ಭಟ್ಕಳ:ಹಾಡುವಳ್ಳಿ ಗ್ರಾಮದಲ್ಲಿ ಮಂಗನ ಕಾಟ-ಪರಿಹಾರಕ್ಕೆ -ಮಂಗ ಹಿಡಿಯುವ ಕಾರ್ಯ

Source: so english | By Arshad Koppa | Published on 26th July 2017, 8:32 AM | Coastal News | Special Report |

ಭಟ್ಕಳ:- ತುಂಡು ತೋಟದಲ್ಲಿ ಅಡಿಕೆ-ತೆಂಗು ಬೆಳೆದು ಜೀವನ ಸಾಗಿಸುವ ಮಂದಿ ನಾವು, ಈ ನಿಮ್ಮ ಬಿಳಿ ಮುಸುಡಿನ ಮಂಗನ ಹಾವಳಿಯಿಂದ ಬೆಳೆ ಹಾನಿ ಗೀಡಾಗಿ ಫಲ ಕೈಗೆ ಬರುವ ಮೊದಲೇ ನಿರಾಶೆ ಅನುಭವಿಸುತ್ತಿದ್ದೇವೆ. ಸ್ವಾಮಿ ಇದಕ್ಕೊಂದು ಪರಿಹಾರ ಕೊಡಿ ಎಂದು ಗ್ರಾಮಸ್ಥರು ಹಾಡವಳ್ಳಿ ಗ್ರಾಮ ಪಂಚಾಯತ  ಗ್ರಾಮ ಸಭೆಯಲ್ಲಿ ಕೋರಿಕೊಂಡಾಗ ಮಂಗಗಳು ದಾಳಿ ಮಾಡುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಲ್ಲಿ ‘’ಮಂಗನ ಹಿಡಿಯುವ ಕಾರ್ಯ’’ ತಾವು ಮಾಡುವದಾಗಿ ಉಪ-ವಲಯಾರಣ್ಯಾಧಿಕಾರಿಗಳು ಸಭೆಗೆ ತಿಳಿಸಿದರು. 
         2017-18ರ ಮೊದಲ ಹಂತದ ಗ್ರಾಮ ಸಭೆಯಲ್ಲಿ ಸದ್ರಿ ವಿಷಯ ಪ್ರಸ್ತಾಪಿಸ್ಪಟ್ಟಾಗ ಅಧ್ಯಕ್ಷರು ಜಿ.ಪಂ ಸದಸ್ಯರು ಯೋಗ್ಯ ಪರಿಹಾರಕ್ಕೆ ಸೂಚಿಸಿದಾಗ ಅರಣ್ಯಾಧಿಕಾರಿಗಳು ಮೇಲಿನಂತೆ ಉತ್ತರಿಸಿದರು. 
         ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ 03 ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಘಟಕಗಳು ಆರಂಭವಾಗಿ 03 ವರ್ಷಗಳಾಗಿದ್ದರೂ ಈ ತನಕ 1 ಲೀಟರ್ ನೀರು ಸಹ ನಾಗರಿಕರು ಕುಡಿಯಲು ಸಾಧ್ಯವಾಗಿಲ್ಲ. ಆದರೂ ಗುತ್ತಿಗೆದಾರರಿಗೆ ಬಿಲ್ ನೀಡುವ ಹುನ್ನಾರ ನಡೆದಿದೆ ಎಂದು ಸಾರ್ವಜನಿಕರು ದೂರಿದಾಗ ಹಾಜರಿದ್ದ ಜಿ.ಪಂ ಸದಸ್ಯ ಆಲ್ಬರ್ಟ ಡಿಕೋಸ್ತರವರು ಕಾಮಗಾರಿ ಪೂರ್ಣಗೊಳಿಸದೆ ಬಿಲ್ ನೀಡಬಾರದೆಂದು ತಾಕೀತು ಮಾಡಲಾಗಿದೆ. ಆದರೂ ಬಿಲ್ ನೀಡಿರುವದು ಗಮನಕ್ಕೆ ಬಂದಲ್ಲಿ ಅಂಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಸಭೆಗೆ ತಿಳಿಸಿದರು. 


       ಈ ಹಿಂದೆ ನೀಡಿದ ಏಖಿ ಶ್ರೇಣ ಯ ಮತದಾರರ ಗುರುತು ಪತ್ರ ಕೆಲವರಲ್ಲಿದ್ದು ಅದು ನಿಷ್ಪಟ್ರಯೋಜಕವಾಗಿದ್ದು, ಹಾಲಿ ಏಙಙ ಶ್ರೇಣ ಯ ಗುರುತು ಪತ್ರ ಪಡೆಯುವ ಪ್ರಕ್ರಿಯೆ ವಿಳಂಬವಾಗುವದರಿಂದ ಸರಳೀಕೃತ ವ್ಯವಸ್ಥೆ ಜಾರಿಯಾಗಬೇಕೆಂದು ನಾಗರಿಕರು ಆಗ್ರಹಿಸಿ ತಹಶೀಲ್ದಾರರ ಗಮನಕ್ಕೆ ತರುವಂತೆ ಆಗ್ರಹಿಸಿದರು. 
       ಜಲಾನಯನ ಇಲಾಖೆಯಲ್ಲಿ ಆಗಿರುವ ಕಾಮಗರಿಯ ಅಂದಾಜು ಮೊತ್ತ ತಾರತಮ್ಯದಿಂದ ಕೂಡಿದ್ದು, ವ್ಯತ್ಯಾಸದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳನ್ನು ನಾಗರಿಕರು ಕೋರಿಕೊಂಡರು. 
       ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು, ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸದಸ್ಯರು, ನೋಡೆಲಅಧಿಕಾರಿಗಳಾದ ಶಿಶುಅಭಿವೃದ್ದಿ ಯೋಜನಾಧಿಕಾರಿ ಸುಶೀಲಾ ನಾಯ್ಕರವರು ಉಪಸ್ಥಿತರಿದ್ದರು. 
       ಪಂಚಾಯತ ಅಭಿವೃದ್ದಿ ಅಧಿಕಾರಿ ಕರಿಯಪ್ಪ ನಾಯ್ಕ ವಾರ್ಡ ಸಭಾ ಕಾಮಗಾರಿ ಯಾದಿ ಓದಿ ಹೇಳಿದರು. ಲೆಕ್ಕ ಸಹಾಯಕ ವಾಸು ಬಿ ಸ್ವಾಗತಿಸಿ ವಂದಿಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...