ವಸತಿ ಶಾಲಾ ಸಮುಚ್ಛಾಯ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಸುನಿಲ್ ನಾಯ್ಕ

Source: sonews | By Staff Correspondent | Published on 16th December 2018, 3:52 PM | Coastal News | Don't Miss |

•    ಹೆಬಳೆ ಗ್ರಾಮಸ್ಥರ ತೀವ್ರ ಪ್ರತಿರೋಧ

ಭಟ್ಕಳ: ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಾಡಿ ಜಾಗದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ಹಿಂದುಳಿ ವರ್ಗಗಳಗ ಮೂರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪರಿಶಿಷ್ಠದ ವರ್ಗದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕಟ್ಟಡಗಳ ಗುದ್ದÀಲಿ ಪೂಜೆಗೆ ಗ್ರಾಮಸ್ಥರು ತೀರ ಪ್ರತಿರೋಧವನ್ನು ವ್ಯಕ್ತಪಡಿಸಿದ್ದು ಇದರ ನಡುವೆ ಶಾಸಕ ಸುನಿಲ್ ನಾಯ್ಕ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.  

ಪ್ರತಿಭಟನಾ ನಿರತ ಗ್ರಾಮಸ್ಥರು ಶಾಸಕ ಸುನಿಲ್ ನಾಯ್ಕರನ್ನು ತಾರಾಟೆಗೆ ತೆಗೆದುಕೊಂಡಿದ್ದು, ತಾವು ಹಲವು ವರ್ಷಗಳಿಂದ ಸಮುದ್ರ ತಡಿಯಲ್ಲಿ ಚಿಕ್ಕಪುಟ್ಟು ಮನೆಗಳನ್ನು ನಿರ್ಮಿಸಿ ವಾಸಿಸುತ್ತಿದ್ದು ಸಾಕು ಪ್ರಾಣಿಗಳ ಮೇವಿಗಾಗಿ ಸರ್ಕಾರಿ ಹಾಡಿ ಜಮೀನು ಬಿಟ್ಟಿರುತ್ತದೆ. ಆದರೆ ಸರ್ಕಾರ ನಮ್ಮ ವಿರೋಧದ ನಡುವೆಯೂ ಜಾನುವಾರುಗಳ ಆಹಾರಕ್ಕಾಗಿ ಬಿಟ್ಟಿರುವ ಸ್ಥಳದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿಯನ್ನು ನೀಡಿದ್ದು ಇದರಿಂದಾಗಿ ಇಲ್ಲಿ ವಾಸಿಸುವ ಗ್ರಾಮಸ್ಥರು ತೀರ ತೊಂದರೆಯನ್ನು ಅನುಭವಿಸುವಂತಾಗುತ್ತದೆ ಎಂದು ಶಾಸಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಇಲ್ಲಿ ಮಳೆಗಾಲದಲ್ಲಿ ಸಮುದ್ರ ನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗುತ್ತದೆ. ಆ ಸಂದರ್ಭದಲ್ಲಿ ನಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ಈ ಹಾಡಿ ಜಾಗವನ್ನು ಆಶ್ರಯಿಸುತ್ತೇವೆ. ಈಗ ಸಂಪೂರ್ಣ ಜಾಗವನ್ನು ಕಟ್ಟಡ ಕಟ್ಟಲು ಉಪಯೋಗಿಸಿದರೆ ನಮ್ಮನ್ನು ಕಾಪಾಡುವವರು ಯಾರು ಎಂದು ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.  

ಶಾಸಕ ಸುನಿಲ್ ನಾಯ್ಕ, ಇದು ಸರ್ಕಾರಿ ಜಾಗವಾಗಿದ್ದು ಇದನ್ನು ಖಾಸಗಿ ವ್ಯಕ್ತಿಗಳ ಉಪಯೋಗಕ್ಕೆ ನೀಡಲು ಬರುವುದಿಲ್ಲ. ಮತ್ತು ಇಲ್ಲಿ ಯಾವುದೇ ರೀತಿಯ ಮೇವಾಗಲಿ ಹುಲ್ಲಾಗಲಿ ಬೆಳೆಯದು ಇಂತಹ ಭೂಮಿಯಲ್ಲಿ ದನಕರು, ಪ್ರಾಣಿಗಳಿಗೆ ಯಾವುದೇ ರೀತಿಯ ಲಾಭ ದೊರಕದು, ಇಲ್ಲಿ ಸರ್ಕಾರಿ ಶಾಲೆ ನಿರ್ಮಾಣವಾದಲ್ಲಿ ಈ ಭಾಗದ ಜನರಿಗೆ ಪ್ರಯೋಜವಾಗುತ್ತದೆ ಎಂದು ತಿಳಿಸಲು ಪ್ರಯತ್ನಿಸಿದರೂ ಶಾಸಕರ ಮಾತಿಗೆ ಕ್ಯಾರೆ ಅನ್ನದ ಕೆಲ ಯುವಕರು ಗಟ್ಟಿ ದ್ವನಿಯಲ್ಲಿ ಶಾಸಕರೊಂದಿಗೆ ವಾಗ್ವಾದಕ್ಕಿಳಿದಾಗ ಶಾಸಕ ಸುನಿಲ್ ನಾಯ್ಕರೂ ಅವರದ್ದೇ ಧಾಟಿಯಲ್ಲಿ ಉತ್ತರಿಸಿದ್ದು ಪ್ರತಿರೋಧದ ನಡುವೆಯೆ ವಸತಿ ಶಾಲಾ ಸಮುಚ್ಛಾಯಕ್ಕೆ ಗುದ್ದಲಿ ಪೂಜೆಯನ್ನು ನೆರವೇರಸಿದರು. 

ಕಳೆದ ಅವಧಿಯಲ್ಲಿ ಮಾಂಕಾಳ್ ವೈದ್ಯರ ಶಾಸಕತ್ವದಲ್ಲಿ ಹೆಬಳೆ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಾಡಿ ಜಮೀನಿನಲ್ಲಿ ವಸತಿ ಶಾಲಾ ಸಮುಚ್ಛಾಯಕ್ಕಾಗಿ ಹತ್ತು ಎಕರೆ ಭೂಮಿ ಸರ್ಕಾರ ಮಂಜೂರಿ ಮಾಡಿದ್ದು  2017 ರ ಡಿಸೆಂಬರ್ ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ಧರಾಮ್ಯ ನವರು ವಸತಿ ಶಾಲಾ ಕಟ್ಟಡದ ಕಾಮಾಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...