ಭಟ್ಕಳ:  ಹಾವು ಕಡಿತದಿಂದ ರೈತನ ಸಾವು

Source: sonews | By Staff Correspondent | Published on 9th August 2018, 12:07 AM | Coastal News | Don't Miss |

ಭಟ್ಕಳ: ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನಿಗ ಹಾವು ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬುಧವಾರ ಬೇಂಗ್ರೆಯ ಸೋಮಿನ ಮನೆ ಎಂಬಲ್ಲಿ ಜರಗಿದೆ.

ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ರೈತನನ್ನು ಮಂಜಯ್ಯ ಮಾಸ್ತಿ ದೇವಾಡಿಗ(೬೫ ) ಎಂದು ಗುರುತಿಸಲಾಗಿದೆ. ಕಳೆದ ರವಿವಾರ ಮಂಜಪ್ಪ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿತ್ತು ಎಂದು ಹೇಳಲಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತರಿಗೆ ಪತ್ನಿ ಹಾಗೂ ಐದು ಜನ ಮಕ್ಕಳಿದ್ದಾರೆ ಎನ್ನಲಾಗಿದೆ. ಪ್ರಕರಣ ಮುರುಢೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read These Next