ಜೆ.ಸಿ.ಐ ಶಿರೂರು, ಭಟ್ಕಳ ಸಿಟಿ ನೂತನ ಘಟಕ ಉದ್ಘಾಟನೆ

Source: S O News service | By Staff Correspondent | Published on 24th February 2017, 3:24 PM | Coastal News |

ಭಟ್ಕಳ: ಜೆ.ಸಿ.ಐ ಶಿರೂರು ಪ್ರಾಯೋಜಕತ್ವದ ನೂತನ ಭಟ್ಕಳ ಸಿಟಿ ಘಟಕದ ಉದ್ಘಾಟನಾ ಕಾರ್ಯಕ್ರಮ ಭಟ್ಕಳ ತೆಂಗಿನಗುಂಡಿ ಕೋಲಾ ಮುಜಾಫರ್ ರೇಸಾರ್ಟ್‌ನಲ್ಲಿ ನಡೆಯಿತು.

ಜೇಸಿ ವಲಯ 15ರ ವಲಯಾಧ್ಯಕ್ಷ ಸಂತೋಷ.ಜಿ ನೂತನ ಘಟಕವನ್ನು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿ ಜೆಸಿಐ ಸಂಸ್ಥೆ ಕ್ರಿಯಾಶೀಲ ಯುವಕರ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ವೇದಿಕೆಯಾಗಿದೆ.ಈಗಾಗಲೇ ಜಾಗತಿಕ ಮಟ್ಟದ ಬ್ರಹತ್ ಆಂದೋಲನಾ ಸೇರಿದಂತೆ ಜೇಸಿ ಸಂಸ್ಥೆ ಭಾರತ ದೇಶದ ಅಭಿವೃದ್ದಿ ವ್ಯವಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ.ಪರಿಸರ, ಆರೋಗ್ಯ,ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಜೇಸಿ ಅಪಾರವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಉದ್ಯಮಿ ಈಶ್ವರ ನಾಯ್ಕ ಜೆಸಿಐ ಸಂಸ್ಥೆ ಸಮಾಜದ ಅಭಿವೃದ್ದಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ.ವ್ಯಕ್ತಿತ್ವ ಅಭಿವೃದ್ದಿಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಇದರ ಕೊಡುಗೆ ಶ್ಲಾಘನೀಯ. ಉತ್ತರ ಕನ್ನಡದಲ್ಲಿ ಘಟಕ ಸ್ಥಾಪನೆಯಾಗಿರುವುದು ಸಂತಸ ನೀಡಿದೆ ಎಂದರು.

ಟಿ.ಎಮ್.ಸಿ ಅಧ್ಯಕ್ಷ ಮೊಹ್ಮದ್ ಸಾದಿಕ್ ಮಟ್ಟಾ ಮಾತನಾಡಿ ಭಟ್ಕಳದಲ್ಲಿ ಜೇಸಿ ಘಟಕ ಸ್ಥಾಪನೆಯಾಗುವ ಮೂಲಕ ಇಲ್ಲಿನ ಅಭಿವೃದ್ದಿಗೆ ಇನ್ನಷ್ಟು ಶಕ್ತಿ ಬಂದಿದೆ.ಆರೋಗ್ಯ,ಸ್ವಚ್ಚತೆ ಸೇರಿದಂತೆ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು.

ಸಂಧರ್ಭದಲ್ಲಿ ಭಟ್ಕಳ ಘಟಕದ ಅಧ್ಯಕ್ಷರಾದ ನಾಗರಾಜ್ ಶೇಟ್‌ರವರಿಗೆ ಹಾಗೂ ಕಾರ್ಯದರ್ಶಿ ನಾಗರಾಜ್ ಮೊಗೇರ ಹಾಗೂ ಇತರ ಪದಾದಿಕಾರಿಗಳಿಗೆ, ಸದಸ್ಯರಿಗೆ ಪದಪ್ರಧಾನ ನೆರವೇರಿಸಲಾಯಿತು.ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಾದ ಪುನೀತ್ ವೆಂಕಟೇಶ ಗೊಂಡ ಹಾಗೂ ಶ್ವೇತಾ.ಜಿ.ಶೇಟ್‌ರವರನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಭಟ್ಕಳ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ, ವಲಯಾದಿಕಾರಿ ನಿತೀನ್ ಅವಭ್ರತ್, ಮರಿಯಪ್ಪ, ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್, ಜೆ.ಸಿ.ಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣಕರ್, ನಿಕಟಪೂರ್ವಾಧ್ಯಕ್ಷ ಹರೀಶ್ ಶೇಟ್, ಪ್ರಸಾದ ಪ್ರಭು, ಜೂನಿಯರ್ ಜೇಸಿ ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು. ಪ್ರಕಾಶ ಮಾಕೋಡಿ ಸ್ವಾಗತಿಸಿದರು. ಪಾಂಡುರಂಗ ಅಳ್ವೆಗದ್ದೆ ನೂತನ ಅಧ್ಯಕ್ಷರನ್ನು ಪರಿಚಯಿಸಿದರು.ಭಟ್ಕಳ ಸಿಟಿ ಜೆಸಿಐ ಕಾರ್ಯದರ್ಶಿ ನಾಗರಾಜ್ ಮೊಗೇರ್ ವಂದಿಸಿದರು.

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...