ಭಟ್ಕಳ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಧನ ವಿತರಣೆ

Source: sonews | By Sub Editor | Published on 17th July 2017, 7:40 PM | Coastal News | Don't Miss |

ಭಟ್ಕಳ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅನಾರೋಗ್ಯ ಪೀಡಿತರಿಗೆ ಸಿಗುವಂತಹ  ಪರಿಹಾರ ಧನದ ಚೆಕ್ಕನ್ನು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಮಾಂಕಾಳ್ ವೈದ್ಯ ಆರ್ಹ ಫಲಾನುಭವಿಗಳಿಗೆ ವಿತರಿಸಿದರು. 
ಅಪಘಾತ, ಸರ್ಜರಿ ಸೇರಿದಂತೆ ಉಳಿದ ಅನಾರೋಗ್ಯ ಪೀಡಿತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಧನದ ಚೆಕ್ ಸೇರಿದಂತೆ ಕೆಲವು ಫಲಾನುಭವಿಗಳಿಗೆ ಭರವಸೆಯ ಪತ್ರವನ್ನು ಶಾಸಕ ಮಂಕಾಳ ವೈದ್ಯ ನೀಡಿದರು. ಭಟ್ಕಳ ತಾಲೂಕಿನಲ್ಲಿ ೭,೩೯,೦೪೯ರೂಗಳು ಹಾಗೂ ಹೊನ್ನಾರ ತಾಲೂಕಿನಲ್ಲಿ ರೂ.೩,೫೮,೩೧೭ ರೂ ಗಳು ಸ್ಭೆರಿದಂತೆ ೧೫ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಉಳಿದಂತೆ ೧೦ ಫಲಾನುಭವಿಗಳಿಗೆ ಭರವಸೆಯ ಪತ್ರವನ್ನು ನೀಡಲಾಯಿತು. 
ಈ ಸಂಧರ್ಭದಲ್ಲಿ ತಹಸೀಲ್ದಾರ್ ವಿ.ಎನ್.ಬಾಡಕರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಷ್ಣು ದೇವಾಡಿಗ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ, ತಹಸೀಲ್ದಾರದ ಕಛೇರಿ ಸಿಬ್ಬಂದಿ ವಿಶ್ವನಾಥ ಕರಡೆ, ಗ್ರಾಮ ಸಹಾಯಕ ಉದಯ ನಾಯ್ಕ, ನಾರಾಯಣ ನಾಯ್ಕ ಮತ್ತಿರರು ಉಪಸ್ಥಿತರಿದ್ದರು. 


 

Read These Next

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...