ಪ್ರಯತ್ನ ಮತ್ತು ಏಕಾಗ್ರತೆ ವಿದ್ಯಾರ್ಥಿ ಜೀವನದ ಪ್ರಮುಖ ಅಂಗ-ರಾಮರಥ್

Source: sonews | By sub editor | Published on 28th July 2018, 11:42 PM | Coastal News |

ಭಟ್ಕಳ:  ಪ್ರಯತ್ನ ಮತ್ತು ಏಕಾಗ್ರತೆ ವಿದ್ಯಾರ್ಥಿ ಜೀವನದ ಪ್ರಮುಖ ಅಂಗ, ಇದನ್ನು ಗಳಿಸಿ ಇಂದಿನ ಈ ಸ್ಪರ್ಧಾತ್ಮಕಯುಗದಲ್ಲಿ ಯಶಸ್ಸು ಪಡೆಯಿರಿ ಎಂದು ಶಿರಾಲಿಯ ಜನತಾ ವಿದ್ಯಾಲಯ ಪಿ.ಯು ಕಾಲೇಜಿನ ಪ್ರಾಂಶುಪಾಲ ಎ.ಬಿ.ರಾಮರಥ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಶ್ರೀ ಗುರು ಸುಧೀಂದ್ರ ಬಿಸಿಎ ಬಿಬಿಎ ಕಾಲೇಜಿನಲ್ಲಿ 2018-19 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮತನಾಡಿದರು. 

ಉಪಸ್ಥಿತರಿದ್ದ  ಮತ್ತೋರ್ವ ಮುಖ್ಯ ಅತಿಥಿ ಹಾಗೂ ಹಳೆಯ ವಿದ್ಯಾರ್ಥಿ, ಎಕ್ಸೆಂಚರ್ ಕಂಪೆನಿಯ ಮಾರುಕಟ್ಟೆ ತಜ್ಞ ನರೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ್ಯವನ್ನು ಬೆಳೆಸಿಕೊಡು ಉದ್ಯೋಗವಂತರಾಗಬೇಕು ಎಂದರು. 

ಈ ಸಂದರ್ಭದಲ್ಲಿ 2017-18ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್  ಅಧ್ಯóಕ್ಷ ಡಾ. ಸುರೇಶ ನಾಯಕ್, ಆಡಳಿತಾಧಿಕಾರಿ ನಾಗೇಶ ಭಟ್ಟ್, ಬಿಸಿಎ ಪ್ರಾಂಶುಪಾಲ ಶ್ರೀನಾಥ ಪೈ, ಬಿ.ಕಾಂ ಶೈಕ್ಷಣಿಕ ಮುಖ್ಯಸ್ಥ ಪಿ.ಎಸ್. ಹೆಬ್ಬಾರ್, ಬಿ.ಬಿ.ಎ ಶೈಕ್ಷಣಿಕ ಸಂಯೋಜಕ ವಿಶ್ವನಾಥ ಭಟ್ಟ್ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ ಅಕ್ಷಯ್ ಪ್ರಭು ಹಾಗೂ ರಾಜೇಶ್ವರಿ ನಿರೂಪಿಸಿದರು. ಉಪನ್ಯಾಸಕ ಓಂಕಾರ ಮರ್ಬಳ್ಳಿ ವಂದಿಸಿದರು. 
 

Read These Next

ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ...