ಭಟ್ಕಳ: ನಿರಂತರ ಪ್ರಯತ್ನದಿಂದ ಸಾಧಕರಾಗಬಹು-ಸುನಿಲ್ ನಾಯ್ಕ

Source: sonews | By sub editor | Published on 22nd July 2018, 11:09 PM | Coastal News | Don't Miss |

ಭಟ್ಕಳ:  ಸಾಧನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಾಧನೆ ಯಾರ ಸೊತ್ತಲ್ಲ. ಸತತ ಪ್ರಯತ್ನದಿಂದ ಸಾಧನೆಯನ್ನು ಮಾಡಬಹುದು ಎಂದು ಭಟ್ಕಳ ಶಾಸಕ ಸುನಿಲ್ ನಾಯ್ಕ ಹೇಳಿದರು.

ಅವರು ರವಿವಾರದದಂದು ಬೆಳಿಗ್ಗೆ  ನಗರದ  ಆಸರಕೇರಿಯ ಗುರುಮಠದ ಸಬಾಭವನದಲ್ಲಿ  ನಾಮಧಾರಿ ಸಮಾಜದ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ನಾಮಧಾರಿ ಸಮಾಜದ ವಿದ್ಯಾರ್ಥಿಗಳು ಇಂದು ಅನೇಕ ಕ್ಷೇತ್ರಗಳಲ್ಲಿ ಸಾಧನೆಯನ್ನು ತೋರುತ್ತಿದ್ದಾರೆ ಇದು ಉತ್ತಮ ಬೆಳವಣಿಗೆಯಾಗಿದೆ. ಸಮಾಜದಲ್ಲಿ ಹಿಂದುಳಿದವವರನ್ನು ಮೇಲಕ್ಕೆತ್ತುವ ಕೆಲಸ ನಮ್ಮ ಸಮಾಜದ ಹಿರಿಯರಿಂದಾಗಬೇಕು ಎಂದ ಅವರು ಸಮಾಜದ ಏಳಿಗೆಗೆ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದ ಅವರು  ಮುಂದೆ ಹೋಗುವವರು ಹಿಂದಿನವರನ್ನು ಕರೆದುಕೊಂಡು ಹೋಗುವುದೇ ನನ್ನ ದೃಷ್ಟಿಯಲ್ಲಿ ಸಮಾಜದ ಅಭಿವೃದ್ದಿ ನಾವು ಸಮಾಜದಲ್ಲಿ ಏಣಿಯಾಗಿರಬೇಕೇ ಹೊರತು ತೂಗುವ ತೊಟ್ಟಿಲಾಗಬಾರದು.  .ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಇತರ ಕ್ಷೇತ್ರದಲ್ಲೂ ಸಾಧನೆ ಮಾಡುವವರನ್ನು ಗುರುತಿಸಿ ಗೌವವಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ . ಸಮಾಜದ ಅಭಿವೃದ್ದಿಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ  ಯಾವತ್ತೂ ಭಾಗಿಯಾಗುವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹೈಕೋರ್ಟ ನ್ಯಾಯವಾದಿ ನಾಗೇಂದ್ರ ನಾಯ್ಕ ಮಾತನಾಡಿ ಸಮಾಜದ ಯುವಕರು ಉತ್ತಮ ಕೆಲಸ ಮಾಡಲು ಮುನ್ನುಗ್ಗುವ ಗುಣವನ್ನು ತೋರಬೇಕು ಎಂದರಲ್ಲದೇ  ಸಮಾಜದ ವತಿಯಿಂದ  ಶಿಕ್ಷಣ ಸಂಸ್ಥೆ ಸ್ಥಾಪಿಸಲು  ಎಲ್ಲರೂ ರಾಜಕೀಯೇತರವಾಗಿ ಬೆಂಬಲ ನೀಡಬೇಕು ಎಂದರಲ್ಲದೇ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ತನ್ನ ಸಹಕಾರ ಯಾವತ್ತೂ ಇದೆ ಎಂದರು. 

ಇನ್ನೋರ್ವ ಅತಿಥಿಯಾಗಿ ಚಲನಚಿತ್ರ ನಿರ್ದೇಶಕ ಮೋಹನ ನಾಯ್ಕ ಮಾತನಾಡಿ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉತ್ತಮವಾದ ಜೀವನ ನಡೆಸಬಹುದು ಎಂದರು. ನಾಮಧಾರಿ ಅಬಿವೃದ್ದಿ ಸಂಘದ ಅಧ್ಯಕ್ಷ ಎಂ.ಆರ್. ನಾಯ್ಕ ಅಧ್ಕಕ್ಷತೆ ವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕ ಸುನೀಲ್ ನಾಯ್ಕರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು.ಬೆಂಗಳೂರಿನಲ್ಲಿ ಪುಷ್ಫೋದ್ಯಮದಲ್ಲಿ ತೊಡಗಿಕೊಂಡು ಸಾಧನೆ ಮಾಡಿದ ನ್ಯಾಯವಾದಿ ನಾಗೇಂದ್ರ ನಾಯ್ಕ ಹಾಗೂ ಚಲನಚಿತ್ರದಲ್ಲಿ ನಿರ್ದೇಶಕರಾಗಿ ಸಾಧನೆ ಮಾಡಿದ ಮೋಹನ ನಾಯ್ಕ,ಬೆಳಕೆ , ಕ್ರೀಡೆಯಲ್ಲಿ ರಾಷ್ಟ್ರಮಟ್ಟದ  ಸಾಧನೆ ಮಾಡಿದ ಶಿವಾನಂದ ಭಾಸ್ಕರ ನಾಯ್ಕ, ವಿಜ್ಞಾನ ಮತ್ತು ವಸ್ತು ಪ್ರದರ್ಶನದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ 8 ನೇ ತರಗತಿಯ ವಿದ್ಯಾರ್ತಿ  ಮಧು ಮಂಜುನಾಥ ನಾಯ್ಕ, ಧಾರವಾಡದ ವಿಶ್ವವಿದ್ಯಾಲಯದಲ್ಲೇ ಇಂಜನೀಯರಿಂಗ ವಿಭಾಗದಲ್ಲಿ  ಅತಿ ಹೆಚ್ಚ ಅಂಕ ಪಡೆದ  ವಿದ್ಯಾರ್ಥಿನಿ ಸ್ನೇಹಾ ಪಾಂಡು ನಾಯ್ಕ, ತಬಲಾದಲ್ಲಿ ಸಾಧನೆ ಮಾಡಿದ  ಭವಿನಕುಮಾರ    ಇವರನ್ನು  ವೇದಿಕೆಯಲ್ಲಿ ಸನ್ಮಾನಿಸಲಾಯಿತು.  

ಭಟ್ಕಳ ವ್ಯಾಪ್ತಿಯ 18 ಕೂಟಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಾರಂಭದಲ್ಲಿ ಕುಮಾರಿ ಸಹನಾ ನಾಯ್ಕ ಪ್ರಾರ್ಥನೆ ಹಾಡಿದರು. ಎಸ್.ಎಂ. ನಾಯ್ಕ ಸ್ವಾಗತಿಸಿದರು. ಕೆ.ಆರ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮವನ್ನು ಗಂಗಾಧರ ನಾಯ್ಕ, ನಾರಾಯಣ ನಾಯ್ಕ ನಿರ್ವಹಿಸಿದರು. ಮಂಜುನಾಥ ನಾಯ್ಕ ಹಾಗೂ ರಮ್ಯಾ ನಾಯ್ಕ ಸಹಕರಿಸಿದರು.   ಶ್ರೀಧರ ನಾಯ್ಕ ವಂದಿಸಿದರು.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...