ಭಟ್ಕಳ ಜೆಸಿಐ ಘಟಕಕ್ಕೆ ಸೇನ್ ಅರ್ಪಿಥ್ ಹಾಥಿ ಭೇಟಿ

Source: S O News service | By V. D. Bhatkal | Published on 1st September 2018, 8:40 PM | Coastal News |

ಭಟ್ಕಳ : ಜೆಸಿಐ ಭಟ್ಕಳ ಸಿಟಿ ಘಟಕಕ್ಕೆ ಜೆಸಿಐ ಇಂಟರನ್ಯಾಷನಲ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಸೇನ್ ಅರ್ಪಿಥ್ ಹಾಥಿ ಭೇಟಿ ನೀಡಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು. 

ಈ ಸಂದರ್ಭದಲ್ಲಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಕಳೇದ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡ ಭಟ್ಕಳ ಜೆಸಿಐ ಘಟಕ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮುಖಾಂತರ ಜೆಸಿಐ ವಲಯದಲ್ಲಿ ಉತ್ತಮ ಘಟಕವಾಗಿ ಹೋರಹೊಮ್ಮಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಸಂಘದ ಘಟಕಾಧ್ಯಕ್ಷ ಕೆ ಜಬ್ಬರ ಸಾಹೇಬ್ ನೇತೃತ್ವದಲ್ಲಿ ಭಟ್ಕಳ ಜೆಸಿಐ ಘಟಕದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷನ್ನು ಸನ್ಮಾನಿಸಲಾಯಿತು. ಸಾರ್ವಜನಿಕರ ಅನುಕೂಲಕ್ಕಾಗಿ ಸಂಘಟನೆಯ ವತಿಯಿಂದ ನಗರದಲ್ಲಿ ಅಳವಡಿಸಲಾದ ಮಾಹಿತಿ ಫಲಕವನ್ನು ಸೇನ್ ಅರ್ಪಿಥ್ ಹಾಥಿ ಅನಾವರಣಗೊಳಿಸಿದರು. ಜೊನ್ ಎಕ್ಷ ಅಧ್ಯಕ್ಷ ರಾಕೇಶ ಕುಂಝೂರು, ಎನ್ ಡಿ ಚಂದ್ರಶೇಖರ್, ರಾಘವೇಂದ್ರ ಪ್ರಭು, ರವಿ ಕಕ್ಕೆ ಪಡುವು, ರಘುನಾಥ ನಾಯಕ, ಭಟ್ಕಳ ಗ್ರಾಮೀಣ ಪಿಎಸೈ ರವಿ, ರೋಟರಿ ನಝೀರ ಖಾಸೀಂಜೀ ಭಟ್ಕಳ ಜೆಸಿಐ ಅಧ್ಯಕ್ಷ ಕೆ ಜಬ್ಬರ ಸಾಹೇಬ, ನಾಗರಾಜ ಶೇಟ್, ರಮೇಶ ಖಾರ್ವಿ, ಸುರೇಶ ಪೂಜಾರಿ, ಮೋಹನ ನಾಯ್ಕ, ಶಂಕರನಾಯ್ಕ, ಈಶ್ವರ ನಾಯ್ಕ, ಮಸೂದ್ ಇಕ್ಬಾಲ್, ನಾಗರಾಜ ಮೊಗೇರ ಹಾಗು ಸಾಜಿದಾ ಜಬ್ಬರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next