ಭಟ್ಕಳದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಘಟಕದಿಂದ ಅದ್ದೂರಿ 19ನೇ ಕಾರ್ಗಿಲ್ ವಿಜಯೋತ್ಸವ

Source: SO News | By Manju Naik | Published on 27th July 2018, 1:18 AM | Coastal News |

 

ಭಟ್ಕಳ: ಈಗಿನ ಯುವ ಪೀಳಿಗೆ ವೈದ್ಯ ವೃತ್ತಿ, ಇಂಜಿನಿಯರ ವೃತ್ತಿ ಮಾಡಬೇಕೆಂಬ ಹುಮ್ಮಸ್ಸಿದ್ದು ಯಾರು ಸಹ ಯೋಧರಾಗಬೇಕು ದೇಶ ಸೇವೆ ಮಾಡಬೇಕೆಂಬ ಮನೋಭಾವ ಅವರಲಿಲ್ಲವಾಗಿದ್ದು, ದೇಶ ಸೇವೆ ಮಾಡುವ ಉತ್ಸಾಹ ಅವರು ಬೆಳೆಸಿಕೊಳ್ಳಬೇಕೆಂದು ನಿವೃತ್ತ ಪ್ಯಾರಾ ಮಿಲಿಟರಿ ಯೋಧ ಟಿ.ರಾಮಚಂದ್ರ ನಾವುಡ ಕರೆ ನೀಡಿದರು.
ಅವರು ಗುರುವಾರದಂದು ಇಲ್ಲಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ 19ನೇ ಕಾರ್ಗಿಲ್ ಯುದ್ದದ ವಿಜಯೋತ್ಸವದ ನಿಮಿತ್ತ ಭಟ್ಕಳದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಘಟಕದಿಂದ ನಡೆದ ಅದ್ದೂರಿ ವಿಜಯೋತ್ಸವ ಮೆರವಣೆಗೆ ಜಾಥಾ ಹಾಗೂ ವೀರ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಈ ದೇಶದ ಸ್ಥಿತಿ ಹೀಗಾಗಲು ಕಾರಣ ದೇಶದೊಳಗೆ ಇರುವ ಕೆಲ ಭ್ರಷ್ಟರಿಂದ ಹದಗೆಟ್ಟಿದೆ. ಕಾಶ್ಮೀರದ ಶ್ರೀನಗರದಲ್ಲಿನ ಪಿಯುಸಿ ಕಲಿತ ವಿದ್ಯಾರ್ಥಿಗಳಿಗೆ ಅದೇ ಕೊನೆಯ ಶಿಕ್ಷಣದ ಹಂತವಾಗಿದ್ದು ಮುಂದೆ ಕಲಿಕೆಯಲ್ಲಿ ಮುಂದುವರೆಯಲು ಅವಕಾಶವಿಲ್ಲ. ಕಾರಣ ಅವರಲ್ಲಿ ಒಗ್ಗಟ್ಟಿಲ್ಲ. ಇಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಪೂರಕ ಎಲ್ಲಾ ಸೌಲಭ್ಯಗಳಿದ್ದು, ವಿದ್ಯೆಯ ಜೊತೆಗೆ ದೇಶ ಸೇವೆ ಮಾಡುವ ಮನೋಭಾವ ಹುಟ್ಟಬೇಕು. ಕೇವಲ ಸಾಮಾಜಿಕ ಜಾಲತಾಣದಲ್ಲಿ ದೇಶ, ನಾಡು ಎನ್ನದೇ ನಿಜವಾಗಿಯೂ ದೇಶ ನಾಡಿನ ಬಗ್ಗೆ ಚಿಂತನೆ ಮಾಡಿ ಸೇವೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆರ.ಎನ್.ಶೆಟ್ಟಿ ಪಿಯು ಕಾಲೇಜಿನ ಉಪನ್ಯಾಸಕ ರಾಮ ಜಾಲಿ ಮಾತನಾಡಿ ‘ಗಡಿರಕ್ಷಣೆ ಯೋಧರ ಕೆಲಸವಾಗಿದ್ದು ದೇಶದೊಳಗೆ ರಕ್ಷಣೆ ಮಾಡುವುದು ಯಾರ ಜವಾಬ್ದಾರಿ ಎಂಬ ಮಾತು ಸ್ವಾಮಿ ವಿವೇಕಾನಂದರು ಅಂದು ಕೇಳಿದ ಪ್ರಶ್ನೆಗೆ ಯುವ ಪೀಳಿಗೆ ಸೇರಿದಂತೆ ನಾಗರಿಕರು ಉತ್ತರಿಸುವ ಜೊತೆಗೆ ಕಾರ್ಯ ಮಾಡಬೇಕಾಗಿದೆ. ಕಾರ್ಗಿಲ ವಿಜಯೋತ್ಸವವನ್ನು ದೇಶದ ಎಲ್ಲಾ ನಾಗರಿಕರು ಅವರವರ ಹುಟ್ಟು ಹಬ್ಬವನ್ನಾಗಿ ಆಚರಿಸುವುದರ ಮೂಲಕ ಸಂಭ್ರಮಿಸಬಾರದು. ಈ ನಿಟ್ಟಿನಲ್ಲಿ ಎಲ್ಲಾ ಯುವಕರು ದೇಶ ಸೇವೆ ಮಾಡಲು ಯೋಧರಾಗಬೇಕು. ಮೊದಲು ನಮ್ಮ ದೇಶ ಆಮೇಲೆ ಉಳಿದೆಲ್ಲವು ಎಂಬ ಮನೋಭಾವ ಹುಟ್ಟಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಆರು ಸೈನಿಕರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಸೈನಿಕರಾದ ಶ್ರೀಕಾಂತ ನಾಯ್ಕ, ರಾಮಚಂದ್ರ ನಾವುಡ, ನಾಗರಾಜ ಮೋಗೇರ, ಕೆ.ಸುರೇಶ, ರಾಘವೆಂದ್ರ ಮೋಗೇರ, ಕುಬೇರಪ್ಪ ಹೊಸೂರು ಅವರನ್ನು ಸನ್ಮಾನಿಸಲಾಯಿತು. 
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಗುರು ಸುಧೀಂದ್ರ ಕಾಲೇಜು ಹಾಗೂ ಸಿದ್ದಾರ್ಥ ಪದವಿ ಕಾಲೇಜಿನ ಒಟ್ಟು 1000ಕ್ಕೂ ಅಧಿಕ ವಿದ್ಯಾರ್ಥಿಗಳು ಒಟ್ಟು 160 ಮೀ. ಉದ್ದದ ಭಾರತದ ಬಾವುಟವನ್ನು ಹೊತ್ತು ಮೆರವಣಿಗೆ ಜಾಥಾದಲ್ಲಿ ತೆರಳಿದರು. ವಿಶಿಷ್ಟ ರೀತಿಯಲ್ಲಿ ದೇಶದ ಬಾವುಟವನ್ನು ಹೊತ್ತು ಸಾಗಿದ್ದು ಭಟ್ಕಳದ ಜನತೆಯನ್ನು ಆಕರ್ಪಿಸಿತ್ತು. ಈ ಮೆರವಣಿಗೆ ಜಾಥಾವೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದವರೆಗೆ ನಡೆಸಲಾಯಿತು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಉಪನ್ಯಾಸಕ ಹಾಗೂ ವಕೀಲ ಧನ್ಯಕುಮಾರ ಜೈನ್ ವಹಿಸಿದ್ದರು. 
ಎಬಿವಿಪಿ ಕಾರ್ಯಕರ್ತ ಕೃಷ್ಣ ನಾಯ್ಕ ಬಲಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಬಿವಿಪಿ ಕಾರ್ಯಕರ್ತ ದಿವಾಕರ ನಾಯ್ಕ ಸ್ವಾಗತಿಸಿದರು.

Read These Next