ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಮೌಲಾನ ಆಝಾದ್ ಜನ್ಮದಿನಾಚರಣೆ

Source: sonews | By Staff Correspondent | Published on 12th November 2018, 6:16 PM | Coastal News |

ಭಟ್ಕಳ: ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವಾ ಮೌಲಾನ ಅಬುಲ್ ಕಲಾಂ ಅಝಾದ್ ಜನ್ಮದಿನಾಚರಣೆಯ ಅಂಗವಾಗಿ ನಡೆಯುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಇಲ್ಲಿನ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ನ.11 ರಂದು ನಡೆಯಿತು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಶಮ್ಸುದ್ದೀನ್ ಶೇಖ್, ಮೌಲಾನ ಅಬುಲ್ ಕಲಾಂ ಆಝಾದ್‍ರ ಶೈಕ್ಷಣಿಕ ಸಾಧನೆ, ಅವರ ಬದುಕಿನ ಕುರಿತಂತೆ ಬೆಳಕು ಚೆಲ್ಲುತ್ತ, ಅವರೊಬ್ಬ ಶಿಕ್ಷಣತಜ್ಞರಾಗಿದ್ದರು ಎಂದರು. ಇಂತಹ ಮಹಾನ್ ವ್ಯಕ್ತಿಯ ಜೀವನಸಾಧನೆಗಳನ್ನು ಅರಿತು ಅವರಂತೆ ನಾವು ಬದುಕುವುದನ್ನು ಕಲಿಯಬೇಕು ಎಂದರು.   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯಾದ್ಯಾಪಕ ಶಬ್ಬಿರ್ ಆಹ್ಮದ್ ದಫೆದಾರ್,ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. 

ಶಿಕ್ಷಕ ಅಬ್ದುಲ್ ರಷೀದ್ ಮಿರ್ಜಾನ್ಕರ್ ಮಾತನಾಡಿ, ಆಝಾದರು ದೇಶದ ಸ್ವಾತಂತ್ಯ್ರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು. 

ನೂರ್ ಆಹ್ಮದ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ವೇದಿಕೆಯಲ್ಲಿ ಮುಹಿದ್ದೀನ್ ಖತ್ತಾಲಿ, ಉಪಸ್ಥಿತರಿದ್ದರು. ಅಬ್ದುಲ್ ಹಫೀಝ್ ನದ್ವಿ ಕಾರ್ಯಕ್ರಮ ನಿರೂಪಿಸಿದರು. 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮಫಾಝ್ ಆಹ್ಮದ್ ಇಕ್ಕೇರಿ, ಮುಹಮ್ಮದ್ ಜವಾಬ್ ನಾಗರಮಠ್, ಖತೀಬ್ ಆಹ್ಮದ್ ಅಕ್ರಮಿ ಮುಂತಾದವರು ಮೌಲಾನ ಅಝಾದ್ ಬದುಕು ಮತ್ತು ಸಾಧನೆ ಕುರಿತಂತೆ ವಿಚಾರಗಳನ್ನು ವ್ಯಕ್ತಪಡಿಸಿದರು.  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...