ಭಟ್ಕಳ;ಗ್ರಾಮದ ರಸ್ತೆಯ ಬದಿಯ ಹಾಗೂ ದೇವಸ್ಥಾನದ ಆವರಣವನ್ನು  ಸ್ವಚ್ಚಗೊಳಿಸುವುದರ ಮೂಲಕ ಸ್ವತಂತ್ರ ದಿನಾಚರಣೆ

Source: varthabhavan | By Arshad Koppa | Published on 16th August 2017, 8:29 AM | Coastal News | Special Report | Guest Editorial |

ಭಟ್ಕಳ:  ನಗರದ  ಆಸರಕೇರಿಯ ವೆಂಕಟೇಶ್ವರ ಯುವಕ ಮಂಡಳದ ಸದಸ್ಯರು  ತಮ್ಮ  ಗ್ರಾಮದ ರಸ್ತೆಯ ಬದಿಯ ಹಾಗೂ ದೇವಸ್ಥಾನದ ಆವರಣವನ್ನು  ಸ್ವಚ್ಚಗೊಳಿಸುವುದರ ಮೂಲಕ ವಿನೂತನ ರೀತಿಯಲ್ಲಿ ಸ್ವಾಂತ್ರತ್ರೋತ್ಸವವನ್ನು ಆಚರಿಸಿಕೊಂಡರು.


ವೆಂಕಟೇಶ್ವರ ಯುವಕ ಮಂಡಳದ ಸದಸ್ಯರು ತಮ್ಮ ಕೈಯಲ್ಲಿ ಕುಡುಗೋಲು ಹಾಗೂ ಗುದ್ದಲಿಯನ್ನು 
ಹಿಡಿದುಕೊಂಡು ನಗರದ ಆಸರಕೇರಿಯ ವಿ.ಟಿ.ರಸ್ತೆ ಹಾಗೂ ಗುರುಮಠ  ಶ್ರೀ ವೆಂಕಟೇಶ್ವರ ದೇವಸ್ತಾನದ  ಆವರಣದಲಿದ್ದ ಕಸ ಗುಂಟೆಗಳನ್ನು  ಸ್ವಚ್ಚಗೊಳಿಸಿ ರಸ್ತೆಬದಿಯಲ್ಲಿದ್ದ ಮನೆಯವರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ  ಗ್ರಾಮದ ಪ್ರಮುಖರಾದ   ಶ್ರೀಧರ ನಾಯ್ಕ ಮಾತನಾಡಿ ಪ್ರತಿವರ್ಷ ನಮ್ಮ ಯುವಕ ಸಂಘದ ಅಡಿಯಲ್ಲಿ ಯುವಕರು ಹಾಗೂ ಗ್ರಾಮಸ್ಥರು ಸೇರಿ ಪ್ರತಿವರ್ಷವೂ  ಸ್ವಾತಂತ್ರೋತ್ಸವ ದಿನದಂದು  ಹಿಂದೂ ರುಧ್ರಭೂಮಿ ಸ್ವಚ್ಚತೆ ದೇವಸ್ಥಾನದ ಆವರಣ ಸ್ವಚ್ಚತೆ  ಸೇರಿದಂತೆ ಹಲವು  ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು  ಬರುತ್ತಿದ್ದೇವೆ.   ಇಂದೂ ಸಹ  ಆಸರಕೇರಿ ವಾರ್ಡನ ಸ್ವಚ್ಚತೆ ಮಾಡಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದ್ದೇವೆ. ನಮ್ಮ ಪರಿಸರ ಸ್ವಚ್ಚತೆ ಇದ್ದಲ್ಲಿ ಯಾವ ರೋಗ ರುಜಿನಗಳು ನಮ್ಮ ಬಳಿ ಬಾರದು ಎಂಬ ಸಂದೇಶವನ್ನು ಇತರರಿಗೆ ನೀಡಿದ್ದೇವೆ ಎಂದರು. ಈ ಸಂದರ್ಭಲ್ಲಿ ಊರ ಪ್ರಮುಖರಾದ ಕೃಷ್ಣಾ ನಾಯ್ಕ, ಪುರಸಭಾ ಸದಸ್ಯ ವೆಂಕಟೇಶ ನಾಯ್ಕ,  ಯುವಕ ಮಂಡಳದ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯ್ಕ, ಮಂಜುನಾಥ ನಾಯ್ಕ,(ಕೆಮೆನ್)ಮಹಾದೇವ ನಾಯ್ಕ, ಈಶ್ವರ ನಾಯ್ಕ, ಗಣೇಶ ನಾಯ್ಕ, ಶ್ರೀಧರ ನಾಯ್ಕ,ಶ್ರೀನಿವಾಸ ನಾಯ್ಕ, ಮೋಹನ ನಾಯ್ಕ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...