ಭಟ್ಕಳ: ಬೆಳಕೆ ಪ್ರೌಢಶಾಲೆಯಲ್ಲಿ ಉದ್ಯಮಿ ಶಿವಾನಿ ಶಾಂತಾರಾಮ

Source: S O News service | By I.G. Bhatkali | Published on 18th July 2018, 10:25 PM | Coastal News |

ಭಟ್ಕಳ: ಪುಸ್ತಕ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಶಕ್ತಿ ಸಾಮಥ್ರ್ಯವನ್ನು ಹೆಚ್ಚಿಸಿ, ಬುದ್ದಿಯನ್ನು ಒರೆಗೆ ಹಚ್ಚಿಸುವ ಕೆಲಸಮಾಡಿಸುತ್ತದೆ. ಪುಸ್ತಕ ಓದು ಮನುಷ್ಯನಿಗೆ ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಸಹಕಾರಿ ಎಂದು ಉದ್ಯಮಿ ಶಿವಾನಿ ಶಾಂತರಾಮ ಹೇಳಿದರು.

ಅವರು ಬುಧವಾರ ಬೆಳಕೆ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾಮಾನ್ಯ ಜ್ಞಾನ ಕೈಪಿಡಿಯನ್ನು ವಿತರಿಸಿ ಮಾತನಾಡಿದರು. ಪ್ರೌಢಾವಸ್ಥೆಯಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಧನಾತ್ಮಕ ಶಕ್ತಿ ಹೆಚ್ಚಿದ್ದು, ಹೇಳಿದ್ದನ್ನು ಬೇಗ ಮನನ ಮಾಡಿಕೊಳ್ಳುವ ಸಾಮಥ್ರ್ಯ ಇದೆ. ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಮಾಜಿಕ, ರಾಜಕೀಯ ಬಾಹ್ಯ ಪ್ರಪಂಚಗಳ ಅರಿವು ತನ್ನ ಮೇಲೆ ತನಗೆ ನಂಬಿಕೆ ಮೂಡುವಂತೆ ಮಾಡುತ್ತದೆ. ವಿದ್ಯೆ ವಿನಯವನ್ನು ಕಲಿಸುತ್ತದೆ ಎಂದರು.

ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿ, ಸಾಮಾನ್ಯ ಜ್ಞಾನ ನೀಡುವ ಸಂಚಿಕೆಗಳು ಕೇವಲ ವಿದ್ಯಾರ್ಥಿಗಳ ಮಿತ್ರನಲ್ಲ. ಭವಿಷ್ಯಕ್ಕೆ ಇರುವ ತಳಪಾಯವಾಗಿದೆ. ವಿದ್ಯಾರ್ಥಿ ದೆಸೆಯಿಂದಲೆ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಶಾಲಾ ಮುಖ್ಯೋಪಾಧ್ಯಾಯ ಚಂದ್ರಕಾಂತ ಗಾಂವಕರ್, ಶಾಲೆಯ ಪ್ರಯೋಗಾಲಯಕ್ಕೆ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ನಿಬಂದಕ ಸದಾಶಿವ ಆಚಾರ್ಯ, ಬೆಳಗಾವಿ ಉದ್ಯಮಿ ಭಟ್ಕಳ ಮೂಲದ ನಾರಾಯಣ ನಾಯ್ಕ, ಉದ್ಯಮಿ ಶಿವಾನಿ ಶಾಂತರಾಮ ಕೊಡುಗೆಗಳನ್ನು ಸ್ಮರಿಸಿಕೋಮಡರು. ಯಂತ್ರ ನಿರ್ವಾಹಕ ದೇವೇಂದ್ರ ನಾಯ್ಕ, ರಂಜನ್ ಇಂಡೇನ್ ಗ್ಯಾಸ್‍ನ ಶಾಂತರಾಮ ಭಟ್ಕಳ ಇದ್ದರು. ದೈಹಿಕ ಶಿಕ್ಷಕ ಪ್ರಕಾಶ ಶಿರಾಲಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.  ಶಿಕ್ಷಕ ಚಂದ್ರಶೇಖರ ಶಿರೂರು ವಂದಿಸಿದರು. ಭಾವನ ಸಂಗಡಿಗರು ಪ್ರಾರ್ಥಿಸಿದರೆ, ಶಿಕ್ಷಕ ಎನ್. ಜಿ. ಗೌಡ ಕಾರ್ಯಕ್ರಮ ನಿರೂಪಿಸಿದರು. 

Read These Next