ಆಗದ ಅಭಿವೃದ್ಧಿಯ ಕುರಿತು ಸುಳ್ಳು ಹೇಳುವ ಅವಶ್ಯಕತೆ ನನಗಿಲ್ಲ- ಶಾಸಕ ವೈದ್ಯ

Source: sonews | By Staff Correspondent | Published on 14th March 2018, 6:31 PM | Coastal News | Don't Miss |

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನರು ಪ್ರಜ್ಞಾವಂತರು, ಒಳ್ಳೆಯವರು ಆಗಿದ್ದಾರೆ. ಆಗದ ಅಭಿವೃದ್ಧಿ ಕೆಲಸ ಬಗ್ಗೆ ಸುಳ್ಳುವ ಅವಶ್ಯಕತೆ ನನಗಿಲ್ಲ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಾನು ಮಾಡಿರುವ ಕಾರ್ಯದ ಕುರಿತು ಸಾಕ್ಷ್ಯ ಹೇಳುತ್ತಿವೆ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು.

ಅವರು ಮಂಗಳವಾರದಂದು ಇಲ್ಲಿನ ತಾ.ಪಂ ಸಭಾಂಗಣದಲ್ಲಿ  ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಸುಳ್ಳು ಹೇಳಿ ನನಗೆ ಅಭಿವೃದ್ಧಿ ಮಾಡುವ ಅವಶ್ಯಕತೆ ಇಲ್ಲ. ಪರ್ತಕರ್ತರು ನನ್ನ ತಪ್ಪನ್ನು ತಿಳಿಸಿ ಅಭಿವೃದ್ಧಿಗೆ ಪೂರಕವಾಗಿದ್ದಾರೆ. ಮತ್ತು ಈಗಾಗಲೇ ತಂದ ಅನುದಾನ ವಾಪಸ್ಸು ಹೋಗಲು ಬಿಡುವುದಿಲ್ಲ ಒಂದು ವೇಳೆ ಆಯ್ಕೆಯಲ್ಲಿ ವಿಳಂಬವಾದರೆ ಅದಕ್ಕೆ ಇಲಾಖೆ ಅಧಿಕಾರಗಳೇ ನೇರ ಹೊಣೆ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.

ಕ್ಷೇತ್ರದಲ್ಲಿ 50 ಸೇತುವೆ, 7500ಕ್ಕೂ ಅಧಿಕ ಮನೆಗಳನ್ನು ಜನತೆಗೆ ಒದಗಿಸಲಾಗಿದ್ದು, ಇವೆಲ್ಲದಕ್ಕೂ ಇಲಾಖೆ ಅಧಿಕಾರಿಗಳು ನೀಡಿದ ಸಹಕಾರದಿಂದಲೇ ಸಾಧ್ಯವಾಗಿದೆ. ತಂದ ಅನುದಾನದ ಎಲ್ಲಾ ಲೆಕ್ಕವನ್ನು ನಾನೇ ಬಿಡಬೇಕೆಂದಿಲ್ಲ. ಬದಲಿಗೆ ಈಗ ಎಲ್ಲಾ ಮಾಹಿತಿಯೂ ಮಾಹಿತಿ ಹಕ್ಕಿನಲ್ಲಿಯೇ ಸಿಗಲಿದ್ದು, ಸಮಾಜ ಕಟ್ಟಕಡೆಯರವರು ಇದರ ವಿವರ ಪಡೆದುಕೊಳ್ಳಬೇಕು ಇದು ಮತ ಹಾಕಿದ ಎಲ್ಲರ ಹಕ್ಕಾಗಿದೆ.      

ಕೇವಲ ಪಿಡಬ್ಲೂಡಿ ಇಲಾಖೆ ಒಂದರಿಂದಲೆ 93 ಕೋಟಿ ಅನುದಾನ, ಪಿಎಮ್‍ಜಿಎಸ್‍ವೈ ಇಂದ 150ಕೋಟಿ ಅನುದಾನ ಹೀಗೆ 27 ಇಲಾಖೆಗಳಿಂದ ಸಾವಿರಾರು ಕೋಟಿ ಅನುದಾನ ಬಂದಿದ್ದರೂ ಬಿಜೆಪಿಯವವರು ಮಾತ್ರ ಬಂದಿದ್ದು 78 ಕೋಟಿ ಅನುದಾನ ಎಂದು ತಿರುಗಾಡುತ್ತಿರುವದು ಹಾಸ್ಯಸ್ಪದ ಎಂದ ಅವರು ಇಲ್ಲಿನ ಹೆಂಜಲೇ ಸೇತುವೆÉ ವಾರದೊಳಗೆ ಲೋಕಾರ್ಪಣೆ ಮಾಡಲಿದ್ದು, ಈ ಹಿಂದಿನ ಶಾಸಕರಾದ ಡಾ. ಚಿತ್ತರಂಜನ ಅವರ ಕನಸ್ಸಿನ ಸೇತುವೆÉ ಇದಾಗಿದ್ದಾಗಿದ್ದರಿಂದ ಅವರ ಹೆಸರೇ ಇಡುವುದಾಗಿ ಶಾಸಕ ವೈದ್ಯ ಸಭೆಯಲ್ಲಿ ತಿಳಿಸಿದÀರಲ್ಲದೆ ತಾಲುಕಿನ ಕೆಲವು ಗಣ್ಯ ವ್ಯಕ್ತಿಗಳ ಹೆಸರನ್ನು ನಿರ್ಮಾಣಗೊಂಡಿರುವ ಇತರ ಸೇತುವೆಗಳಿಗೆ ನಾಮಕರಣ ಮಾಡಲಾಗುವುದು ಎಂದು ಹೇಳಿದರು. ಇಲ್ಲನ ಸ್ಲಮ್ ಎರಿಯಾಗಳ ಕುರಿತು ಮಾಹಿತಿ ಪಡೆದು ಅಲ್ಲಿಗೂ ಅನುದಾನ ಮಂಜೂರಿ ಮಾಡಿಸಲಾಗಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಗೆ 2 ಮೆಶಿನ್‍ಗಳುಳ್ಳ ಡಯಾಲಿಸಿಸ್ ಸೆಂಟರ್ ಮಂಜೂರಿ ಮಾಡಲಾಗಿದೆ. 7 ಸಾವಿರ ಮನೆಗಳಿಗೆ ವಿದ್ಯುತ್ ನೀಡಲಾಗಿದೆ. ಅಂಗನವಾಡಿ, ಸಾರಿಗೆ ಸಂಪರ್ಕ, ಅತ್ಯಾಧುನಿಕ ಬಸ್ ನಿಲ್ದಾಣ ಹಾಗೂ ಮುಂಡಳ್ಳಿಯಿಂದ ಕಾಸರಗೋಡ ವರೆಗೂ ಸಮುದ್ರ ದಂಡೆಯಿಂದಲೇ ತೆರಳಲು ರಸ್ತೆ, ಸೇತುವೆ ಸಂಪರ್ಕ ಹೀಗೆ ಅಂದುಕೊಂಡಿರುವದೆಲ್ಲಾ ಸಾದ್ಯವಾಗಿದ್ದು ಅಧಿಕಾರಿಗಳ ನೆರವಿನಿಂದಲೇ ಎಂದು ಶ್ಲಾಘಿಸಿದರು. ಯಾವುದಾದರೂ ಕೆಲಸಗಳು ಬಾಕಿ ಇದ್ದರೆ ಈಗಲೇ ತಿಳಿಸಿ ಅನುದಾನ ಹಿಂದೆ ಹೋಗದಂತೆ ನೋಡಿಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ತಾ.ಪಂ ಉಪಾಧ್ಯಕ್ಷೆ ರಾಧಾ ವೈದ್ಯ, ತಹಶೀಲ್ದಾರ ವಿ.ಎನ್ ಬಾಡ್ಕರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...