ಭಟ್ಕಳ: ಗುಳ್ಮಿ ರಸ್ತೆಯಲ್ಲಿ ರಾತ್ರಿ ಅರಳಿದ ಅಪರೂಪದ ಬ್ರಹ್ಮ ಕಮಲ 

Source: manju | By Arshad Koppa | Published on 25th September 2016, 8:40 PM | Special Report |

ಭಟ್ಕಳ, ಸೆ ೨೪: ಭಟ್ಕಳ ತಾಲೂಕು ಈಗ ಕೇವಲ ಮಲ್ಲಿಗೆಯ ಪಟ್ಟಣವಾಗದೇ ಕೆಲವು ತಿಂಗಳಿನಿಂದ ಬ್ರಹ್ಮ ಕಮಲದ ಊರಾಗಿಯೂ ಸಹ ಬೆಳಕಿಗೆ ಬಂದಿದೆ. ಇದಕ್ಕೆ ಮತ್ತೊಂದು ಉದಾಹರಣೆ ತಾಲೂಕಿನ ಗುಳ್ಮಿ ರಸ್ತೆಯಲ್ಲಿನ ನಿವಾಸಿಯಾದ ತುಳಸಿದಾಸ ಪ್ರಭು ಮನೆಯಲ್ಲಿ ಬ್ರಹ್ಮ ಕಮಲ ಹೂವು ಅರಳಿದೆ. ಸ್ವರ್ಗಲೋಕದ ಹೂವೆಂದೆ ಹೆಸರು ಪಡೆದಿರುವ  ಈ ವಿಶೇಷ ಬ್ರಹ್ಮ ಕಮಲ ಅರಳಿದ್ದು, ಈ ಹೂವು ಅದೃಷ್ಟ ತರುತ್ತದೆಂಬ ಮಾತ ಸಹ ಇದೆ. ಶುಕ್ರವಾರದಂದು ರಾತ್ರಿ ಒಂದೇ ಸಮಯದಲ್ಲಿ 7 ಹೂವುಗಳು ತುಳಸಿದಾಸ ಪ್ರಭು ಮನೆಯ ತೋಟದಲ್ಲಿ ಅರಳಿದ್ದು, ಮನೆ ಮಂದಿಗಷ್ಟೇ ಅಲ್ಲದೇ ಅಕ್ಕಪಕ್ಕದ ಮನೆಯವರು ಈ ಬ್ರಹ್ಮ ಕಮಲದಿಂದ ತಮಗೆ ಅದೃಷ್ಟ ಒಲಿಯಲೆಂದು ವೀಕ್ಷಣೆಗೆ ಬಂದಿರುವುದು ವಿಶೇಷವಾಗಿತ್ತು. 
“ಹೂವಿನ ವಿಶೇಷತೆಯೆನೇಂದರೆ ಇದು ಅರಳುವುದು ರಾತ್ರಿ ಹಾಗು ಅರಳಿದ ಕೆಲವು ಗಂಟೆಗಳಲ್ಲಿ ಸುವಾಸನೆ ಬೀರಿ ಮೂದುಡಿ ಹೋಗುತ್ತದೆ.” 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...