ಭಟ್ಕಳ 13 ಅಡಿ ಕಾಳಿಂಗ ಸರ್ಪ ಪತ್ತೆ :ಸೆರೆ ಹಿಡಿದ ಉರಗ ತಜ್ಞ ನೌಫಿಲ್

Source: S.O. News Service | By MV Bhatkal | Published on 14th October 2018, 4:54 PM | Coastal News |

ಭಟ್ಕಳ: ತಾಲೂಕಿನ ಕಿತ್ರೆ ಗ್ರಾಮ ವ್ಯಾಪ್ತಿಯ ಬಸ್ ನಿಲ್ದಾಣದ ಸಮೀಪದಲ್ಲಿ ಶುಕ್ರವಾರದಂದು ಸಂಜೆ 13 ಅಡಿ ಕಾಳಿಂಗ ಸರ್ಪವನ್ನು ಸ್ಥಳಿಯ ಉರಗ ತಜ್ಞ ಸೌಫಿಲ್ ಸೆರೆ ಹಿಡಿದು ಇಲ್ಲಿನ ಗಡಿಭಾಗದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. 
ಶುಕ್ರವಾರದಂದು ಇಲ್ಲಿನ ಕಿತ್ರೆ ರಸ್ತೆಯ ಮಾರ್ಗದಲ್ಲಿ ಕಾಳಿಂಗ ಸರ್ಪವೂ ಓಡಾಡಲು ಆಗದ ಸ್ಥಿತಿಯಲ್ಲಿದ್ದ ವೇಳೆ ಇಲ್ಲಿನ ಸ್ಥಳಿಯರ ಗಮನಕ್ಕೆ ಬಂದಿದೆ. ತಕ್ಷಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಉರಗ ತಜ್ಞ ನೌಫಿಲ್ ಅವರಿಗೆ ಸ್ಥಳಿಯರು ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ನೌಫಿಲ್ ಸಾಕಷ್ಟು ಪ್ರಯತ್ನ ಪಟ್ಟು ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದು ತಾಲೂಕಿನ ಗಡಿಭಾಗದ ಅರಣ್ಯ ಪ್ರದೇಶಕ್ಕೆ ಹಾವನ್ನು ಬಿಟ್ಟು ಬಂದಿದ್ದಾರೆ. ಕಾಳಿಂಗ ಸರ್ಪವು ಹೆಬ್ಬಾವೊಂದನ್ನು ನುಂಗಿದ್ದರ ಹಿನ್ನೆಲೆ ಓಡಾಡಲು ಆಗದ ಸ್ಥಿತಿಯಲ್ಲಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. 
ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ರವಿ ಮತ್ತು ಮಲ್ಲಿಕಾರ್ಜುನ, ಅರಣ್ಯ ರಕ್ಷಕ ರಾಮ ನಾಯ್ಕ ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...