಧಿಗಿಂತ ತಡವಾಗಿ ಶಾಲೆಗೆ ಬರುವ ಶಿಕ್ಷಕರು ಬರುತ್ತಿರುವ ಪಾಲಕರಿಂದ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆಯೂ ಸಹ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಮುಂಡಳ್ಳಿಗೆ ಮಿನಿ ಬಸ್ ನೀಡುವಂತೆ ಪ್ರಸ್ತಾವನೆ ಸಲ್ಲಿಸದ ಬೆಳವಣಿಗೆಯ ಬಗ್ಗೆ ಶಾಸಕ ಸುನೀಲ ನಾಯ್ಕ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ ಅವರಲ್ಲಿ ಪ್ರಶ್ನಿಸಿದ್ದು ಈ ಬಗ್ಗೆ ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡದೇ ಇರುವುದರಿಂದ ತರಾಟೆಗೆ ತೆಗೆದುಕೊಂಡರು. ಇನ್ನು ಕೆ.ಎಸ್.ಆರ್.ಟಿ.ಸಿ ಚಾಲಕರು ಹಾಗೂ ನಿರ್ವಾಹಕರು ಡಿಪೋ ಮ್ಯಾನೇಜರ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ದೂರು ಕೇಳಿ ಬರುತ್ತಿದ್ದು ಇಲಾಖೆ ಸಿಬ್ಬಂದಿಗಳ ಒಳ್ಳೆಯ ಹೊಂದಾಣಿಕೆ ಬೆಳೆಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ಸೂಚಿಸಿದರು. ಇನ್ನು ಕೆ.ಎಸ್.ಆರ್.ಟಿ.ಸಿ. ಡಿಪೋಗೆ ಬಂದಂತಹ 5 ಬಸಗಳನ್ನು ಕುಮಟಾ ವಿಭಾಗಕ್ಕೆ ನೀಡಲಾದ ವಿಚಾರವಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೇರ ಡಿಪೋ ಮ್ಯಾನೇಜರರನ್ನು ತರಾಟೆಗೆ ತೆಗೆದುಕೊಂಡು ಜನರಿಗೆ ಸಿಗುತ್ತಿದ್ದ ಸಮರ್ಪಕ ವ್ಯವಸ್ಥೆಯನ್ನು ಹಾಳು ಮಾಡದಂತೆ ಎಚ್ಚರಿಕೆಯನ್ನು ನೀಡಿದರು. ಪಕ್ಕದ ತಮಿಳುನಾಡಿನಿಂದ ಇಲ್ಲಿಗೆ ಮೀನುಗಾರಿಕೆಗೆ ಬಂದಂತಹ ಬೋಟಗಳ ಮಾಲಕರಿಗೆ ನೋಟಿಸ್ ಕಳುಹಿಸಿ ಅಂತಹ ಬೋಟಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಶಾಸಕ ಸುನೀಲ ನಾಯ್ಕ ಸೂಚಿಸಿದರು. ಹಾಗೂ ಕೆಲ ಮೀನುಗಾರರ ಬಳಿ ಬೋಟ ಇಲ್ಲದಿದ್ದರು ಅಂತಹವರಿಗೆ ಸೀಮೆಎಣ್ಣೆ ಸಿಗುತ್ತಿರುವ ಬಗ್ಗೆ ಜನರು ದೂರು ನೀಡಿದ್ದರೆ ಬಗ್ಗೆ ವಿಚಾರಿಸಿ ಕ್ರಮಕ್ಕೆ ಮುಂದಾಗಿವಂತೆಯೂ ಸೂಚನೆ ನೀಡಿದರು. ಜಾಲಿ ವ್ಯಾಪ್ತಿಯ ಹೊನ್ನೆಗದ್ದೆಯಲ್ಲಿನ ಸಮುದ್ರ ತೀರದ ರಸ್ತೆ ಸಂಪರ್ಕವೂ ಸಮುದ್ರ ಅಲೆಯಿಂದ ಕಡಿತಗೊಂಡಿದ್ದು ರಸ್ತೆ ಸರಿಪಡಿಸುವ ಬಗ್ಗೆ ಪಂಚಾಯತ ರಾಜ್ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದ್ದು ಹಾಗೂ ತಕ್ಷಣದಲ್ಲಿ ಬಂದರು ಇಲಾಖೆ ಅಧಿಕಾರಿಗಳ ಸಂಪರ್ಕ ಕೈಗೊಂಡು ಸ್ಥಳ ಪರಿಶೀಲನೆ ಮಾಡಿ ರಸ್ತೆ ದುರಸ್ಥಿಗೆ ಕಾರ್ಯ ಮಾಡುವಂತೆ ತಿಳಿಸಿದರು. ಹಾಗೂ ಹಳೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ ಅನುದಾನ, ತಾಲೂಕಾ ಪಂಚಾಯತ ಅನುದಾನ ಅಥವಾ ಶಾಸಕರ ಅನುದಾದಿಂದ ಹೊಸದಾಗಿ ಬಿಲ್ ಪಾವತಿ ಮಾಡಿದ್ದಲ್ಲಿ ಅದಕ್ಕೆ ನೇರವಾಗಿ ಪಂಚಾಯತ ರಾಜ್ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆಯನ್ನು ನೀಡಿದರು. 

ಇನ್ನುಳಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ವಿವರ ಮಾಹಿತಿಯನ್ನು ಸಭೆಯಲ್ಲಿ ಶಾಸಕ ಸುನೀಲ ನಾಯ್ಕ ಪಡೆದರು.

ಸಭೆಗೂ ಪೂರ್ವದಲ್ಲಿ ಸಭೆಯಲ್ಲಿ ಇಲಾಖೆ ಅಧಿಕಾರಿಗಳ ಹಾಜರಾತಿಯನ್ನು ಪಡೆದರು. ಈಸಂಧರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ, ಜಿ.ಪಂ. ಸದಸ್ಯರಾದ ಅಲ್ಬರ್ಟ ಡಿಕೋಸ್ತಾ, ಸಿಂಧು ನಾಯ್ಕ, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಸದಸ್ಯ ವಿಷ್ಣು ದೇವಾಡಿಗ, ಪ್ರಬಾರೆ   ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕಮನೆ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...