ಭಟ್ಕಳ:ಕೆರವಡಿ ಕಾಲೇಜಿನಲ್ಲಿ ಎನ್. ಎಸ್. ಎಸ್. ಕಾರ್ಯಾಚಟುವಟಿಕೆಗಳ ಉದ್ಘಾಟನೆ

Source: varthabhavan | By Arshad Koppa | Published on 21st August 2017, 8:11 AM | Coastal News | Guest Editorial |

ಭಟ್ಕಳ, ಆ ೨೧:ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಶ್ರೀ ದುರ್ಗಾದೇವಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಿನಾಂಕ: 19-8-2017 ರಂದು ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳ ಉದ್ಘಾಟನೆ ನಡೆಯಿತು. ಉದ್ಘಾಟಕರಾಗಿ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ|| ಸುರೇಶ ಭಜಂತ್ರಿ ಅವರು ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶದ ಬಗ್ಗೆ ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಬೇಕೆಂದರು ಹಾಗೂ ಎನ್.ಎಸ್.ಎಸ್. ಫಲಕದಿಂದ ಕಲಿತ ಜ್ಞಾನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆರವಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀ ಕೃಷ್ಣಮೂರ್ತಿ ಕಲಗುಜ್ಜಿಯವರು ಮಾತನಾಡಿ ಎನ್.ಎಸ್.ಎಸ್. ಮಹತ್ವ ತಿಳಿಸಿದರು. ಎನ್.ಎಸ್.ಎಸ್. ಘಟಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಬದ್ಧತೆ, ಸಾಮೂಹಿಕ ಜೀವನದ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು. ಸೇವೆ ಹಲವಾರು ವಿಧದಲ್ಲಿ ಇದೆ – ಯಾವುದೇ ರೀತಿಯಲ್ಲಿ ಮಾಡಿದರೂ ಸೇವೆಯೆ. ಸೇವೆ ಮಾಡುವುದರಿಂದ ಮನಸ್ಸು ಪ್ರಪುಲ್ಲಿತವಾಗಿರುತ್ತದೆ.  ದೇಹ & ಮನಸ್ಸು ಸದಾ ಚಟುವಟಿಕೆಯಿಂದ ಇರುವುದು. ಅದಕ್ಕಾಗಿ ಎಲ್ಲರೂ ಪಾಲ್ಗೊಳ್ಳಬೇಕೆಂದರು. ಇನ್ನೊರ್ವ ಅಥಿತಿಗಳಾದ ಕೆರವಡಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಯಾದ ಶ್ರೀಮತಿ ಪ್ರವೀಣಾ ಗಾವಸ್ ಮಾತನಾಡಿ ದೇವಿಯ ಸನ್ನಿದಿಯಲ್ಲಿ ಶಿಕ್ಷಣ ಪಡೆಯುತ್ತಿದ್ದೀರಿ. ಒಳ್ಳೆಯ ಪರಿಸರವಿದೆ. ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಂಡು ದೇಶಕ್ಕಾಗಿ ರಾಜ್ಯಕ್ಕಾಗಿ ನಿಮ್ಮ ಊರಿಗಾಗಿ ಸೇವೆ ಮಾಡುವ ಅವಕಾಶ ಪಡೆದುಕೊಳ್ಳಬೇಕೆಂದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರವಡಿ ಗ್ರಾಮ ಪಂಚಾಯತದ ಅಧ್ಯಕ್ಷರಾದ ಶ್ರೀ ಕಿರಣ ಆರ್. ಅಸ್ನೋಟಿಕರ ವಹಿಸಿದ್ದರು. ಪ್ರಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಪ್ರಕಾಶ ಕೆ. ರಾಣೆಯವರು ಅಥಿತಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಕುಮಾರಿ ನೇತ್ರಾವತಿ ಹಾಗೂ ಸಂಗಡಿಗರು ರಾಷ್ಟ್ರೀಯ ಸೇವಾ ಯೋಜನೆಯ ಗೀತೆ ಹಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಯಾದ ಶ್ರೀ ಬಸವರಾಜ ನಡಗೇರಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸೋನಾಲಿ ಗೋವೆಕರ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...