ಅನಧೀಕೃತವಾಗಿ ಜಾನುವಾರು ವಧೆ ತಡೆಗೆ ಆಗ್ರಹಿಸಿ ಬೆಳ್ನಿ ಸಾರ್ವಜನಿಕರಿಂದ ಮನವಿ

Source: S.O. News Service | By Manju Naik | Published on 15th August 2018, 9:21 PM | Coastal News | Don't Miss |

ಭಟ್ಕಳ: ತಾಲೂಕಿನ ಮಾವಿನಕುರ್ವೆ ಬೆಳ್ನಿ ವ್ಯಾಪ್ತಿಯಲ್ಲಿ ಜಾನುವಾರು ಹಿಂಸೆಗೆ ತಡೆ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ಭಟ್ಕಳ ಸಿಪಿಐ ಮೂಲಕ ಡಿವಾಯ್‍ಎಸ್ಪಿಯವರಿಗೆ ಮನವಿ ಸಲ್ಲಿಸಿದರು.
ಬೆಳ್ನಿ ಗ್ರಾಮದ ಜನತಾ ಕಾಲೋನಿಯಲ್ಲಿ ನಾಗಬನ, ದೇವಸ್ಥಾನಗಳು ಇವೆ. ಈ ಪ್ರದೇಶದಲ್ಲಿ ಹಬ್ಬದ ಹೆಸರಿನಲ್ಲಿ ಜಾನುವಾರು ವಧೆ ಮಾಡಿ ರಕ್ತವನ್ನು ಪೂಜಾ ಸ್ಥಳದತ್ತ ಹರಿಸಲಾಗುತ್ತದೆ. ಅಲ್ಲದೇ ಜಾನುವಾರು ವಧೆ ಸಂದರ್ಭದಲ್ಲಿ ನಡೆಯುವ ಜನರ ಕೂಗಾಟ, ಚೀರಾಟ ಸುತ್ತಮುತ್ತ 100ಮೀವರೆಗೂ ಕೇಳಿಸುತ್ತದೆ. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗುತ್ತಿದೆ. ನಾವು ಕಳೆದ ವರ್ಷವೇ ಇದನ್ನು ತಡೆಯುವಂತೆ ಮನವಿ ಮಾಡಿಕೊಂಡಿದ್ದರೂ ಈ ಬಗ್ಗೆ ಯಾರೂ ಲಕ್ಷ್ಯ ವಹಿಸುತ್ತಿಲ್ಲ. ಇದು ಬೆಳ್ನಿ ಪರಿಸರದಲ್ಲಿ ಜಗಳಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಿಪಿಐ ಗಣೇಶ ಮನವಿಯನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಬೆಳ್ನಿ ಭಾಗದ ಸಾರ್ವಜನಿಕರಾದ ರಮೇಶ ನಾಯ್ಕ, ದಾಸ ನಾಯ್ಕ, ರವಿ ನಾಯ್ಕ, ನಾರಾಯಣ ನಾಯ್ಕ, ಪಾಂಡು ನಾಯ್ಕ, ವೆಂಕಟೇಶ ನಾಯ್ಕ, ನಾಗಪ್ಪ ನಾಯ್ಕ ಸೋಮಯ್ಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...