ರಾಷ್ಟ್ರೀಯ ಫೆಸ್ಟ್ ನಲ್ಲಿ ಅಂಜುಮನ್ ಇಂಜಿನೀಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Source: sonews | By Staff Correspondent | Published on 3rd October 2018, 5:06 PM | Coastal News | State News | Don't Miss |

ಭಟ್ಕಳ: ಹುಬ್ಬಳ್ಳಿಯ ಕೆ.ಎಲ್.ಇ. ಟೆಕ್ನೊಲೋಜಿ ಕಾಲೇಜಿನಲ್ಲಿ ಇತ್ತಿಚೆಗೆ ಜರಗಿದ ರಾಷ್ಟ್ರೀಯ ಮಟ್ಟದ ‘ಟೆಕ್ನೊ ಕಲ್ಚರಲ್ ಫೆಸ್ಟ್ ಅದ್ವೈತ್ಯ-2018 ರ ವಿವಿಧ ಸ್ಪರ್ಧೆಗಳಲ್ಲಿ ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೇಯ ಅಂಜುಮನ್ ಇಂಜಿನೀಯರಿಂಗ್ ಕಾಲೇಜ್ ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. 

ದೇಶದ 1100 ಕ್ಕೂ ಅಧಿಕ ಇಂಜಿನೀಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ ಅಂಜುಮನ್ ವಿದ್ಯಾರ್ಥಿಗಳು ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

ಸಿವಿಲ್ ವಿಭಾಗದ ಖಿಝರ್ ಖಲಿಫಾ ‘ಅಟೋ ಕ್ಯಾಡ್ ಸ್ಪರ್ಧೆಯಲ್ಲಿ ಪ್ರಥಮ, ಇಮ್ರಾನ್ ಬಿ.ಕೆ. ದ್ವಿತೀಯಾ, ಬಾಬ್ ದಿ ಬಿಲ್ಡರ್ ಸ್ಪರ್ಧೆಯಲ್ಲಿ ಸವ್ವಾಫ್, ಸಮಾನ್, ಮಫಾಝ್ ಪ್ರಥಮ ಸ್ಥಾನ, ಸೋಯಿಬಾ, ನಾಯಿಲಾ, ಮುಸ್ಕಾನ್ ದ್ವಿತೀಯಾ ಸ್ಥಾನ, ಹಿಂಟ್ ವಿತ್ ಬಿಂಟ್ ಸ್ಪರ್ಧೆಯಲ್ಲಿ ಉಮೈರ್ ಮತ್ತು ಸಿದ್ದೀಖ್ ತೃತೀಯಾ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕ್ವಿಝ್ ಸ್ಪರ್ಧೆಯಲ್ಲಿ ಆಕಿಫ್ ಮತ್ತು ಫೈಹಾನ್ ಪ್ರಥಮ, ನುಮೈರಾ ಮತ್ತು ಇನಾಸ್ ತೃತಿಯಾ ಸ್ಥಾನ, ಪೇಪರ್ ಪ್ರಸೆಂಟೇಶನ್ ಸ್ಪರ್ಧೆಯಲ್ಲಿ ಇನಾಸ್ ಮೊಹತೆಶಮ್ ತೃತೀಯಾ, ಟೆಕ್ಥಾನ್ ಸ್ಪರ್ಧೆಯಲ್ಲಿ ನುಮೈರಾ ಮತ್ತು ಇನಾಸ್ ತೃತೀಯಾ, ಟ್ರೆಸರ್ ಹಂಟ್ ಸ್ಪರ್ಧೆಯಲ್ಲಿ ಕಲೀಮುದ್ದೀನ್, ಆಕಿಬ್, ಅಮೃತಾ, ರಂಜೀತಾ ದ್ವಿತೀಯಾ ಸ್ಥಾನ ಪಡೆದುಕೊಂಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ದಾನಿಯಾ ರುಖಿಯಾ, ತೃತೀಯಾ ಸ್ಥನ, ಅನಸ್ ಅಂಬಾರಿ ದ್ವಿತೀಯಾ, ಯಾಫಿ ಮತ್ತು ಅಯಾಝ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. 

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಫನ್ ಫ್ಯಾಕ್ಟರಿ ಸ್ಪರ್ಧೆಯಲ್ಲಿ ಷಹಾನ್ ಮತ್ತು ಉಮೈರ್ ಪ್ರಥಮ, ಇಬ್ಝಾನ್ ಮತ್ತು ಇತ್ಬಾನ್ ದ್ವಿತೀಯಾ, ಕುಲ್ದೀಪ್ ಮತ್ತು ಝೈಯಾನ್ ತೃತಿಯಾ, ಟೆಕ್ನೋ ಫನ್ಝೀ ಸ್ಪರ್ಧೆಯಲ್ಲಿ ಕುಲ್ದೀಪ್ ಮತ್ತು ಹಾಝಿರಾ ತೃತೀಯಾ ಬಹುಮಾನ ಪಡೆದುಕೊಂಡಿದ್ದಾರೆ.

ಮ್ಯಾಕಾನಿಕಲ್ ವಿಭಾಗದಲ್ಲಿ ಟೆಕ್ನೊ ಕ್ವಿಝ್ ಸ್ಪರ್ಧೆಯಲ್ಲಿ ಅರ್ಫಾತ್ ಇಕ್ಕೇರಿ ಮತ್ತು ಸುಹೈಲ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂಧಿ ವರ್ಗ ಅಭಿನಂದಿಸಿದೆ.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...