ಭಟ್ಕಳ: ಸರ್ಕಾರಿ ನೌಕರರರು ಸಾರ್ವಜನಿಕರ ಸೇವಕರು ಎಂಬ ಭಾವನೆಯಿಂದ ಕೆಲಸ ಮಾಡಲು ಸಿ.ಟಿ. ನಾಯ್ಕ ಕರೆ

Source: so english | By Arshad Koppa | Published on 5th August 2017, 2:39 PM | State News | Guest Editorial |

ಭಟ್ಕಳ: ಸರ್ಕಾರಿ ನೌಕರರರು ಸಾರ್ವಜನಿಕರ ಸೇವಕರು ಎಂಬ ಧೋರಣೆಯಲ್ಲಿ ಕಾರ್ಯನಿರ್ವಹಿಸುತ್ತ ಕಛೇರಿಗೆ ಕೆಲಸಕ್ಕಾಗಿ ಬರುವ ಜನ ಸಾಮಾನ್ಯರ ಸ್ಥಾನದಲ್ಲಿ ನಿಂತು ಸ್ಪಂದಿಸಬೇಕು ಎಂದು ಭಟ್ಕಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸಿ.ಟಿ ನಾಯ್ಕ ಕರೆ ನೀಡಿದರು. 
ಅವರು ತಾಲೂಕ ಪಂಚಾಯತ ಸಭಾ ಭವನದಲ್ಲಿ ಸೇವಾ ನಿವೃತ್ತರಾದ ಇಲಾಖಾ ಅಧಿಕಾರಿ, ನೌಕರರ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡುತ್ತಿದ್ದರು. 
ನಮ್ಮ ಮಾತು ಎಷ್ಟೆಗಡಸಾಗಿದ್ದರೂ, ಹೃದಯ ಮೃದುವಾಗಿರಬೇಕು. ನಾವು ಹೃದಯವಂತರಾಗಿ ಬಾವುಕ ಜೀವಿಯಾಗಿದ್ದಲ್ಲಿ ಸಮಾಜಮುಖಿಗಳಾಗಿ, ಇಲಾಖೆ ಮತ್ತು ಸಮಾಜದಋಣ ತೀರಿಸಲು ಸಾಧ್ಯ ಎಂದು ನುಡಿದರು. 
ಮಾವಳ್ಳಿ-II ಪ್ರಭಾರ ಪಂಚಾಯತ ಅಭಿವೃದ್ದಿ ಅಧಿಕಾರಿ ಎಸ.ಬಿ ಹತ್ತಿ, ಕಾಯ್ಕಿಣ  ಗ್ರಾಮ ಪಂಚಯತ ಅಭಿವೃದ್ದಿ ಅಧಿಕಾರಿ ಶಿವಾನಂದ ಸಾವಸಗಿ, ಕೋಣಾರ ಗ್ರಾಮ ಪಂಚಾಯತ ಕಾರ್ಯದರ್ಶಿ ರಾಮಚಂದ್ರ ಖಾರ್ವಿ, ಹಿಂದುಳಿದ ವರ್ಗ ಇಲಾಖೆಯ ಅಡುಗೆ ಸಿಬ್ಬಂದಿ ದೇವಯ್ಯ ಗೊಂಡ ರವರು ನಿವೃತ್ತಿಯ ನಿಮಿತ್ತ ಫಲ ತಾಂಬೂಲ, ಸ್ಮರಣ ಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. 
ನಿವೃತ್ತರ ಸೇವಾವಧಿಯಲ್ಲಿ ಸಲ್ಲಿಸಿದ ಸೇವೆಯ ಕುರಿತು ತಾಲೂಕ ಪಂಚಾಯತ ವ್ಯವಸ್ಥಾಪಕ ಸುದೀರ ಗಾಂವಕರ, ಹಿಂದುಳಿದ ವರ್ಗಗಳ  ವಿಸ್ತರಣಾಧಿಕಾರಿ ಅನಂತ ಭಟಕಳ, ಪಂಚಾಯತ ಅಭಿವೃದ್ದಿ ಅಧಿಕಾರಿ ಮಹೇಶ್ ವಿ ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕಿ ಶಾರದ ನಾಯ್ಕ, ಪ್ರಭಾರ ಪಂ.ಅ.ಅಧಿಕಾರಿ ಎಂ.ಎ.ಗೌಡ, ರಾಘವೇಂದ್ರ ಪೂಜಾರಿ ಮಾತನಾಡಿದರು. 
ಸನ್ಮಾನಕ್ಕುತ್ತರಿಸಿ ಸನ್ಮಾನಿತರು ಮಾತನಾಡಿದರು. 
ವೇದಿಕೆಯಲ್ಲಿ ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕರಾದ ವಿಶ್ವನಾಥ ಕೋಟ್ಯಾನ ಉಪಸ್ಥಿತರಿದ್ದರು. 
ಗೋಪಾಲ ನಾಯ್ಕ ಪ್ರಾರ್ಥಿಸಿದರು, ಸುಧೀರ ಗಾಂವಕರ ಸ್ವಾಗತಿಸಿದರು. ಅನಂತ ಭಟ್ಕಳ ಕಾರ್ಯಕ್ರಮ ನಿರ್ವಹಿಸಿದರು. ಮಾವಳಿ-್ಳII ಪಂಚಾಯತ ಅಭಿವೃದ್ದಿ ಅಧಿಕಾರಿ ಮಾರುತಿ ದೇವಾಡಿಗ ಕೊನೆಯಲ್ಲಿ ವಂದಿಸಿರು. 
 

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...