ಭಟ್ಕಳ: ಸರಕಾರಿ ಪ್ರೌಢ ಶಾಲೆ ಬೆಳಕೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ

Source: varthabhavan | By Arshad Koppa | Published on 16th August 2017, 9:46 PM | Coastal News | Guest Editorial |

71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮುಖ್ಯಾಧ್ಯಪಕರಾದ ಚಂದ್ರಕಾಂತ ಗಾಂವಕರ ಧ್ವಜಾರೋಹಣ ನರವೇರಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸ್ಕೌಟ್ ,ಗೈಡ್. ಮತ್ತು ಶಾಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಬಿಂಬಿಸುವ ಭಿತ್ತಿ  ಚಿತ್ರ ಹಾಗೂ ಘೋಷಣೆಯೊಂದಿಗೆ ಬೆಳ್ಕೆ ಗ್ರಾಮ ಪಂಚಾಯತ. ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಪಥಸಂಚಲನ ಮಾಡಲಾಯಿತು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ  ಗೊರ್ಟೆಯ ದೇಶಪ್ರೇಮಿ ನಾರಾಯಣ ನರಸಿಂಹ ಪೈ ಇವರನ್ನು ಸನ್ಮಾನಿಸಲಾಯಿತು.ನಿವೃತ್ತ ಅಂಚೆ ಪೇದೆ 79,ವರ್ಷದ ನಾರಾಯಣ ಪೈ ಇವರು ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವದಂದು ಸುತ್ತ ಮುತ್ತಲ71 ಶಾಲೆಗಳಿಗೆ ಸಿಹಿಯನ್ನು ಇಳಿ ವಯಸ್ಸಿನಲ್ಲಿ ಸೈಕಲ್ ತುಳಿಯುತ್ತಾ 4-5 ದಿನಗಳ ಮೊದಲೇ ವಿತರಿಸುತ್ತಾ ಬಂದಿದ್ದಾರೆ.


ಕಳೆದ ಬಾರಿ ಸೈನಿಕರ ಕಲ್ಯಾಣ ನಿಧಿಗೆ 10,000 ರೂಪಾಯಿಯನ್ನು ನೀಡಿ ತಮ್ಮ ದೇಶ ಪ್ರೇಮವನ್ನು ಮೆರೆದಿದ್ದಾರೆ.ಈ ವರ್ಷವೂ ಕೂಡ ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆ ನಿಡುವ ನಿರ್ಧಾರ ಮಾಡಿದ್ದಾರೆ.ಸನ್ಮಾನ ಸ್ವೀಕರಿಸಿ ಮಾತನಾಡಿ  ವಿದ್ಯಾರ್ಥಿಗಳು ಗುರುಗಳ  ಮಾರ್ಗದರ್ಶನ ಪಡೆದು  ತಮ್ಮ ಗುರಿಯನ್ನು ತಲುಪಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಧ್ಯಾಪಕರಾದ ಚಂದ್ರಕಾಂತ ಗಾವಂಕರ ವಿದ್ಯಾರ್ಥಿಗಳು ಸ್ವಾಭಿಮಾನಿಗಳಾಗಿ ಉತ್ತಮ ಗುಣಗಳನ್ನು ಬೆಳಸಿಕೊಂಡು ಸಮಾಜದ ಕೀರ್ತಿವಂತ ಪ್ರಜೆಗಳಾಗ ಬೇಕೆಂದು ಸಂದೇಶ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ.ಇವರ ವಿದ್ಯಾರ್ಥಿ ಪ್ರೋತ್ಸಾಹಕ ಕಾರ್ಯಕ್ರಮವನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ  ವೇದಿಕೆಯಲ್ಲಿ ಮುಖ್ಯಾಧ್ಯಾಪಕರಾದ ಚಂದ್ರಕಾಂತ ಗಾಂವಕರ,  ನಯನ ಶಿರಾಲಿ, ಅನಂತ ಆಚಾರ್ಯ, ಸಿ ಎಸ್ ಬೈಲೂರು, ಎನ್ ಜಿ ಗೌಡ, ವಿದ್ಯಾರ್ಥಿ ಪ್ರತಿನಿಧಿ ಅಭಿಷೇಕ ನಾಯ್ಕ  ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...