ಶಿರಾಲಿ ಚಿತ್ರಾಪುರದ ಯುವತಿ ಶೋಭಾ ಸಾವಿನ ತನಿಖೆಗೆ ಆಗ್ರಹ

Source: S.O. News Service | By Manju Naik | Published on 12th August 2018, 8:09 PM | Coastal News | Don't Miss |

ಭಟ್ಕಳ: ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ಶೋಭಾ ಎಂಬ ಯುವತಿಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜ್ಯಾತ್ಯಾತೀತ ಜನತಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್.ಡಿ.ನಾಯ್ಕ ಉಪಮುಖ್ಯಮಂತ್ರಿ ಪರಮೇಶ್ವರರವರಿಗೆ ಮನವಿ ಸಲ್ಲಿಸಿದ್ದಾರೆ.
 ಮೃತಳ ತಂದೆ ಈಗಾಗಲೇ ಪೊಲೀಸರಿಗೆ ದೂರನ್ನು ನೀಡಿದ್ದು, ತನ್ನ ಮಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾರೆ. ಸಾವಿಗೀಡಾದ ಯುವತಿ ಶೋಭಾಳ ಬಗ್ಗೆ ಸಾರ್ವಜನಿಕವಾಗಿ ಒಳ್ಳೆಯ ಅಭಿಪ್ರಾಯವಿದೆ. ಸಭ್ಯ ಗುಣ ನಡತೆಯ ಈಕೆ ಸುಸಂಸ್ಕøತ ಕುಟುಂಬದಿಂದ ಬಂದವಳಾಗಿದ್ದಾಳೆ. ಅಲ್ಲದೇ ಪ್ರತಿ ದಿನ ಕೆಲಸಕ್ಕಾಗಿ ಶಾಲೆಗೆ ಹೋಗಿ ಬರುತ್ತಿದ್ದು, ಯಾವುದೇ ಅಪವಾದವನ್ನು ಹೊಂದಿರುವುದಿಲ್ಲ. ಆಕೆಯನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂಬ ವದಂತಿ ಇದೆ. ಸದ್ರಿ ಪ್ರಕರಣವು ತನಿಖೆಗೆ ಯೋಗ್ಯವಾಗಿದ್ದು, ಇಲ್ಲಿಯವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆಯೂ ಇದೇ ರೀತಿಯ ಪ್ರಕರಣ ನಡೆದಿದ್ದು, ಪ್ರಕರಣ ಮುಚ್ಚಿ ಹೋಗಿದೆ. ಈ ಪ್ರಕರಣವನ್ನೂ ಕೈ ಬಿಟ್ಟರೆ ಆರೋಪಿಗಳಿಗೆ ಇಂತಹ ಕೃತ್ಯಗಳನ್ನು ಎಸಗಲು ಇನ್ನಷ್ಟು ಸಹಾಯವನ್ನು ಮಾಡಿದಂತಾಗುತ್ತದೆ ಎಂದು ಮನವಿಯಲ್ಲಿ ಎಮ್.ಡಿ.ನಾಯ್ಕ ಆರೋಪಿಸಿದ್ದಾರೆ. 

Read These Next

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...