ಷರಿಯತ್ ಮತ್ತು ತಲಾಖ್ ಕುರಿತಂತೆ ಜಾಗೃತಿ ಮೂಡಿಸಲು ಅಭಿಯಾನ; ಮೌಲಾನ ರಾಬೇಅ ನದ್ವಿ

Source: sonews | By Staff Correspondent | Published on 7th February 2018, 1:24 AM | Coastal News | State News | Special Report | Don't Miss |

ಎಂ.ಆರ್.ಮಾನ್ವಿ

ಭಟ್ಕಳ: ತಲಾಖ್ ಸರಿಯಾದ ಇಸ್ಲಾಮೀ ಷರಿಅತ್ ನಂತೆ ಸರಿಯಾದ ಕ್ರಮದಲ್ಲಿ ತಲಾಖ್ ನೀಡುವ ಕುರಿತು ಅಖಿಲಾ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ದೇಶದಾದ್ಯಂತ ಅಭಿಯಾನ ನಡೆಸಲು ತೀರ್ಮಾನಿಸಿದೆ ಎಂದು ಮು.ವೈ.ಕಾನೂನು ಮಂಡಳಿ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಮುಹಮ್ಮದ್ ರಾಬೆಅ ಹಸನಿ ನದ್ವಿ ಹೇಳಿದರು. 

ಅವರು ಭಟ್ಕಳದ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಲ್ಲಿ ಮೌಲಾನ ಅಲಿಮಿಯಾ ನದ್ವಿಯವರ ಕುರಿತ ಮೂರು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತ  ಈ ವಿಷಯ ತಿಳಿಸಿದರು. 

ತಲಾಖ್ ವಿಷಯದಲ್ಲಿ ಮುಸ್ಲಿಮರಲ್ಲಿ ಗೊಂದಲವಿದೆ. ಷರಿಯತ್ ಅರಿಯದವರು ತಲಾಖ್ ನ್ನು ತಮ್ಮ ಮನಸೊ ಇಚ್ಚೆ ಬಳಸಿಕೊಳ್ಳುತ್ತಿದ್ದು ಜನರಿಗೆ ಸರಿಯಾದ ತಲಾಖ್ ನ ನಿಯಮಗಳನ್ನು ತಿಳಿಸುವುದು ಇಂದಿನ ಕಾಲದ ಬೇಡಿಕೆಯಾಗಿದ್ದು ಈ ನಿಟ್ಟಿನಲ್ಲಿ ಪರ್ಸನಲ್ ಲಾ ಬೋರ್ಡ್ ಅಭಿಯಾನ ನಡೆಸುವುದರ ಮೂಲಕ ತಲಾಖ್ ಕುರಿತಂತ ಜನರಲ್ಲಿ ಜಾಗೃತಿಯನ್ನುಂಟು ಮಾಡಲಾಗುವುದು ಎಂದು ಅವರು ತಿಳಿಸಿದರು. 

ಮೊದಲು ಒಂದು ತಲಾಖ್ ಹೇಳುವುದು, ಒಂದು ತಿಂಗಳ ನಂತರ ಎರಡನೇ ಬಾರಿ ತಲಾಖ್ ಹೇಳುವುದು ಈ ಅವಧಿಯಲ್ಲಿ ಪತಿ ಪತ್ನಿಯರಲ್ಲಿ ಹೊಂದಾಣಿಕೆ ಸಾಧ್ಯವಾದರೆ ಇಬ್ಬರೂ ಮತ್ತೆ ಒಟ್ಟಿಗೆ ಜೀವಿಸುವರು ಇದರ ನಂತರವೂ ಅವರಿಬ್ಬರಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂದಾದರೆ ಕೊನೆಗೆ ಮೂರನೇ ತಲಾಖ್ ಹೇಳುವುದರ ಮೂಲಕ ಅವರು ಪರಸ್ಪರ ವೈವಾಹಿಕ ಬಂಧನದಿಂದ ಬೇರ್ಪಡುವರು. ಇದೇ ಇಸ್ಲಾಮೀ ಷರಿಯತ್ ನಲ್ಲಿ ತಲಾಖ್ ಹೇಳುವ ಸರಿಯಾದ ನಿಯಮ. ಈ ಕಾನೂನು ಕುರಿತಂತೆ ಜನರು ಇನ್ನೂ ಅಜ್ಞರಾಗಿದ್ದಾರಿ ಇವರಿಗೆ ಶಿಕ್ಷಣ ನೀಡುವುದರ ಮೂಲಕ ತಾಲಖ್ ಕುರಿತಂತೆ ಹುಟ್ಟಿಕೊಂಡಿರುವ ಚರ್ಚೆಗಳಿಗೆ ತೆರೆ ಎಳೆಯಲಾಗುತ್ತದೆ ಎಂದರು.

ಲೋಕಸಭೆಯಲ್ಲಿ ಮಂಡನೆಯಾದ ತ್ರಿವಳಿ ತಲಾಖ್ ಮಸೂದೆ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ಮೌಲಾನ, ಇದನ್ನು ಮಹಿಳೆಯ ಅನುಕಂಪ,ಸಹಾನುಭೂತಿಯ ಹೆಸರಲ್ಲಿ ಮಂಡನೆ ಮಾಡಲಾಗಿದೆ. ಇದರ ಒಳಹೊಕ್ಕು ನೋಡಿದರೆ ಈ ಮಸೂದೆಯಿಂದಾಗಿ ನಮ್ಮ ಮಹಿಳೆಯರು ಸಾಕಷ್ಟು ಸಂಕಟ ಮತ್ತು ತೊಂದರೆಯನ್ನು ಅನುಭವಿಸಲಿದ್ದಾರೆ ಎಂದರು. ತಲಾಖ್ ನ ಹೆಸರಲ್ಲಿ ಗಂಡ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ ಇದರಿಂದಾಗಿ ಅವರ ಕುಟುಂಬವನ್ನು ನೋಡಿಕೊಳ್ಳುವವರು ಯಾರು? ಆತನ ಮಕ್ಕಳು ಪತ್ನಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು ವಾತ್ಸವದಲ್ಲಿ ಈ ಮಸೂದೆ ಅವೈಜ್ಞಾನಿಕವಾಗಿದ್ದು ಇದರಿಂದ ಯಾರಿಗೂ ಕಿಂಚಿತ್ತೂ ಲಾಭವಾಗಲ್ಲ ಎಂದರು. 

ತ್ರಿವಳಿ ತಲಾಖ್ ಕುರಿತಂತೆ ಮೌಲಾನ, ಕುರ್‍ಆನ್ ಇದನ್ನು ಅತ್ಯಂತ ಸರಳೀಕರಿಸಿದ್ದು ಇದಕ್ಕೆ ಪರಿಹಾರವನ್ನು ಸೂಚಿಸಿದೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ರಚಿಸಿದ ಬಿಲ್ ಪತಿ-ಪತ್ನಿಯರನ್ನು ಇದು ನಡುರಸ್ತೆಯಲ್ಲಿ ತಂದು ಬಿಟ್ಟಿದೆ ಎಂದರು. ಗಂಡನಿಗೆ ಜೈಲಿಗಟ್ಟಿ ಹೆಂಡತಿಯನ್ನು ಏಕಾಂಗಿಯನ್ನಾಗಿ ಮಾಡುವುದು ಯಾವ ನ್ಯಾಯಾ ಎಂದು ಪ್ರಶ್ನಿಸಿದ ಅವರು, ತಲಾಖ್ ವಿಷಯದಲ್ಲಿ ಬಹಳಷ್ಟು ಮಹಿಳೆಯರು ಅವಸರ ಪಡುತ್ತಾರೆ, ಗಂಡಸರು ತಲಾಖ್ ಹೇಳುವದಕ್ಕೆ ಹಿಂಜರಿಯುತ್ತಾರೆ ಆದರೆ ಮಹಿಳೆ ಅವಸರದಿಂದಾಗಿ ತಲಾಖ್ ಪಡೆದುಕೊಳ್ಳುತ್ತಾಳೆ. ಈ ಕುರಿತಂತೆ ಬೋರ್ಡ್ ಸಾರ್ವಜನಿಕರಲ್ಲಿ ಜಾಗೃತಿಯನ್ನುಂಟು ತರಲು ಬಯಸುತ್ತಿದ್ದು ತಲಾಖ್ ನ ಸರಿಯಾದ ಕ್ರಮದ ಕುರಿತಂತೆ ಮಾಹಿತಿ ನೀಡಿ ತಲಾಖ್ ದುರೂಪಯೋಗವಾದಂತೆ ನೋಡಿಕೊಳ್ಳುವುದು ಎಂದು ಹೇಳಿದರು. ಸಿನೆಮಾ, ಟಿ.ವಿ ಜಾಹಿರಾತುಗಳ ಮೂಲಕ ಇತಿಹಾಸವನ್ನು ತಿರುಚುವ ಮತ್ತು ಇಸ್ಲಾಮ್ ಧರ್ಮವನ್ನು ಅವಹೇಳನ ಗೈಯ್ಯುವ ವಿಚಾರದ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೌಲಾನ, ಸಿನೆಮಾ ಟಿವಿ ಸಿರಿಯಲ್ ಗಳ ಮೂಲಕ ಇಸ್ಲಾಮನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದು ಅವರನ್ನು ತಡೆಯುವುದು ಸುಲಭವಲ್ಲ, ಆದರೆ ಇದರ ಬದಲೀ ವ್ಯವಸ್ಥೆಯನ್ನು ನಾವು ಮಾಡಬೇಕಾಗುವುದು. ಅವರು ತಪ್ಪು ಸಂದೇಶ ನೀಡುವ ಕೆಲಸ ಮಾಡುತ್ತಿದ್ದರೆ ನಾವು ಅದೇ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಮೂಲಕ ನಮ್ಮ ಚಿಂತಕರು, ಸಾಹಿತಿಗಳು ಸರಿಯಾದ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯವಾಗಬೇಕು. ಸತ್ಯದ ಮುಂದೆ ಅಸತ್ಯದ ಬೇಳೆ ಬೇಯಲಾರದು. ಅಸತ್ಯ ತೊಲಗಲಿಕ್ಕಾಗಿಯೇ ಬಂದಿದ್ದು ಅದು ಬಹಳ ಬೇಗನೆ ವಿನಾಶ ಹೊಂದಲಿದೆ ಎಂದರು. 

ಮಾಧ್ಯಮಗಳ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೌಲಾನ, ಜಗತ್ತನ್ನು ಎರಡು ವಸ್ತುಗಳು ಆಳುತ್ತಿವೆ. ಒಂದು ಹಣ. ಮತ್ತೊಂದು ಮಾಧ್ಯಮ. ಜಗತ್ತಿನ ದೈತ್ಯ ಶಕ್ತಿಗಳು ತಮ್ಮ ಹಣಬಲದಿಂದಾಗಿ ಬಡರಾಷ್ಟ್ರಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿವೆ. ಹಣವಂತರ ಕೈಗೊಂಬೆಗಳಂತೆ ವರ್ತಿಸುತ್ತಿರುವ ಮಾಧ್ಯಮಗಳು ಜನರ ಅಭಿಪ್ರಾಯವನ್ನು ರೂಪಿಸಲು ಬಳಸಿಕೊಳ್ಳಲಾಗುತ್ತಿದೆ. ಮಾಧ್ಯಮ ರಂಗದಲ್ಲಿ ಮುಸ್ಲಿಮರ ಕಡಿಮೆ ಸಂಖ್ಯೆಯಲ್ಲಿದ್ದು ಈ ಕ್ಷೇತ್ರದಲ್ಲಿ ಯುವಕರು ತೊಡಗಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಮಾಧ್ಯಮಗಳಲ್ಲಿ ಬರುವ ಎಲ್ಲ ಸುದ್ದಿಗಳನ್ನು ನಂಬದೆ ಅದನ್ನು ಓರೆಗಲ್ಲಿಗೆ ಹಚ್ಚಿ ನೋಡಬೇಕು. ಸುದ್ದಿಯ ನೈಜತೆಯನ್ನು ಪರೀಕ್ಷಿಸಬೇಕು. ಗಾಳಿ ಸುದ್ದಿಗಳನ್ನು ನಂಬದೆ ಸುದ್ದಿಯ ಆಳಕ್ಕಿಳಿಯಬೇಕು ನಂತರ ತಮ್ಮ ಅಭಿಪ್ರಾಯವನ್ನು ರೂಪಿಸಬೇಕು ಎಂದರು. 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...