ಭಟ್ಕಳ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ವೇದಿಕೆ ಜನನಿ 2018 ರ ಉದ್ಘಾಟನಾ ಸಮಾರಂಭ

Source: sonews | By Staff Correspondent | Published on 31st October 2018, 5:05 PM | Coastal News |

ಭಟ್ಕಳ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ವೇದಿಕೆ ಜನನಿ 2018 ರ ಉದ್ಘಾಟನಾ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು .

ಕಾರ್ಯಕ್ರಮ  ಉದ್ಘಾಟಿಸಿ ಆರ್. ಎನ್. ಎಸ್ ಪಾಲಿಟೆಕ್ನಿಕ್‍ನ ಉಪ ಪ್ರಾಚಾರ್ಯ ಕೆ. ಮರಿಸ್ವಾಮಿ  ಮಾತನಾಡುತ್ತ ಕನ್ನಡ ಬಹು ಪ್ರಾಚೀನ ಭಾಷೆ, ಕನ್ನಡಕ್ಕೆ  2000 ವರ್ಷಗಳ ಇತಿಹಾಸ ಇದೆ. 12ನೆ ಶತಮಾನದಲ್ಲಿ ಬಸವಣ್ಣ ಮತ್ತು ಇತರ ರಾಜ್ಯದಿಂದ ಬಂದ  ವಚನಕಾರರು ತಮ್ಮ ಅಭಿವ್ಯಕ್ತಿಗೆ ಕನ್ನಡವನ್ನೇ ಬಳಸಿ ಕನ್ನಡ ಸತ್ವವನ್ನು  ವಚನಗಳ ಮೂಲಕ ಮೊದಲು ತೋರಿಸಿಕೊಟ್ಟರು .
     
ಕರ್ನಾಟಕದಲ್ಲಿ ಒಂದು ಸರ್ವೆ ಪ್ರಕಾರ 7 ಲಕ್ಷ ಕೈಗಾರಿಕೆಗಳಿವೆ  ಪ್ರತಿಯೊಂದು ಕಂಪನಿಯಲ್ಲಿ ಕನಿಷ್ಠ 3 ರಿಂದ 5 ಜನ ಕನ್ನಡಿಗರಿಗೆ ಕೆಲಸ ಕೊಟ್ಟರೆ 21ರಿಂದ 35 ಲಕ್ಷ ಕನ್ನಡಿಗರಿಗೆ ಉದ್ಯೋಗ ದೋರಕುತ್ತದೆ. ಉದ್ಯಮಿಗಳು ಕನ್ನಡಿಗರಿಗೆ ಕೆಲಸ ನೀಡುವ ಮನಸ್ಸು ಮಾಡಬೇಕು. ಕನ್ನಡಿಗರು  ಹೆಚ್ಚು ವೃತ್ತಿ ಕೌಶಲ್ಯತೆ ಹೊಂದಿದಾಗ ಸುಲಭವಾಗಿ ಉದ್ಯೋಗ ಪಡೆಯಬಹುದೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಮ್.ಎ.ಬಾವಿಕಟ್ಟಿ  ಮಾತನಾಡಿ,  ವಿದ್ಯಾರ್ಥಿಗಳ ಈ ಕನ್ನಡ ವೇದಿಕೆಗೆ ನಮ್ಮ ಸಂಸ್ಥೆಯ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮತ್ತೋರ್ವ ಅತಿಥಿ ಸಂಸ್ಥೆಯ ಉಪ ಪ್ರಾಚಾರ್ಯರಾದ ಎಚ್.ಎಮ್. ಪಾಲಚಂದ್ರ ರವರು ಕನ್ನಡ ನಾಡುನುಡಿಯ ಬಗ್ಗೆ ಮಾತನಾಡಿದರು.
        
ಕನ್ನಡ ವೇದಿಕೆ ಸಂಚಾಲಕರಾದ  ಡಾ. ಪದ್ಮಯ್ಯ ನಾಯ್ಕ ಮಾತನಾಡುತ್ತ  ಈ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಕನ್ನಡ ವೇದಿಕೆ ಮೂಲಕ  ಕನ್ನಡದ ಕಂಪನ್ನು  ಪಸರಿಸುವಂತೆ ಹಾಗೂ ಜನನಿ ಬಗ್ಗೆ ಜಾಗೃತಿ ಮೂಡಿಸಿದರು. 

ಗೌರಿ ಬಲಸೆ ಮತ್ತು ಭೂಮಿಕಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವಿಲಾಸ ನಾಯ್ಕ  ವಂದಿಸಿದರು. ಇದೆ ಸಂದರ್ಭದಲ್ಲಿ  ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೇಡಲಾಯಿತು.
 
   

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...