ಅರಬ್ ಜಗತ್ತಿನ ಪ್ರಸಿದ್ದ ಟಾಪ್೫೦ ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿಯಲ್ಲಿ ಭಟ್ಕಳದ ಮುಸ್ತಾಖ್ ಮಸೂದ್ ಗೆ ೪೨ನೇ  ಸ್ಥಾನ

Source: sonews | By Sub Editor | Published on 18th May 2017, 11:57 PM | Coastal News | State News | National News | Gulf News | Global News | Special Report | Don't Miss |

ಭಟ್ಕಳ: ಭಟ್ಕಳದ ಸುಪುತ್ರನೊಬ್ಬ ಅರಬ್ ಜಗತ್ತಿನ ಪ್ರಸಿದ್ದ ಟಾಪ್ ೫೦ ಭಾರತೀಯ ಎಕ್ಸಿಕ್ಯೂಟ್ ಗಳ ಸಾಲಿನ ೪೨ನೇ ಸ್ಥಾನದಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದು ಭಟ್ಕಳ ಹಾಗೂ ಭಾರತೀಯರ ಪಾಲಿಗೆ ಸಂತಸದ ವಿಷಯವಾಗಿದೆ.

ಭಟ್ಕಳದ ಖ್ಯಾತ ಮೌಲಾನ ಕುಟುಂಬದ  ಎಸ್.ಎಂ.ಸೈಯ್ಯದ್ ಮುಸ್ತಾಖ್ ಮಸೂದ್ ಮಧ್ಯಪ್ರಾಚ್ಯದ ಫೋರ‍್ಬಸ್ ಸಂಸ್ಥೆ ಪ್ರಕಟಿಸಿದ ಖ್ಯಾತನಾಮ ಟಾಪ್ ೫೦ ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿ ಸ್ಥಾನವನ್ನು ಪಡೆದುಕೊಂಡಿದ್ದು ಭಟ್ಕಳಿಗರ ಹೆಸರನ್ನು ಜಾಗತಿಕ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದೆ.

ಭಟ್ಕಳದ ಮೌಲಾನ ಲುಂಬಿ ಜಗತ್ತಿನಲ್ಲೆ ಹೆಸರು ಮಾಡಿದೆ. ಈಗ ಅದೇ ಕುಟುಂಬದ ಸದಸ್ಯನೊಬ್ಬ ತನ್ನ ಅಗಾಧ ಪ್ರತಿಭೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದು ಇಲ್ಲಿನ ಪ್ರತಿಭೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಮೌಲಾನ ಲುಂಗೀಸ್ ನ ನಿರ್ದೇಶಕ ಹಾಗೂ ಮೀಟಾಲೆಕ್ಸ್  ಎಜೆನ್ಸೀಸ್ ಎರ್ನಾಕುಲಂ ನ ಭಾಗಿಧಾರ ಎಸ್.ಎಂ.ಸೈಯ್ಯದ್ ಮಸೂದ್ ರ ಪುತ್ರರಾಗಿರುವ ಮುಷ್ತಾಖ್ ಮಸೂದ್ ದುಬೈ ಇನ್ವೆಸ್ಟ್ಮೆಂಟ್ ಗ್ರೂಪ್ ಪಿ.ಜೆ.ಎಸ್.ಸಿ ಯ ಸಿಎಫ್ಓ ಹುದ್ದೆಯನ್ನು ಅಲಂಕರಿಸಿದ್ದು ಚಾರ‍್ಟೆಡ್ ಅಕೌಂಟೆಂಟ್ ಆಗಿದ್ದಾರೆ. ಫೊರ‍್ಬಸ್ ಮಿಡ್ಲ ಈಸ್ಟ್ ಸಂಸ್ಥೆಯು ಮುಷ್ತಾಖ್ ರನ್ನು ಇವರ ಉತ್ತಮ ಕಾರ್ಯವೈಖರಿಯನ್ನು ಕಂಡು ತನ್ನ ಟಾಪ್ ೫೦ ಮಂದಿಯಲ್ಲಿ ಸ್ಥಾನವನ್ನು ನೀಡಿದೆ. ದುಬೈ ಇನ್ವೆಸ್ಟ್ಮೆಂಟ್ ಪಿಜೆಎಸ್ಸಿ  ಕಂಪಿನಿಯ ಗ್ರೂಪ್ ಸಿ.ಎಫ್.ಓ ಆಗಿರುವ ಇವರು ಹಣಕಾಸು ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ. ಫೈನಾನ್ಶಿಯಲ್ ಇಂಡಸ್ಟ್ರಿಯಲ್ ಮತ್ತು ರಿಯಲ್ ಎಸ್ಟೇಟ್ ನಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಈ ಕಂಪನಿಯ ಸಂಪೂರ್ಣ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಇವರು ತಮ್ಮ ಪ್ರತಿಭೆಯಿಂದಾಗಿ ಕಂಪನಿಯನ್ನು ಉತ್ತುಂಗಕ್ಕೇರುವಂತೆ ಮಾಡಿದ್ದಲ್ಲದೆ ಇದರ ಉಪಸಂಸ್ಥೆಗಳಾದ ಅಲ್ ಮಾಲ್ ಕ್ಯಾಪಿಟಲ್ ಪಿಎಸ್ಸಿ ಇದರ ಬೋರ್ಡ್ ಆಫ್ ಡೈರಕ್ಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಸೈಯ್ಯದ್ ಮುಷ್ತಾಖ್ ಕೇರಳದ  ಎರ್ನಾಕುಲಂ ನ  ಸೆಂಟ್ ಅಲ್ಬರ್ಟ್ ಕಾಲೇಜಿನಿಂದ ವಾಣಿಜ್ಯ ಪದವಿಯನ್ನು ಪಡೆದು ಸ್ಥಾನೀಯ ಆಡಿಟ್ ಫೊರಂ ನೊಂದಿಗೆ ಸೇರಿ ೧೯೮೯ರಲ್ಲಿ ಸಿ.ಎ ಪದವಿಯನ್ನು ಪೂರ್ಣಗೊಳಿಸಿದರು. ನಂತರ ದುಬೈಗೆ ಉದ್ಯೋಗ ಅರಸಿ ಬಂದ ಅವರನ್ನು ಅಲ್ಲಿ ಕೈಯಾಡಿದ್ದಲ್ಲೆ ಚಿನ್ನವನ್ನೇ ಹೆಕ್ಕತೊಡಗಿದರು.  ಅಲ್ಲಿ ಆರ್ಥರ್ ಯಂಗ್ ಮತ್ತು ಆರ್ಥರ್ ಅಂಡ್ರಸೆನ್ ಕಂಪನಿಯಲ್ಲಿ ಆಡಿಟರ್ ಆಗಿ ನೇಮಕಗೊಂಡರು.೧೯೯೨ರಲ್ಲಿ ಅಬುದಾಬಿ ಗೆ ಸ್ಥಳಾಂತರಗೊಂಡು ಅಲ್ಲಿನ ಪ್ರಸಿದ್ಧ ಪೆಟ್ರೋಲಿಯಂ ಕಂಪನಿ ಅಡ್ನೋಕ್ ಡಿಸ್ಟ್ರಿಬ್ಯೂಶನ್ ನಲ್ಲಿ ಆಂತರಿಕ ಆಡಿಟರ್ ಹುದ್ದೆಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರು. ೧೯೯೯ ರಲ್ಲಿ ಸೈಯ್ಯದ್ ಮುಷ್ತಾಖ್ ಕುಪೋಲಾ ಗ್ರೂಪ್ ಸೇರಿ ಅಡಿಟಿಂಗ್ ನಿಂದ ಫೈನಾನ್ಸ್ ವಿಭಾಗದಲ್ಲಿ ತಮ್ಮ ಪ್ರಯಾಣವನ್ನು ಬೆಳೆಸಿದರು. ನಂತರ ಮಿಡ್ಲ್ ಈಸ್ಟ್ ಮತ್ತು ನಾರ್ತ ಆಫ್ರೀಕಾ (ಮೀನಾ ) ದಲ್ಲಿ ಅಬರಾಝ್ ಕ್ಯಾಪಿಟಲ್ ನೊಂದಿಗೆ ಗುರುತಿಸಕೊಂಡರು. ಇಲ್ಲಿನ ಅವರ ಪ್ರತಿಭೆಗೆ ಮತ್ತಷ್ಟು ಹೊರಬರಲು ಸಾಧ್ಯವಾಗಿದ್ದು ತಮ್ಮ ಕೆಲಸದಲ್ಲಿನ ಶ್ರದ್ಧೇ ಮತ್ತು ಪ್ರಾಮಾಣಿಕತೆಯಿಂದಾಗಿ ಅವರು ದುಬೈ ಇನ್ವೆಸ್ಟ್ಮೆಂಟ್ಸ್ ಗಾಗಿ ಕೆಲಸ ಮಾಡುವ ಸುಸಂದರ್ಭವನ್ನು ಗಳಿಸಿಕೊಂಡರು.

ಇಂದು  ಪ್ರತಿಯೊಬ್ಬರು ಇಂತಹ ಅಗಾಧ ಪ್ರತಿಭಾವಂತನನ್ನು ಪಡೆದ ಭಟ್ಕಳ ಹಾಗೂ ಭಟ್ಕಳದ ಜನತೆ ಸೌಭಾಗ್ಯವಂತರು ಎಂದು ಹೇಳುವಂತಾಗಿದೆ.

 

Read These Next

ಮುಂಡಗೋಡ: ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಮಾರ್ಪಡುವುದು ಶಿಕ್ಷಕರ ನೀಡುವ ಪಾಠದಿಂದ : ಶಿವರಾಮ ಹೆಬ್ಬಾರ

ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ  ಕ್ರೀಡಾ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕ ಉದ್ಘಾಟಿಸಿ ಮಾತನಾಡಿದರು.

ಮುಂಡಗೋಡ:ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ನೇರಾ ನೇರ ಹಣಾಹಣಿ, ಜೆಡಿಎಸ್ ಲೆಕ್ಕಕ್ಕಿಲ್ಲಾ : ಶಿವರಾಮ ಹೆಬ್ಬಾರ

ಸರಕಾರದ ಯೋಜನೆಯಾದ ಉಜ್ವಲ ಗ್ಯಾಸ ಯೋಜನೆಯ ಗ್ಯಾಸ ಫಲಾನುಭವಿಗಳಿಗೆ ವಿತರಣೆ ಮಾಡುವ ಸ್ಥಳಿಯ ಗ್ಯಾಸ ವಿತರಕ ವಾಹನಗಳಿಗೆ ತಮ್ಮ ಕುಟುಂಬದ( ...

ಮುಂಡಗೋಡ ಕ್ಯಾಸನಕೇರಿ-ತ್ಯಾಮನಕೊಪ್ಪ ರಸ್ತೆಯಲ್ಲಿ ಹೊಂಡಗಳು ಪರದಾಡುತ್ತಿರುವ ಗ್ರಾಮಸ್ಥರು

ಈಗ ರಸ್ತೆ ಹದಗೆಟ್ಟಿರುವುದರಿಂದ ತ್ಯಾಮನಕೊಪ್ಪ ಗ್ರಾಮಸ್ಥರು ತಗ್ಗಿನಕೊಪ್ಪ ಮಾರ್ಗವಾಗಿ ಕರವಳ್ಳಿ ಬಂದು ಅಲ್ಲಿಂದ ಕುಸೂರ ಕತ್ತರಿಯ ...

ಕೋಲಾರ: ವೇತನ ತಾರತಮ್ಯ ನಿವಾರಣೆಗೆ ಪ್ರೌಢಶಾಲಾ ವೃತ್ತಿ ಶಿಕ್ಷಕರ ಮನವಿ-ಮೂಲ ವೇತನ ವ್ಯತ್ಯಾಸ ಸರಿಪಡಿಸಲು ಆಗ್ರಹ

ಬೆಂಗಳೂರಿನಲ್ಲಿ ರಾಜ್ಯ ವೇತನ ಆಯೋಗಕ್ಕೆ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಮಂಜೇಗೌಡ ಸೇರಿದಂತೆ ಪದಾಧಿಕಾರಿಗಳು ವೇತನ ತಾರತಮ್ಯ ...

ಕೋಲಾರ: ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಜಿ.ಆಂಜಿನಪ್ಪ ಆಯ್ಕೆ

ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಸರ್ವಸದಸ್ಯರ ಸಭೆ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಪಿಯು ಕಾಲೇಜಿನಲ್ಲಿ ...

ಕೋಲಾರ: ಸರ್ಕಾರದ ಯೋಜನೆಗಳು ಕ್ರೈಸ್ತ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು -ಐವನ್ ಡಿಸೋಜಾ

ರಾಜ್ಯ ಸರ್ಕಾರವು 2013-14, 2014-15, 2015-16, 2016-17, 2017 ಮತ್ತು 2017-18 ನೇ ಸಾಲುಗಳಲ್ಲಿ  ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೋಸ್ಕರ ಪ್ರಯೋಜಿಸಿರುವ ...