ಸೋಲಾರ್ ದೀಪದ ಬ್ಯಾಟರಿ ಕಳವು ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗಿ; ಇಬ್ಬರ ಸೆರೆ

Source: sonews | By Staff Correspondent | Published on 26th December 2018, 11:19 PM | Coastal News | Don't Miss |

ಭಟ್ಕಳ: ತಾಲೂಕಿನ ಬೇಂಗ್ರೆ ಶಿರಾಲಿ ಮುರುಡೇಶ್ವರದ ವ್ಯಾಪ್ತಿಯಲ್ಲಿ ಬೀದಿಗಳಲ್ಲಿ ಅಳವಡಿಸಲಾದ ಸೋಲಾರ್ ದೀಪದ ಬ್ಯಾಟರಿಗಳನ್ನು ಕಳವುಗೈದ ಆರೋಪದಲ್ಲಿ ಭಟ್ಕಳದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಗಳನ್ನು ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುರಾಜ್ ಮಹದೇವ್ ನಾಯಕ್ ಹಾಗೂ ಕಂಡುಕೊಳ್ಳು ನಿವಾಸಿ ಸುದೀಪ್ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ.

ಇವರ ಪೈಕಿ ಗುರುರಾಜ್ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದರೆ ಸುದೀಪ್ ಪಿಯುಸಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಂಧಿತರಿಂದ ಮೂರು ಸೋಲಾರ್ ಬ್ಯಾಟರಿ ಹಾಗೂ ಬ್ಯಾಟರಿ ತೆಗೆಯಲು ಬಳಸುವ ಸ್ಕ್ರೂ ಡ್ರೈವರ್ ಇನ್ನಿತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...