ಚಿತ್ತರಂಜನ್ ಹತ್ಯೆ ತನಿಖಾ ವರದಿ ಮಂಡನೆಗೆ ಶಾಸಕ ಸುನಿಲ್ ಮನವಿ

Source: S.O. News Service | By Manju Naik | Published on 12th August 2018, 7:52 PM | Coastal News | Don't Miss |

ಭಟ್ಕಳ: ಮಾಜಿ ಶಾಸಕ ಡಾ.ಯು.ಚಿತ್ತರಂಜನ್ ಹತ್ಯೆ ಹಾಗೂ ಭಟ್ಕಳ ಕೋಮುಗಲಭೆಗೆ ಸಂಬಂಧಿಸಿ ನೇಮಿಸಲಾಗಿದ್ದ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಹಾಗೂ ನ್ಯಾಯಮೂರ್ತಿ ರಾಮಚಂದ್ರ ನೇತೃತ್ವದ ಆಯೋಗದ ವರದಿಗಳನ್ನು ಸರಕಾರ ಜಾರಿ ಮಾಡಬೇಕು ಎಂದು ಆಗ್ರಹಿಸಿ ಶಾಸಕ ಸುನಿಲ್ ನಾಯ್ಕ ಗೃಹ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಾ.ಪರಮೇಶ್ವರರವರಿಗೆ ಮನವಿ 
ಸಲ್ಲಿಸಿದರು.
 ಭಟ್ಕಳದ ಇನ್ನೋರ್ವ ಧುರೀಣ ತಿಮ್ಮಪ್ಪ ನಾಯ್ಕ ಕೊಲೆ ಪಾತಕರನ್ನು ಇನ್ನೂ ಬಂಧಿಸಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಕೆ.ಎಸ್.ಆರ್.ಪಿ. ಅಥವಾ ಡಿ.ಆರ್.ಬೆಟಾಲಿಯನ್ ಭಟ್ಕಳದಲ್ಲಿಯೇ ಇರುವಂತೆ ನೀಡಿಕೊಳ್ಳಬೇಕು, ಭಟ್ಕಳ ಉಪವಿಭಾಗದ ಪೊಲೀಸರಿಗೆ ಆಧುನಿಕ ಮಾದರಿಯ ಆಯುಧಗಳನ್ನು ಪೂರೈಸಬೇಕು, ಭಟ್ಕಳದ ಪ್ರಮುಖ ಚೆಕ್‍ಪೋಸ್ಟಗಳನ್ನು ಹೊಸದಾಗಿ ನಿರ್ಮಿಸಿ ಅಕ್ರಮ ಗೋಸಾಗಾಟ, ಅಕ್ರಮ ಶಸ್ತ್ರಾಸ್ತ್ರ ಸಾಗಾಟ ತಡೆಯಲು ಕ್ರಮ ಕೈಗೊಳ್ಳಬೇಕು, ಪೊಲೀಸರ ಸಂಖ್ಯೆಗನುಗುಣವಾಗಿ ವಸತಿಗೃಹದ ಕೊರತೆ ಇದ್ದು, ಹೊಸದಾಗಿ ವಸತಿಗೃಹ ನಿರ್ಮಿಸಬೇಕು, ಭಟ್ಕಳಕ್ಕೆ ಟ್ರಾಫಿಕ್ ಪೊಲೀಸ್ ಮತ್ತು ಮಹಿಳಾ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಬೇಕು, ಇತ್ತೀಚಿಗೆ ಜನಪ್ರತಿನಿಧಿಗಳು, ಸಮಾಜ ಸೇವಕರು ಮತ್ತು ಗಣ್ಯರ ಕುರಿತಾಗಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅವಹೇಳನಕಾರಿ ಬರಹಗಳನ್ನು ಬಿತ್ತರಿಸಲಾಗುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು, ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯ, ನಿವೇದಿತ್ ಆಳ್ವಾ ಉಪಸ್ಥಿತರಿದ್ದರು. 

Read These Next

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...