ನೂರು ವರ್ಷದ ಸಾಧನೆಗೆ ತೃಪ್ತಿಪಟ್ಟುಕೊಳ್ಳದೇ ಸ್ಥಾಂಪಕರ ಕನಸನ್ನು ನನಸಾಗಿಲು ಪಣ ತೊಡಬೇಕು 

Source: sonews | By Staff Correspondent | Published on 5th January 2019, 6:19 PM | Coastal News | State News | Don't Miss |

* ಅಂಜುಮನ್ ಶತಮಾನೋತ್ಸವ ಸಮಾರಂಭದಲ್ಲಿ ಮೌಲಾನ ವಸ್ತಾನ್ವಿ ಕರೆ

ಭಟ್ಕಳ: ಅಂಜುಮನ್ ಸಂಸ್ಥೆಯ ನೂರು ವರ್ಷಗಳ ಸಾಧನೆ ತೃಪ್ತಿ ತಂದರೂ ಇಷ್ಟಕ್ಕೆ ಸುಮ್ಮನೆ ಕೂಡದೇ ಸಂಸ್ಥಾಪಕರು ಕಂಡ ಕನಸುಗಳನ್ನು ನನಸಾಗಿವಲ್ಲಿ ಸಂಸ್ಥೆಯ ಮುಖಂಡರು ಪಣ ತೊಡಬೇಕು ಎಂದು ಜಾಮಿಯಾ ಇಸ್ಲಾಮಿಯಾ ಇಶಾತುಲ್ ಉಲೂಮ್ ಅಧ್ಯಕ್ಷ ಹಝರತ್ ಮೌಲಾನ ಗುಲಾಂ ಮುಹಮ್ಮದ್ ವಸ್ತಾನ್ವಿ ಕರೆ ನೀಡಿದರು. 

ಅವರು ಇಲ್ಲಿನ ಅಂಜುಮನಾಬಾದ್ ಕ್ಯಾಂಪಸ್ ನಲ್ಲಿ ಏರ್ಪಡಿಸಿದ್ದ ಅಂಜುಮನ್ ಶತಮಾನೋತ್ಸವ ಸಮಾರಂಭದ ಬೃಹತ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಸಮುದಾಯಗಳ ಅಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದ್ದು ಅಂಜುಮನ್ ಸಂಸ್ಥೆ ಇಲ್ಲಿನ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದೆ ಕೇವಲ ಪದವಿ ಕಾಲೇಜುಗಳೀಗೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಗುರಿಯೊಂದಿಗೆ ಸಂಸ್ಥೆಯ ಮುಂದಡಿ ಇಡಬೇಕೆಂದು ಅವರು ಕರೆ ನೀಡಿದರು. ಸಮಾಜದ ಆರ್ಥಿಕತೆಯನ್ನು ಗಟ್ಟಿಗೊಳಿಸುವಲ್ಲಿ ಅಂಜುಮನ್ ಮಹತ್ತರ ಪಾತ್ರವಹಿಸಿದೆ ಎಂದ ಅವರು, ಅಂಜುಮನ್ ಶಿಕ್ಷಣ ಸಂಸ್ಥೆಗಳಿಂದ ಪಾರಂಗತ ಸಾವಿರಾರು ಮಂದಿ ದೇಶವಿದೇಶದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ, ನೂರು ವರ್ಷಗಳ ಹಿಂದೆ ಮುಸ್ಲಿಮ ಅಲ್ಪಸಂಖ್ಯಾತರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಬೇಕು ಎಂಬ ಕಲ್ಪನೆ ಮೂಡಿದ್ದೇ ಒಂದು ಪವಾಡದಂತಿದ್ದು ಇಂದಿನ ದಿನಗಳಲ್ಲಿ ಅದು ಹೆಮ್ಮರವಾಗಿ ಬೆಳೆದು ನಿಂತಿದೆ. ಶಿಕ್ಷಣ ಬಗ್ಗೆ ಯೋಚಿಸುವುದೇ ಒಂದು ವಿಷಯವಾಗಿತ್ತು, ಮಹಿಳೆಯರ ಶಿಕ್ಷಣದ ಬಗ್ಗೆಯೂ ಅವರು ಅಂದು ಚಿಂತಿಸಿದ್ದು ನಿಜಕ್ಕೂ ಅವರನ್ನು ನಾನು ಸ್ಮರಿಸಲೇಬೇಕು. ಉತ್ತರಕನ್ನಡ ಜಿಲ್ಲೆಯಲ್ಲೇ ಅತ್ಯಧಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ ಕೀರ್ತಿ ಅಂಜುಮನ್ ಸಂಸ್ಥೆಗೆ ಸಲ್ಲುತ್ತದೆ ಎಂದರು. ಎಚ್.ಆರ್.ಡಿ ಇಲಾಖೆಯ ವರದಿಯಂತೆ ಮುಸ್ಲಿಮರಲ್ಲಿ ಶಿಕ್ಷಣದ ರೇಖೆಯ ಅತಿಕಡಿಮೆಯಾಗಿದ್ದು ಇತ್ತಿಚೆಗೆ ಅದು ಬದಲಾವಣೆಯಾಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಇನ್ನು ಬಹಳಷ್ಟು ಅಭಿಯಾಗಬೇಕಿದೆ. ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದ್ದು ಮಹಿಳಾ ಶಿಕ್ಷಣಕ್ಕೂ ಆಧ್ಯತೆ ನೀಡಬೇಕು ಎಂದರು. 

ನಗರಾಭಿವೃದ್ಧಿ ಸಚಿವ ಯು.ಟಿ. ಕಾದರ್ ಮಾತನಾಡಿ, ವಿದ್ಯಾರ್ಥಿ ಸಮುದಾಯ ಬಲಿಷ್ಠವಾದಾಗ ದೇಶಬಲಿಷ್ಠವಾಗೊಳ್ಳುತ್ತದೆ. ಯುವಜನತೆ ದೇಶದ ಸಂಪತ್ತಾಗಿದ್ದು ಉತ್ತಮ ವಿದ್ಯಾರ್ಥಿಗಳ ನಿರ್ಮಾಣ ಶಿಕ್ಷಣ ಸಂಸ್ಥಗಳಿಂದಾಗಬೇಕು. ಅಂಜುಮನ್ ಸಂಸ್ಥೆ ಕಳೆದ ನೂರು ವರ್ಷಗಳಲ್ಲಿ ಮೌಲ್ಯಯುತ, ಮಾನವೀಯ ಶಿಕ್ಷಣಕ್ಕ ಒತ್ತು ನೀಡಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಭಟ್ಕಳಕ್ಕೂ ದ.ಕ. ಜಿಲ್ಲೆಗೆ ಭಾವನಾತ್ಮಕ ಸಂಬಂಧವಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಂಡವಾಳ ಹೂಡುವುದರ ಮೂಲಕ ಆರ್ಥಿಕ ಸದೃಢತೆಗೆ ಕಾರಣವಾಗಿದ್ದಾರೆ ಎಂದ ಅವರು ಭಟ್ಕಳದ ಒಳಚರಂಡಿ ವ್ಯವಸ್ಥೆ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಈಗಾಗಲೆ ನನ್ನ ಇಲಾಖೆಯಿಂದ 110ಕೋಟಿ ರೂ ಮಂಜೂರಿಯಾಗಿದ್ದು ಮುಂದಿನ ದಿನಗಳಲ್ಲಿ ಅನುದಾನವೂ ಬಿಡುಗಡೆಯಾಗಲಿದೆ ಎಂದರು. 

ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಟ್ ಮಾತನಾಡಿ,ಅಂಜುಮ್ನ ಸಂಸ್ಥೆ ನೂರು ವರ್ಷಪೂರೈಸಿದ್ದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಮುಸ್ಲಿಮ ಸಮುದಾಯದಲ್ಲಿ ಶಿಕ್ಷಣದ ಆಲೋಚನೆ ಮಾಡುವುದು ಕೂಡ ಕಷ್ಟವಾಗಿರುವ ಕಾಲದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟುಹಾಕಿ ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಿರುವುದು ಒಂದು ದೊಡ್ಡ ಸಾಧನೆ ಎಂದರು. ರಾಜ್ಯದಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ದಿನದಿನಕ್ಕೂ ಬೆಳೆಯುತ್ತಿದ್ದು ಮುಸ್ಲಿಮ ಸಮುದಾಯ ಅಭಿವೃದ್ಧಿಗಾಗಿ ಬಹಳಷ್ಟು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳಬೇಕಾಗಿದೆ. ನಮ್ಮ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಯೋಚನೆ ಮಾಡುವಂತಹ ಸ್ಥಿತಿಗೆ ತಲುಪುತ್ತಿದ್ದೇವೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕ್ಷಣವನ್ನು ಮೊಟಕುಗೊಳಿಸುವ ಎಷ್ಟೋ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದಲೇ ಪಿಯುಸಿ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಾಸಕ ಸುನಿಲ್ ನಾಯ್ಕ ಮಾತನಾಡಿ, ನಾನು ಅಂಜುಮನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ಮತ್ತೊಂದು ಸಂತೋಷದ ವಿಚಾರವೆಂದರೆ ನಾನು ಶಾಸಕನಾಗಿರುವ ವರ್ಷವೇ ನನ್ನ ಈ ಸಂಸ್ಥೆ ನೂರು ವರ್ಷ ಪೂರೈಸಿದೆ ಇದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದರು. ಅನೇಕರು ಈ ಸಂಸ್ಥೆಯಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಹೋಗಿದ್ದಾರೆ. ಇವರು ಯಾವತ್ತೂ ಕೂಡ ಹಣ ಮಾಡುವ ಕಡೆಗೆ ಗಮನ ನೀಡದೆ ಕೇವಲ ಶಿಕ್ಷಣ ಒಂದೇ ಗುರಿಯಾಗಿಸಿಕೊಂಡಿದೆ. ನಾನು ವಿದ್ಯಾರ್ಥಿಯಾಗಿದ್ದಾಗ 6ತಿಂಗಳ ವರೆಗೆ ಕಾಲೇಜ್ ಫೀ ನೀಡದೆ ಇದ್ದರೂ ನನಗೆ ಶಿಕ್ಷಣ ಪಡೆಯಲು ಅವಕಾಶ ನೀಡಿತು. ಇದು ಕೇವಲ ಒಂದೇ ಕೋಮಿನವರು ಕಲಿತ ಸಂಸ್ಥೆಯಲ್ಲ. ಇಲ್ಲಿ ಎಲ್ಲ ಸಮುದಾಯವರು ಶಿಕ್ಷಣಪಡೆದಿದ್ದಾರೆ ಇಂತಹ ಸಂಸ್ಥೆಗೆ ನನ್ನ ಸಹಕಾರ ಯಾವತ್ತೂ ಇದೆ ಎಂದರು. 

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಜುಕಾಕೋ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಸಂಸ್ಥೆಯ ಬೆಳವಣೆಗೆ ಕುರಿತು ಮಾತನಾಡಿದರು. 

ಶತಮಾನೋತ್ಸವ ಸಮಾರಂಭದ ಸಂಚಾಲಕ ಎಂ.ಜೆ.ಅಬ್ದುಲ್ ರಖೀಬ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮರ್ಕಝಿ ಖಲೀಫಾ ಜಮಾಅತುಲು ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಉಪನ್ಯಾಸ ನೀಡಿದರು. ಅಂಜುಮನ್ ಪಿ.ಯು.ಕಾಲೇಜ್ ಉಪನ್ಯಾಸಕ ಅಬ್ದುಲ್ ರವೂಫ್ ಸವಣೂರು ಅತಿಥಿಗಳನ್ನು ಪರಿಚಯಿಸಿದರು. 

ವೇದಿಕೆಯಲ್ಲಿ  ಸಂಸ್ಥೆಯ ಮಾಜಿ ಅಧ್ಯಕ್ಷ ಡಿ.ಎಚ್.ಶಬ್ಬರ್ ಸಾಹೇಬ್, ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝೀ ಮೌಲಾನ ಇಕ್ಬಾಲ್ ಮುಲ್ಲಾ ನದ್ವಿ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಖಾಝೀಯಾ, ಝಾಹಿದ್ ರುಕ್ನುದ್ದೀನ್, ಮೊಹಸಿನ್ ಶಾಬಂದ್ರಿ, ಇಸ್ಹಾಖ್ ಶಾಬಂದ್ರಿ, ಮಾಜಿ ಶಾಸಕ ಜೆ.ಡಿ.ನಾಯ್ಕ, ಸೈಯ್ಯದ್ ಅಬ್ದುಲ್ ರಹೀಮ್ ಬಾತಿನ್, ಎಸ್.ಎಂ.ಸೈಯ್ಯದ್ ಅಬ್ದುಲ್ ಅಝೀಮ್ ಅಂಬಾರಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ 70 ಮಂದಿ  ಸಿಬ್ಬಂಧಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.  


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...